ಕರ್ನಾಟಕ

karnataka

ಸಿದ್ಧರಾಮಯ್ಯ ವಿರುದ್ಧ ಕುಮಾರಸ್ವಾಮಿ ಗುಡುಗು: ರಥಯಾತ್ರೆ ಬಗ್ಗೆ ಮಾತನಾಡಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದ ಹೆಚ್​ಡಿಕೆ

By

Published : Jan 22, 2023, 8:17 PM IST

ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಹೇಳಿಕೊಂಡೇ ಅವರು ರಾಜಕಾರಣ ಮಾಡಬೇಕಾಗಿದೆ - ಬಿಜೆಪಿಯವರ ಭ್ರಷ್ಟಾಚಾರಕ್ಕಿಂತ ಕಾಂಗ್ರೆಸ್‌ನವರೇನು ಕಮ್ಮಿ ಇಲ್ಲ - ಪ್ರಜಾಧ್ವನಿ ಅಲ್ಲ ಕಾಂಗ್ರೆಸ್ ಧ್ವನಿ ಎಂದು ಯಾತ್ರೆಗೆ ಹೆಸರಿಡಿ.

hd-kumaraswamy-rant-against-siddaramaiah
ಸಿದ್ಧರಾಮಯ್ಯ ವಿರುದ್ಧ ಹೆಚ್​ಡಿಕೆ ವಾಗ್ದಾಳಿ: ಪಂಚರತ್ನ ರಥಯಾತ್ರೆ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಪರಿಣಾಮ ನೆಟ್ಟಗಿರಲ್ಲ ಹೆಚ್​ಡಿಕೆ ಎಚ್ಚರಿಕೆ

ಸಿದ್ಧರಾಮಯ್ಯ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಮುದ್ದೇಬಿಹಾಳ(ವಿಜಯಪುರ): ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆಗೂ ಮುನ್ನವೇ ಜೆಡಿಎಸ್ ಪಕ್ಷವನ್ನು ವಿಸರ್ಜಿಸುವಂತೆ ನೀಡಿದ ಹೇಳಿಕೆಗೆ ಗರಂ ಆಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಬರೀ ಹಾಡಿದ್ದು ಹಾಡೋ ಕಿಸಬಾಯಿದಾಸ, ಇವರನ್ನು ಕೇಳಿ ನಾನು ಪಕ್ಷವನ್ನು ನಡೆಸಬೇಕಾ? ಎಂದು ಪ್ರಶ್ನಿಸಿದ್ದಾರೆ. ತಾಲೂಕಿನ ಬಳವಾಟ ಗ್ರಾಮದಲ್ಲಿ ಪಂಚರತ್ನ ಯಾತ್ರೆಯ ಗ್ರಾಮ ವಾಸ್ತವ್ಯ ನಡೆಸಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ನಮ್ಮ ಪಕ್ಷದ ಬಗ್ಗೆ ಸಿದ್ದರಾಮಯ್ಯನವರಿಗೆ ಮಾತನಾಡಲು ಸರಕು ಸಿಗದಿರುವ ಕಾರಣ. ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಹೇಳಿಕೊಂಡೇ ಅವರು ರಾಜಕಾರಣ ಮಾಡಬೇಕಾಗಿದೆ. ಕಳೆದ ಚುನಾವಣೆಯಲ್ಲಿ ಹೀಗೆ ಹೇಳಿಯೇ ಬಿಜೆಪಿಗೆ 104 ಸ್ಥಾನ ತಂದುಕೊಡಲು ಸಿದ್ದರಾಮಯ್ಯನವರ ಕುತಂತ್ರದ ರಾಜಕಾರಣವೇ ಮೂಲ ಕಾರಣ ಎಂದು ಆರೋಪಿಸಿದರು.

ಹೈದರಾಬಾದ ಸಂಸ್ಥೆಯೊಂದು ಚುನಾವಣಾ ಸಮೀಕ್ಷೆ ಮಾಡಿ ಈ ಬಾರಿ 114 ರಿಂದ 120ರವರೆಗೆ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್​ ಪಕ್ಷ ಸ್ವತಂತ್ರವಾಗಿ ಅಧಿಕಾರ ನಡೆಸುತ್ತದೆ ಎಂದು ತಮ್ಮ ಕಾಂಗ್ರೆಸ್​ ಸರ್ಕಾರದ ಸರ್ಟಿಫಿಕೇಟ್ ಕೊಟ್ಟಿದೆಯಂತಲ್ಲ ಅದನ್ನು ದೊಡ್ಡದಾಗಿ ಫೋಟೋ ಮಾಡಿ ಕಾಂಗ್ರೆಸ್ ಕಚೇರಿಯಲ್ಲಿ ತೂಗಿಹಾಕಿ. ಅದನ್ನೇ ನೋಡ್ತಾ ಕುಳಿತುಕೊಳ್ಳಿ ಒಂದು ವೇಳೆ ಆ ಸಮೀಕ್ಷೆ ವರದಿಯನ್ನೇ ನಂಬಿರುವ ಕಾಂಗ್ರೆಸ್ಸಿಗೆ ಈ ಬಾರಿ ರಾಜ್ಯದ ಜನರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಹೇಳಿದರು.

ಬಿಜೆಪಿಯವರ ಭ್ರಷ್ಟಾಚಾರಕ್ಕಿಂತ ಕಾಂಗ್ರೆಸ್‌ನವರೇನು ಕಮ್ಮಿ ಇಲ್ಲ : ರಾಜ್ಯದಲ್ಲಿ ಬಿಜೆಪಿಯವರ 40 ಪರ್ಸೆಂಟ್​ ಸರ್ಕಾರ ಎಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರು ಪುಟ್ಟರಂಗಶೆಟ್ಟಿಯವರ ಕಚೇರಿಯಲ್ಲಿ 15 ಲಕ್ಷ ಹೇಗೆ ಬಂದಿತ್ತು..? ತಮ್ಮ ಸರ್ಕಾರದಲ್ಲಾದ ಭ್ರಷ್ಟಾಚಾರದ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಬಿಜೆಪಿಯವರ ಭ್ರಷ್ಟಾಚಾರಕ್ಕಿಂತ ಕಾಂಗ್ರೆಸ್‌ನವರೇನು ಕಮ್ಮಿ ಇಲ್ಲ ಎಂಬುದನ್ನು ತಿಳಿಯಿರಿ. ಈ ಬಾರಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ 2 ಸಾವಿರ ಖಚಿತ ಎಂದು ಜಾಹೀರಾತು ಕೊಡುತ್ತಿದ್ದಿರಲ್ಲ. ಯಾಕೆ ನಿಮ್ಮ ಅಧಿಕಾರದಲ್ಲಿ ಜನರ ಕಷ್ಟ ಗೊತ್ತಾಗಲಿಲ್ವಾ.? ಆಗ ಕೊಡೋಕೆ ಆಗಲಿಲ್ಲ.? ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಜಾಧ್ವನಿ ಅಲ್ಲ, ಕಾಂಗ್ರೆಸ್​ ಧ್ವನಿ: ಕೋವಿಡ್‌ನಲ್ಲಿ ಸತ್ತವರಿಗೆ ಪರಿಹಾರ ಕೊಡಲಿಲ್ಲ. ಈಗ ಪ್ರಜಾಧ್ವನಿ ಹೆಸರಿನಲ್ಲಿ ಜನರ ಮುಂದೆ ಹೋಗುತ್ತಿದ್ದೀರಿ. ಅದು ಪ್ರಜಾಧ್ವನಿ ಅಲ್ಲ ಕಾಂಗ್ರೆಸ್ ಧ್ವನಿ ಎಂದು ಯಾತ್ರೆಗೆ ಹೆಸರಿಟ್ಟು ಕರೆದುಕೊಳ್ಳಿ ಎಂದರು. ಜೆಡಿಎಸ್ ಘೋಷಿತ ಅಭ್ಯರ್ಥಿ ಡಾ, ಸಿ.ಎಸ್. ಸೋಲಾಪೂರ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ತಾಲೂಕಾ ಅಧ್ಯಕ್ಷ ಪ್ರಭುಗೌಡ ಪಾಟೀಲ, ರಾಜ್ಯ ಕಾರ್ಯದರ್ಶಿ ಪ್ರಶಾಂತ ಕಾಳೆ, ಬಸವರಾಜ ಭಜಂತ್ರಿ, ಜಲಾಲ ಮುದ್ನಾಳ, ಶಂಕರ ಮುರಾಳ, ಅರವಿಂದ ಕಾಶಿನಕುಂಟಿ ಸೇರಿದಂತೆ ಹಲವರು ಪಂಚರತ್ನ ಯಾತ್ರೆಯಲ್ಲಿ ಉಪಸ್ಥಿತರಿದ್ದರು.

ಸರ್ಕಾರ ಮಾಡಿ ಎಂದು ಬಂದವರು ಕಾಂಗ್ರೆಸ್ಸಿಗರು: 2018ರಲ್ಲಿ ನಾನೇನು ಈ ರಾಜ್ಯ ಮುಖ್ಯಮಂತ್ರಿಯಾಗುತ್ತೇನೆ ಎಂದು ನಿಮ್ಮ ಬಳಿ ನಾನು ಬಂದಿರಲಿಲ್ಲ. ನೀವೇ ಕಾಂಗ್ರೆಸ್​ನವರು ನನ್ನ ಬಳಿ ಬಂದು ನಾನೇ ಮುಖ್ಯಮಂತ್ರಿಯಾಗಬೇಕು ಎಂದು ನನ್ನ ಬಳಿ ಬಂದು ಬೇಡಿಕೊಂಡಿದ್ದಕ್ಕಾಗಿ ಒಪ್ಪಿಕೊಂಡು ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚಿಸಲು ಮುಂದಾದೆ. ಆದರೇ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ ಯಾವೂದೇ ಜನರ ಆಡಳಿತ ನಡೆಸಲು ಬಿಡದೇ ಕಟ್ಟಿಹಾಕಿ ಧರ್ಮಸ್ಥಳದ ಸಿದ್ದ ವನದಲ್ಲಿ ಸಭೆ ನಡೆಸಿ ಮೈತ್ರಿ ಸರ್ಕಾರ ಕೆಡವಲು ಮುಂದಾಗಿದ್ದಲ್ಲದೆ ಕೇವಲ 14 ತಿಂಗಳಲ್ಲಿಯೇ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಮುಂದಾಗಿದ್ದು ನನಗೆನು ಗೊತ್ತಿಲ್ಲದ ವಿಚಾರವಲ್ಲ. ಬಡವರ ಆರೋಗ್ಯ ಚಿಕಿತ್ಸೆಗಾಗಿ ಸುಮಾರು 109 ಕೋಟಿ ಹಾಗೂ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದು ಇಡೀ ರಾಜ್ಯದ ಜನರಿಗೆ ತಿಳಿದಿದೆ ಎಂದು ಹೇಳಿದರು.

ಇದನ್ನೂ ಓದಿ:ಇತ್ತೀಚೆಗೆ ಕಾಂಗ್ರೆಸ್ ಸೇರುತ್ತಿರುವ ಹಾಗೂ ಮುಂದೆ ಸೇರಲಿರುವ ನಾಯಕರಿಂದಾಗಿ ಅರ್ಜಿ ಸಲ್ಲಿಸಿದವರಲ್ಲಿ ಹೆಚ್ಚುತ್ತಿದೆ ಆತ

ABOUT THE AUTHOR

...view details