ಕರ್ನಾಟಕ

karnataka

ಮನಗೂಳಿ ಪುತ್ರರ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಸಂಸದ ಪ್ರಜ್ವಲ್ ರೇವಣ್ಣ

By

Published : Oct 22, 2021, 12:14 PM IST

ದಿ.ಮನಗೂಳಿ ಅವರಿಗೆ 7 ಬಾರಿ ಟಿಕೆಟ್ ಕೊಟ್ಟಿದ್ದೇವೆ. ಎರಡು ಬಾರಿ ಗೆದ್ದಾಗಲೂ ಅವರನ್ನು ಮಂತ್ರಿ ಮಾಡಿದ್ದೇವೆ. ಮತ್ತೇನು ಮಾಡಬೇಕು? ಎಂದು ಪ್ರಶ್ನಿಸುವ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಅವರು ದಿ. ಮನಗೂಳಿ ಪುತ್ರರ ಮೇಲೆ ವಾಗ್ದಾಳಿ ನಡೆಸಿದರು.

Prajwal Revanna
ಸಂಸದ ಪ್ರಜ್ವಲ್ ರೇವಣ್ಣ

ವಿಜಯಪುರ: ನಾವು ಮನಗೂಳಿಯವರನ್ನು ಮಂತ್ರಿ ಮಾಡಿದ್ದೆವು. ಅದ್ರೆ ಅವರ ಮಕ್ಕಳು ನೋಡಿದ್ರೆ ನಮ್ಮ ಪಕ್ಷ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಹೇಳುತ್ತಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರು ವಾಗ್ದಾಳಿ ನಡೆಸಿದರು.

ಸಂಸದ ಪ್ರಜ್ವಲ್ ರೇವಣ್ಣ

ಸಿಂದಗಿ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಮತಯಾಚನೆಗೆ ಆಗಮಿಸಿದ್ದ ವೇಳೆ ಅವರು ಮಾತನಾಡಿದರು. ಮನಗೂಳಿ ಅವರಿಗೆ 7 ಬಾರಿ ಟಿಕೆಟ್ ಕೊಟ್ಟಿದ್ದೇವೆ. ಎರಡು ಬಾರಿ ಗೆದ್ದಾಗಲೂ ಅವರನ್ನು ಮಂತ್ರಿ ಮಾಡಿದ್ದೇವೆ. ಮತ್ತೇನು ಮಾಡಬೇಕು? ಎಂದರು.

ಕ್ಷೇತ್ರದ ಅಭಿವೃದ್ಧಿಗೆ 920 ಕೋಟಿ ರೂ. ಅನುದಾನ ಕೊಡಲಾಗಿದೆ. ಆ ಅನುದಾನ ಎಷ್ಟು ಬಳಕೆಯಾಗಿದೆ ಎಂದು ಕ್ಷೇತ್ರಕ್ಕೆ ಬೀದಿ ಬೀದಿಗೆ ಹೋದಾಗ ಗೊತ್ತಾಗುತ್ತದೆ. ಅದೆಲ್ಲಾ ನಾವು ಮಾತನಾಡುತ್ತಾ ಹೋದರೆ ಶೋಭೆ ತರುವುದಿಲ್ಲ. ವೇದಿಕೆ ಮೇಲೆ ಇದೆಲ್ಲದರ ಕುರಿತು ನಾವು ಮಾತನಾಡುವುದಕ್ಕೆ ಶುರು ಮಾಡಿದರೆ ಅವರ ವರ್ಚಸ್ಸು​​ ಕಡಿಮೆಯಾಗುತ್ತದೆ. ಚುನಾವಣೆ ಎದುರಿಸುತ್ತಿದ್ದಾರೆ, ಅದನ್ನು ಮೊದಲು ಮಾಡಲಿ ಎಂದು ಹೇಳಿದರು.

'ದೇವರ ಮುಂದೆ ಪ್ರಮಾಣ ಮಾಡಿ ಹೇಳಲಿ':

ಮನಗೂಳಿಗೆ ಸಚಿವ ಸ್ಥಾನ ಕೊಡಲು ಕಾಡಿಸಿದ್ದಾರೆ ಎಂಬ ಮನಗೂಳಿ ಪುತ್ರ ಶಾಂತವೀರ ಮನಗೂಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಚಿವ ಸ್ಥಾನ ಕೊಡಲು ನಾವು ಕಾಡಿಸಿದ್ದೇವೆ ಎಂಬುದನ್ನು ದೇವರ ಮುಂದೆ ಬಂದು ಪ್ರಮಾಣ ಮಾಡಿ ಹೇಳಲಿ ಎಂದು ಸವಾಲು ಹಾಕಿದರು.

ಸಿಂದಗಿಯಲ್ಲಿ ಮನಗೂಳಿ ಅವರು ಸೋಲುತ್ತಾರೆ, ಅವರಿಗೆ ಟಿಕೆಟ್ ಕೊಡಬೇಡಿ ಎಂದು ಹಿಂದೆ ಸಾಕಷ್ಟು ಜನರು ಹೇಳಿದ್ದರು. ಆದರೂ ಸಹಿತ ದೇವೇಗೌಡರು ಮನೆಗೆ ಬಂದು ಅವರಿಗೆ ಟಿಕೆಟ್ ಕೊಟ್ಟರು. ಚುನಾವಣಾ ವೇದಿಕೆ ಮೇಲೆ ಈ ರೀತಿಯ ಹೇಳಿಕೆಗಳನ್ನು ನೀಡಿದರೆ, ನಾನು ಚುನಾವಣಾ ವೇದಿಕೆ ಮೇಲೆ ಎಲ್ಲವನ್ನು ಹೇಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ:ಆನೇಕಲ್​ನಲ್ಲಿ ಡಬಲ್​ ಮರ್ಡರ್: ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಮನಗೂಳಿ ಮಕ್ಕಳಿಗೆ ಇದೊಂದು ವಾರ್ನಿಂಗ್. ಕಾಂಗ್ರೆಸ್​ಗೆ ಹೋದರೆ ಅಧಿಕಾರ ಸಿಗಬಹುದು ಎಂದು ಅಶೋಕ ಮನಗೂಳಿ ಕಾಂಗ್ರೆಸ್​​ಗೆ ಹೋಗಿದ್ದಾರೆ. ಇಲ್ಲಿ ಯಾರೇ ಬಂದು ಪ್ರಚಾರ ಮಾಡಿದರೂ ಅವರು ಗೆಲ್ಲಲ್ಲ. ಅವರು ಅಧಿಕಾರದ ಆಸೆ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ಹೇಳಿದರು.

ABOUT THE AUTHOR

...view details