ಕರ್ನಾಟಕ

karnataka

ಗುಮ್ಮಟನಗರಿಯಲ್ಲಿ ಭೂಕಂಪದ ಅನುಭವ.. ಆತಂಕಗೊಂಡ ಜನ

By

Published : Dec 22, 2020, 4:17 PM IST

ವಿಜಯಪುರ ನಗರದಲ್ಲಿ ಭೂಕಂಪದ ಅನುಭವವಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

Earthquake Experience in vijaapura
ಗುಮ್ಮಟನಗರಿಯಲ್ಲಿ ಭೂಕಂಪನ

ವಿಜಯಪುರ: ಗುಮ್ಮಟ ನಗರಿಯ ಆನಂದ ನಗರ, ಕಾಳಿಕಾ ನಗರ, ಮುಕುಂದನಗರ, ಗಚ್ಚಿನಕಟ್ಟಿ ಕಾಲೋನಿ ಸೇರಿದಂತೆ ಹಲವೆಡೆ ಭೂಕಂಪದ ಅನುಭವವಾಗಿದೆ.

ಗುಮ್ಮಟನಗರಿಯಲ್ಲಿ ಭೂಕಂಪನ

ಭಾರಿ ಶಬ್ದದೊಂದಿಗೆ ಇದ್ದಕ್ಕಿದ್ದಂತೆ ಭೂಮಿ ನಡುಗಿದ್ದರಿಂದ ಪಾತ್ರೆಗಳು, ಮನೆಯ ಛಾವಣಿಯ ಶೀಟ್(ತಗಡು) ಹಾಗೂ ಕಿಟಕಿಗಳು ಅಲ್ಲಾಡಿವೆ. ಪರಿಣಾಮ ಬಡಾವಣೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಓದಿ:ಜನವರಿ 9ಕ್ಕೆ ರೈಲ್‌ ಬಂದ್‌ ಚಳವಳಿ ಮಾಡುತ್ತೇವೆ: ವಾಟಾಳ್ ಘೋಷಣೆ

ಇದುವರೆಗೂ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಆಗಮಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವು ತಿಂಗಳಲ್ಲಿ ಅನೇಕ ಬಾರಿ ಭೂಕಂಪವಾದ ಅನುಭವವಾಗಿದೆ. ಹೆಚ್ಚಾಗಿ ಕೊಲ್ಹಾರ ಸೇರಿದಂತೆ ತಾಲೂಕು ಕೇಂದ್ರದಲ್ಲಿ ಈ ಘಟನೆಗಳು ನಡೆದಿದ್ದವು. ಆದರೆ, ಈ ಬಾರಿ ವಿಜಯಪುರ ನಗರದಲ್ಲಿ ಭೂಕಂಪನದ ಅನುಭವವಾಗಿರುವುದು ಸಹಜವಾಗಿಯೇ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಲು ಕಾರಣವಾಗಿದೆ.

ABOUT THE AUTHOR

...view details