ಕರ್ನಾಟಕ

karnataka

ಮುದ್ದೇಬಿಹಾಳದಲ್ಲಿ ಮಧ್ಯರಾತ್ರಿಯೇ ಧ್ವಜಾರೋಹಣ

By

Published : Aug 15, 2021, 6:43 AM IST

ಮುದ್ದೇಬಿಹಾಳದ ಬಸವೇಶ್ವರ ವೃತ್ತದಲ್ಲಿ ಮಧ್ಯರಾತ್ರಿ 12 ಗಂಟೆಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.

muddebihala
ಮುದ್ದೇಬಿಹಾಳದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮುದ್ದೇಬಿಹಾಳ: ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಧ್ಯರಾತ್ರಿ 12 ಗಂಟೆಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.

ಧ್ವಜಾರೋಹಣವನ್ನು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಆರ್.ಐ ಹಿರೇಮಠ ಮಾಡಿದರು. ಸಂಘ ಪರಿವಾರದ ಸದಸ್ಯರು, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಭಾರತೀಯ ಯುವ ಘರ್ಜನೆ ಮತ್ತು ವೀರ್ ಸಾವರ್ಕರ್ ಸೇವಾ ಸಂಘ, ಕಾರ್ಗಿಲ್ ವೀರ ಯೋಧರ ಸ್ಮಾರಕ ನಿರ್ಮಾಣ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮುದ್ದೇಬಿಹಾಳದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ಭಾರತೀಯ ಯುವ ಘರ್ಜನೆ ಸಂಘಟನೆ ಅಧ್ಯಕ್ಷ ಪುನೀತ್​ ಹಿಪ್ಪರಗಿ, ಮುಖಂಡ ಮಹಾಂತೇಶ ಬೂದಿಹಾಳಮಠ, ಆನಂದ ತುಪ್ಪದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ABOUT THE AUTHOR

...view details