ಕರ್ನಾಟಕ

karnataka

ದೇವರಹಿಪ್ಪರಗಿಯಲ್ಲಿ ರಸ್ತೆ ಅಪಘಾತಕ್ಕೆ ಮೂವರು ಬಲಿ

By

Published : Jun 16, 2019, 11:24 PM IST

ಪಿಕಪ್‌ ವಾಹನ ಹಾಗೂ ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿದ್ದು, ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.

ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ

ವಿಜಯಪುರ:ಪಿಕಪ್‌ ವಾಹನ ಹಾಗೂ ಕ್ಯಾಂಟರ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ‌ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಓರ್ವ ಗಾಯಗೊಂಡ ಘಟನೆ ದೇವರಹಿಪ್ಪರಗಿ ಬಳಿ ಸಂಭವಿಸಿದೆ.

ಸಿಂದಗಿ‌ ಪಟ್ಟಣದ ಸುಭಾಸ ದೇವರನಾವದಗಿ (40), ಯಂಕಪ್ಪ ಕಲಾಲ (37) ಹಾಗೂ ಮೋಹನ ಸಾಳುಂಕೆ (40) ಸ್ಥಳದಲ್ಲಿಯೇ ‌ಮೃತಪಟ್ಟವರು. ಅಬ್ಬಾಸಲಿ‌ ಕತಿಕ್ ಎಂಬಾತ ಗಾಯಗೊಂಡಿದ್ದು, ಆತನನ್ನು ಸಿಂದಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವರಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ:
ಕಂಟೇನರ್ ಲಾರಿ ಹಾಗೂ ಏಸರ್ ಪಿಕಪ್ ನಡುವೆ ಮುಖಾಮುಖಿ‌ ಡಿಕ್ಕಿ
ಏಸರ್ ನಲ್ಲಿದ್ದ ಮೂವರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ವಿಜಯಪುರ ‌ಜಿಲ್ಲೆ ದೇವರಹಿಪ್ಪರಗಿ ಬಳಿಯ ಎನ್ಎಚ್ 218 ರಲ್ಲಿ ಘಟನೆ ನಡೆದಿದೆ.
ಮೃತರು ಸಿಂದಗಿ ಪಟ್ಟಣದ ಮೂಲದವರು
ಮೃತರು ಹೆಸರು ಸಧ್ಯ ಲಭ್ಯವಿಲ್ಲಾ
ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ

TAGGED:

ABOUT THE AUTHOR

...view details