ಕರ್ನಾಟಕ

karnataka

ಲಾರಿ -ಕ್ಯಾಂಟರ್ ಮುಖಾಮುಖಿ ಡಿಕ್ಕಿ: ಚಾಲಕ ಸ್ಥಳದಲ್ಲೇ ಸಾವು

By

Published : Mar 4, 2021, 9:21 AM IST

ವಿಜಯಪುರ ಜಿಲ್ಲೆಯ ಕೊಲ್ಹಾರ ಸೇತುವೆ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಲಾರಿ - ಕ್ಯಾಂಟರ್ ಮುಖಾಮುಖಿ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ವಿಜಯಪುರ ರಸ್ತೆ ಅಪಘಾತ
vijayapura road accident

ವಿಜಯಪುರ:ಲಾರಿ - ಕ್ಯಾಂಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಲ್ಹಾರ ಸೇತುವೆ ಬಳಿ ನಡೆದಿದೆ.

ವಿಜಯಪುರ ರಸ್ತೆ ಅಪಘಾತ

ವಿಜಯಪುರ - ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 ಕೊಲ್ಹಾರ ಸೇತುವೆ ಸಮೀಪದ ಕೋರೆಮ್ಮ ದೇವಿ ದೇವಾಲಯದ ಬಳಿ ದುರ್ಘಟನೆ ಸಂಭವಿಸಿದ್ದು, ಟ್ಯಾಂಕರ್​ ಚಾಲಕ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಬಾರ್ಸಿ ತಾಲೂಕಿನ ಪಾನಗಾಂವದ ವಿಕಾಸ ಅಭಿಮಾನ ಸನರೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡೂ ವಾಹನದ ನಡುವೆ ಸಿಕ್ಕಿಕೊಂಡಿದ್ದ ಚಾಲಕನ ಮೃತದೇಹವನ್ನು ಹೊರ ತೆಗೆಯಲು ಕೊಲ್ಹಾರ ಪೊಲೀಸರು ಸೇರಿದಂತೆ ಬೀಳಗಿ, ವಿಜಯಪುರ ಅಗ್ನಿಶಾಮಕ ಸಿಬ್ಬಂದಿ ಸತತ ಐದು ಗಂಟೆ ಕಾರ್ಯಚರಣೆ ನಡೆಸಿದ್ದರು. ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details