ಕರ್ನಾಟಕ

karnataka

ಈಟಿವಿ ಭಾರತ ಫಲಶೃತಿ: ನನೆಗುದಿಗೆ ಬಿದ್ದ ಕಾಮಗಾರಿ ಶೀಘ್ರ ಆರಂಭಿಸಲು ಕ್ರಮ

By

Published : Apr 17, 2021, 11:52 AM IST

ಅರಸನಾಳ ಹಾಗೂ ನಾಲತವಾಡದ ಬಳಿ ಅರ್ಧಕ್ಕೆ ನಿಂತಿರುವ ಕಾಮಗಾರಿ ಸ್ಥಳಕ್ಕೆ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಸುರೇಶ್​ ಹೆಚ್ ಶುಕ್ರವಾರ ಭೇಟಿ ನೀಡಿ ಕಾಲುವೆಯ ಸ್ಥಿತಿಗತಿಯ ಕುರಿತು ಮಾಹಿತಿ ಪಡೆದುಕೊಂಡರು.

Muddebihal
ಕಾಮಗಾರಿ ಸ್ಥಳಕ್ಕೆ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಸುರೇಶ್​ ಹೆಚ್ ಭೇಟಿ, ಪರಿಶೀಲನೆ

ಮುದ್ದೇಬಿಹಾಳ:ತಾಲೂಕಿನ ಅರಸನಾಳ ಹಾಗೂ ನಾಲತವಾಡದ ಬಳಿ ಅರ್ಧಕ್ಕೆ ಸ್ಥಗಿತಗೊಂಡಿರುವ ಚಿಮ್ಮಲಗಿ ಪೂರ್ವ ಕಾಲುವೆಯ ಬಾಕಿ ಉಳಿದಿರುವ ಕಾಮಗಾರಿಯನ್ನು ಆದಷ್ಟು ಶೀಘ್ರ ಕೈಗೆತ್ತಿಕೊಳ್ಳುವುದಾಗಿ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಸುರೇಶ್​ ಹೆಚ್ ತಿಳಿಸಿದ್ದಾರೆ.

ಕಾಮಗಾರಿ ಸ್ಥಳಕ್ಕೆ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಸುರೇಶ್​ ಹೆಚ್ ಭೇಟಿ, ಪರಿಶೀಲನೆ

ಈ ಕುರಿತು ಈಟಿವಿ ಭಾರತ "ನನೆಗುದಿಗೆ ಬಿದ್ದ ಕಾಲುವೆ ಕಾಮಗಾರಿ; ರೈತರಿಗೆ ಅತ್ತ ನೀರೂ ಇಲ್ಲ;ಇತ್ತ ಪರಿಹಾರವೂ ಇಲ್ಲ" ಶೀರ್ಷಿಕೆಯಡಿ ಏ.7 ರಂದು ಸುದ್ದಿ ಪ್ರಕಟಿಸಿತ್ತು.

ರೈತರ ಅಸಮಾಧಾನ:

ರೈತರಿಗೆ ಮಾಹಿತಿ ನೀಡದೇ ಅಧಿಕಾರಿಗಳು ದಿಢೀರ್ ಕಾಲುವೆಯ ಪರಿಶೀಲನೆಗೆ ಆಗಮಿಸಿದ್ದು, ನಾಲತವಾಡ ಭಾಗದ ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ರೈತರ ಸಮಸ್ಯೆಗಳನ್ನು ಕೇಳಿದ್ದರೆ ಪೂರ್ತಿ ವಿಷಯದ ಬಗ್ಗೆ ಮಾಹಿತಿ ದೊರೆಯುತ್ತಿತ್ತು. ರೈತರಿಗೆ ಮಾಹಿತಿ ನೀಡದೇ ಭೇಟಿ ನೀಡಿ ಹೋಗಿರುವುದು ಎಷ್ಟು ಸರಿ ಎಂದು ರೈತ ಮುಖಂಡರಾದ ಶಂಕರರಾವ್ ದೇಶಮುಖ, ಗುರುಪ್ರಸಾದ ದೇಶಮುಖ ಮತ್ತಿತರರು ಪ್ರಶ್ನಿಸಿದ್ದಾರೆ.

ತಾಲೂಕಿನ ಅರಸನಾಳ ಹಾಗೂ ನಾಲತವಾಡದ ಬಳಿ ಅರ್ಧಕ್ಕೆ ನಿಂತಿರುವ ಕಾಮಗಾರಿ ಸ್ಥಳಕ್ಕೆ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಸುರೇಶ್​ ಹೆಚ್ ಶುಕ್ರವಾರ ಭೇಟಿ ನೀಡಿ ಕಾಲುವೆಯ ಸ್ಥಿತಿಗತಿಯ ಕುರಿತು ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸಿದರು.

ಓದಿ:ನೆನೆಗುದಿಗೆ ಬಿದ್ದ ಕಾಮಗಾರಿ: ರೈತರಿಗೆ ಅತ್ತ ನೀರೂ ಇಲ್ಲ,ಇತ್ತ ಪರಿಹಾರವೂ ಇಲ್ಲ

ಈ ಕುರಿತು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, 10.ಕಿ.ಮೀ ನಿಂದ 25 ಕಿ.ಮೀವರೆಗೆ 2.5 ಕಿ.ಮೀ ಕಾಮಗಾರಿ ಇನ್ನೂ ಬಾಕಿ ಉಳಿದಿದೆ. ಇದಕ್ಕೆ ಗುತ್ತಿಗೆದಾರರು ಕೆಲಸ ಮಾಡುವಾಗ ಕೆಲ ರೈತರು ಅಡ್ಡಿಪಡಿಸಿದ್ದಾರೆ. ಇದರಿಂದ ಕೆಲಸ ಸ್ಥಗಿತಗೊಂಡಿದೆ. 2013-14ರಲ್ಲಿ ಇದ್ದ ದರದ ಪ್ರಕಾರ ಕೆಲಸ ಮಾಡಬೇಕಿದೆ. ಈಗ ದರಗಳೆಲ್ಲವೂ ಹೆಚ್ಚಾಗಿದ್ದು, ಕೆಲಸ ಮಾಡಲು ಆಗುವುದಿಲ್ಲ ಎಂದು ಗುತ್ತಿಗೆದಾರರು ಮಾಹಿತಿ ನೀಡಿದ್ದಾರೆ.

ಅವರನ್ನು ಇನ್ನೊಮ್ಮೆ ಕರೆದು ಸಭೆ ನಡೆಸಿ ಪ್ರಸಕ್ತ ದರದಲ್ಲಿ ಕೆಲಸ ಮಾಡಲು ತಿಳಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಕ್ರಮಗಳನ್ನು ಇಲಾಖೆಯಿಂದ ಕೈಗೊಳ್ಳಲಾಗುವುದು. ಯೋಜನೆಯ ಸ್ವರೂಪ ಕೆಲವೆಡೆ ಬದಲಾಗಿದ್ದು ಕಾಲುವೆಯಲ್ಲಿ ಬಿರುಕು ಕಂಡು ಬಂದಿವೆ. ಮತ್ತೊಮ್ಮೆ ಇಲಾಖೆಯಲ್ಲಿ ಸಭೆ ಕರೆದು ಆದಷ್ಟು ಬೇಗ ನಿಂತಿರುವ ಕಾಲುವೆ ಕಾಮಗಾರಿಗೆ ಚಾಲನೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details