ಕರ್ನಾಟಕ

karnataka

ಪ್ರವಾಹ ಸಂತ್ರಸ್ತೆ ಕುರಿತ ಭಾವನಾತ್ಮಕ ನೆನಪು ಹಂಚಿಕೊಂಡ ಸಚಿವೆ ಜೊಲ್ಲೆ

By

Published : Aug 9, 2021, 7:49 AM IST

ಕಳೆದ ಎರಡು ದಿನಗಳ ಹಿಂದೆ ಮುದ್ದೇಬಿಹಾಳ ತಾಲ್ಲೂಕಿನ ಕಮಲದಿನ್ನಿ ಗ್ರಾಮಕ್ಕೆ ಜೊಲ್ಲೆ ಭೇಟಿ ನೀಡಿದ್ದು, ಅಲ್ಲಿ ಕಂಡಂತಹ ಮನಮಿಡಿಯುವ ದೃಶ್ಯಕ್ಕೆ ಸ್ಪಂದಿಸಿದ್ದಾರೆ. ಈ ಮುಖಾಂತರ ನೊಂದ ಜೀವಗಳಿಗೆ ಆಸರೆಯಾಗುವ ಕೆಲಸವನ್ನು ಮಾಡೋಣ ಎಂಬ ಸಂದೇಶವನ್ನು ಅವರು ನೀಡಿದರು.

Minister Jolle shared an emotional memory about flood victims
ಪ್ರವಾಹ ಸಂತ್ರಸ್ತೆಯೊಂದಿಗೆ ಭಾವನಾತ್ಮಕ ನೆನಪು ಹಂಚಿಕೊಂಡ ಸಚಿವೆ ಜೊಲ್ಲೆ

ಮುದ್ದೇಬಿಹಾಳ: 'ಹಿರಿಯರನ್ನು ದೂರ ಮಾಡಬೇಡಿ, ಕೊನೆಗಾಲದಲ್ಲೂ ಅವರ ಜೊತೆಗಿರೋಣ...' ಎಂದು ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ತಮ್ಮ ಪ್ರವಾಹ ಪರಿಸ್ಥಿತಿಯ ವೇಳೆ ವೃದ್ಧೆಯ ಕಷ್ಟಕ್ಕೆ ಸ್ಪಂದಿಸಿರುವ ನೆನಪು ಹಂಚಿಕೊಂಡಿದ್ದಾರೆ.

ಸಚಿವೆ ಜೊಲ್ಲೆ ಟ್ವೀಟ್‌

ಕಳೆದ ಎರಡು ದಿನಗಳ ಹಿಂದೆ ಮುದ್ದೇಬಿಹಾಳ ತಾಲ್ಲೂಕಿನ ಕಮಲದಿನ್ನಿ ಗ್ರಾಮದ ಭೇಟಿ ನೀಡಿದ್ದ ಅವರು ಈ ರೀತಿಯಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ದಯನೀಯ ಸ್ಥಿತಿಯಲ್ಲಿರುವ ಅಜ್ಜಿಯನ್ನು ಭೇಟಿ ಮಾಡಿದಾಗ ಅವರ ಸಂಕಷ್ಟ ನೋಡಿ ನಿಜಕ್ಕೂ ಕಣ್ತುಂಬಿ ಬಂತು. ಸುಮಾರು 80 ವರ್ಷದ ಆಸುಪಾಸಿನ ಹನುಮವ್ವ ಸಂಗಪ್ಪ ಕಾಶೀಬಾಯಿ ಎಂಬ ಅಜ್ಜಿಯ ಪಾಲನೆ ಮಾಡಬೇಕಿದ್ದ ಮಕ್ಕಳು, ಮೊಮ್ಮಕ್ಕಳೆಲ್ಲಾ ಮನೆಯಲ್ಲಿ ಬಡತನವಿರುವ ಕಾರಣ ದೂರದೂರಿಗೆ ಕೆಲಸಕ್ಕೆ ಹೋಗಿದ್ದಾರೆ.

ಎಲ್ಲರಿದ್ದೂ ಇಲ್ಲದಂತಿರುವ ಈ ಒಂಟಿ ಹಿರಿ ಜೀವಕ್ಕೆ ಆಸರೆಯಾಗಿರುವ ನದಿ ತೀರದಲ್ಲಿರುವ ಆ ಮನೆ ಕೂಡ ಬೀಳುವ ಹಂತಕ್ಕೆ ತಲುಪಿದೆ. ಅಜ್ಜಿಯ ನೋವಿನ ಮಾತು, ಅಲ್ಲಿನ ಸ್ಥಿತಿ ನೋಡಿ ಮನಸ್ಸು ಭಾರವಾಯಿತು. ನಾನು ನಿಮ್ಮ ಮಗಳಂತೆ ಎಂದು ನೊಂದ ಜೀವಕ್ಕೆ, ಸ್ಥಳದಲ್ಲಿಯೇ ವೈಯುಕ್ತಿಕವಾಗಿ ಹಣಕಾಸಿನ ನೆರವು ನೀಡಿ, ಧೈರ್ಯ ತುಂಬಿ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯವನ್ನು ಅವರಿಗೆ ತಕ್ಷಣ ನೀಡಿ, ಅದನ್ನು ಅವರು ಪಡೆದಿರುವ ಬಗ್ಗೆ ಕೂಡ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಕಷ್ಟಕಾಲದಲ್ಲಿ ನೊಂದ ಜೀವಗಳಿಗೆ ಆಸರೆಯಾಗುವ ಕೆಲಸವನ್ನು ಮಾಡೋಣ ಎಂಬ ಸಂದೇಶವನ್ನು ಸಚಿವೆ ಜೊಲ್ಲೆ ನೀಡಿದ್ದಾರೆ.

ABOUT THE AUTHOR

...view details