ಕರ್ನಾಟಕ

karnataka

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ.. ಮನೆಯಿಂದ ಓಡಿ ಬಂದ ಜನ

By

Published : Dec 4, 2022, 9:04 PM IST

ಭೂಕಂಪನ
ಭೂಕಂಪನ ()

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹಲವು ಗ್ರಾಮಗಳಲ್ಲಿ 2.7 ತೀವ್ರತೆ ರಿಕ್ಟರ್​ ಮಾಪನದಲ್ಲಿ ದಾಖಲಾಗಿದೆ.

ವಿಜಯಪುರ:ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವ ಜನರಿಗೆ ಆಗಿದೆ. ಸಂಜೆ 7.57 ಕ್ಕೆ ಭೂಕಂಪನದ ಅನುಭವವಾಗಿದೆ. ಭೂಮಿಯಿಂದ ಜೋರಾದ ಶಬ್ದದ ಜೊತೆಗೆ ಕಂಪನದ ಅನುಭವವಾಗಿದೆ.‌ ಇದರಿಂದ ತಿಕೋಟಾ ತಾಲೂಕಿನ ಜನ ಮತ್ತೆ ಭಯಭೀತರಾಗಿದ್ದಾರೆ.‌

ಮೇಲಿಂದ ಮೇಲೆ ಸಂಭವಿಸುತ್ತಿರುವ ಭೂಕಂಪನದಿಂದ ಸಾಕಷ್ಟು ಜನ ಭಯಭೀತಿಯಿಂದ ಮನೆಯಲ್ಲೇ ವಾಸಿಸುವಂತಾಗಿದೆ.‌ ತಿಕೋಟಾ ತಾಲೂಕಿನ ಹುಬನೂರ, ಟಕ್ಕಳಕಿ, ಕಳ್ಳಕವಟಗಿ, ಘೋಣ ಸಗಿ, ಸೋಮ ದೇವರಹಟ್ಟಿ, ಮಲಕನ ದೇವರಹಟ್ಟಿ, ಜಾಲಗೇರಿ, ಇಟ್ಟಂಗಿಹಾಳ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವ ಗ್ರಾಮಸ್ಥರಿಗೆ ಆಗಿದೆಯಂತೆ.

ಭೂಮಿಯಿಂದ ಬಂದ ಶಬ್ದಕ್ಕೆ ಮನೆಯಿಂದ ಜನ ಹೊರಗೆ ಓಡಿ ಬಂದಿದ್ದಾರೆ. ಇದೇ ರೀತಿ ರಾತ್ರಿ ಭೂಕಂಪನವಾದರೆ ಏನು ಗತಿ? ಎನ್ನುವ ಭಯ ಹುಟ್ಟಿಕೊಂಡಿದೆ.‌ ಕೆಲ ಗ್ರಾಮಸ್ಥರು ದೇವಸ್ಥಾನ, ಹೊರ ಆವರಣದಲ್ಲಿ ಮಲಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸದ್ಯ ಈ ಭೂಕಂಪದ ಬಗ್ಗೆ ಜಿಲ್ಲಾಡಳಿತ ಯಾವುದೇ ಖಚಿತ ಮಾಹಿತಿ ನೀಡಿಲ್ಲ.

ಓದಿ:ಸುಳ್ಯ ತಾಲೂಕಿನಲ್ಲಿ ಮತ್ತೆ ಕಂಪಿಸಿದ ಭೂಮಿ

ABOUT THE AUTHOR

...view details