ಕರ್ನಾಟಕ

karnataka

ಡೋಣಿ ಸೇತುವೆ ಕುಸಿಯುವ ಭೀತಿ: ಹಳೆ ಸೇತುವೆ ಮೇಲೆ ಸಂಚಾರಕ್ಕೆ ಸಿದ್ಧತೆ

By

Published : Sep 28, 2021, 10:10 AM IST

ಡೋಣಿ ಸೇತುವೆ 15 ಮೀಟರ್‌ ನಷ್ಟು ಭಾಗ ಕುಸಿಯಲು ತೊಡಗಿದ್ದು, ಸೇತುವೆ ಮೇಲೆ ಸಂಚಾರವನ್ನು ಈಗಾಗಲೇ ಬಂದ್ ಮಾಡಲಾಗಿದೆ. ಎರಡು‌ ದಿನಗಳಲ್ಲಿ ಹಳೆಯ ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಸಿದ್ಧತೆ ನಡೆಯುತ್ತಿದೆ.

doni bridge
ಡೋಣಿ ಸೇತುವೆ

ವಿಜಯಪುರ: ತಾಳಿಕೋಟೆ ಪ್ರವೇಶಿಸುವ ಡೋಣಿ ನದಿಯ ಮೇಲಿನ ದಶಕಗಳಷ್ಟು ಹಳೆಯದಾದ ಸೇತುವೆ 15 ಮೀಟರ್‌ ನಷ್ಟು ಭಾಗ ಕುಸಿಯಲು ತೊಡಗಿದೆ. ಈ ಹಿನ್ನೆಲೆ, ಮುನ್ನೆಚ್ಚರಿಕಾ ಕ್ರಮವಾಗಿ ಸೇತುವೆ ಮೇಲೆ ಸಂಚಾರವನ್ನು ಈಗಾಗಲೇ ಬಂದ್ ಮಾಡಲಾಗಿದೆ. ದೆಹಲಿಯಿಂದ ಇಬ್ಬರು ಇಂಜಿನಿಯರ್​​​ಗಳು ಇಂದು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಜೊತೆಗೆ ಬೆಂಗಳೂರಿನಿಂದ ಹಿರಿಯ ಅಧಿಕಾರಿಗಳು ಆಗಮಿಸುವ ನಿರೀಕ್ಷೆಯಲ್ಲಿ ಇಲ್ಲಿನ ಅಧಿಕಾರಿಗಳಿದ್ದಾರೆ.

ಡೋಣಿ ಸೇತುವೆ ಕುಸಿಯುವ ಭೀತಿ: ಹಳೆ ಸೇತುವೆ ಮೇಲೆ ಸಂಚಾರಕ್ಕೆ ಸಿದ್ಧತೆ

ಇಂಜಿನಿಯರ್​ಗಳು ಆಗಮಿಸಿ ಪರಿಶೀಲನೆ ಬಳಿಕ ಸೇತುವೆ ಯಾವ ಸ್ಥಿತಿಯಲ್ಲಿದೆ ಅನ್ನೋದರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಪರಿಶೀಲನೆ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ಸದ್ಯ ಸೇತುವೆ ಪಕ್ಕದಲ್ಲಿರುವ ಹಳೆಯ ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ಹಳೆಯ ಸೇತುವೆ ಮೇಲೆ ಸಂಚಾರಕ್ಕೆ ಅನುವು ಆಗುವಂತೆ ರಸ್ತೆ‌ ದುರಸ್ತಿಯನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

ಇದನ್ನೂ ಓದಿ:ಡೋಣಿ ಸೇತುವೆ ಕುಸಿತದ ಭಯ : ವಾಹನ ಸಂಚಾರ ಬಂದ್

ಹಳೆಯ ಸೇತುವೆ ಗಟ್ಟಿಮುಟ್ಟಾಗಿದ್ದು, ಯಾವುದೇ ಅಪಾಯವಿಲ್ಲ. ಆದರೆ, ಕೆಳ ಹಂತದಲ್ಲಿದೆ. ಸ್ವಲ್ಪ ಮಳೆಯಾದರೂ ಸೇತುವೆ ಜಲಾವೃತವಾಗಲಿದೆ.‌ ಇದೇ ಕಾರಣಕ್ಕೆ ಸೇತುವೆ ಎತ್ತರ ಹೆಚ್ಚಿಸಲು ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆದಿತ್ತು.

ಡೋಣಿ‌ ನದಿಗೆ ಹೆಚ್ಚಿನ ನೀರು ಬರದಿದ್ದರೆ ಇಲ್ಲಿ ಸಂಚಾರ ಮಾಡಬಹುದು. ಸದ್ಯ ನೀರು ಕಡಿಮೆ ಆಗಿರುವ ಕಾರಣ ಹಳೆ ಸೇತುವೆ ಮೇಲೆ ಸಂಚಾರಕ್ಕೆ ತೊಂದರೆ ಇಲ್ಲ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಎರಡು‌ ದಿನಗಳಲ್ಲಿ ಹಳೆಯ ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಸಿದ್ಧತೆಗಾಗಿ ಅಧಿಕಾರಿಗಳು ತಜ್ಞರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ABOUT THE AUTHOR

...view details