ಕರ್ನಾಟಕ

karnataka

ಮುದ್ದೇಬಿಹಾಳ: ಶ್ರೀಶೈಲ, ಮುಂಬೈ ಮಾರ್ಗದಲ್ಲಿ ಬಸ್ ಸಂಚಾರ

By

Published : Apr 9, 2021, 9:58 PM IST

ಮುಂಬೈ ಹಾಗೂ ಶ್ರೀಶೈಲ ಮಾರ್ಗದಲ್ಲಿ ನಾಲ್ಕು ಬಸ್‌ಗಳು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ ಹೇಳಿದರು.

Bus start
Bus start

ಮುದ್ದೇಬಿಹಾಳ: ಸಾರಿಗೆ ಮುಷ್ಕರ ಮೂರನೇ ದಿನ ಪೂರೈಸಿದ್ದು ಮುದ್ದೇಬಿಹಾಳ ಸಾರಿಗೆ ಘಟಕದಿಂದ ಇಂದು ಸಂಜೆಯವರೆಗೆ ಯಾವುದೇ ಬಸ್‌ಗಳು ಸಂಚರಿಸಲಿಲ್ಲ.

ಆದರೆ, ಸಂಜೆಯ ವೇಳೆಗೆ ಮುಂಬೈ ಹಾಗೂ ಶ್ರೀಶೈಲ ಮಾರ್ಗದಲ್ಲಿ ನಾಲ್ಕು ಬಸ್‌ಗಳು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ ಹೇಳಿದರು.

ಇದಕ್ಕೆ ಪುಷ್ಪಿ ನೀಡುವಂತೆ ಸಂಜೆ ವೇಳೆಗೆ ಬಸ್ ನಿಲ್ದಾಣದ ಪ್ಲಾಟ್‌ಫಾರ್‌ಂನಲ್ಲಿ ಮುಂಬೈ ಮಾರ್ಗದಲ್ಲಿ ಸಂಚರಿಸುವ ಬಸ್‌ ಅನ್ನು ನಾರಾಯಣಪುರ ಮಾರ್ಗದಲ್ಲಿ ಸಂಚರಿಸುವ ಫ್ಲಾಟ್‌ಫಾರಂನಲ್ಲಿ ನಿಲುಗಡೆ ಮಾಡಲಾಗಿತ್ತು.

ಅಲ್ಲದೇ ಅಂತಾರಾಜ್ಯಕ್ಕೆ ತೆರಳುವ ಗೋವಾ ಬಸ್ ಕೂಡಾ ನಿಲ್ದಾಣದಲ್ಲಿ ಬಂದು ಪ್ರಯಾಣಿಕರನ್ನು ಇಳಿಸಿ ತೆರಳಿತು. ಖಾಸಗಿ ವಾಹನಗಳ ಮಾಲೀಕರು ಪೊಲೀಸರ ಎಚ್ಚರಿಕೆಗೆ ಮಣಿಯದೇ ತಮ್ಮ ವಸೂಲಿ ಕಾಯಕ ಮುಂದುವರೆಸಿದರು. ಬಸ್ ನಿಲ್ದಾಣದಲ್ಲಿ ಒಂದು ಡಿಆರ್ ವಾಹನವನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ABOUT THE AUTHOR

...view details