ಕರ್ನಾಟಕ

karnataka

ಮುದ್ದೇಬಿಹಾಳದಲ್ಲಿ ದಿಢೀರ್ ಮುರಿದು ಬಿದ್ದ ವಿದ್ಯುತ್ ಕಂಬ, ತಪ್ಪಿದ ದುರಂತ

By

Published : Oct 1, 2021, 7:01 PM IST

ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದೆ.

ಮುರಿದು ಬಿದ್ದ ವಿದ್ಯುತ್ ಕಂಬ
ಮುರಿದು ಬಿದ್ದ ವಿದ್ಯುತ್ ಕಂಬ

ಮುದ್ದೇಬಿಹಾಳ:ವಿದ್ಯುತ್ ಕಂಬವೊಂದು ಇದ್ದಕ್ಕಿದ್ದಂತೆ ಮುರಿದುಬಿದ್ದ ಪರಿಣಾಮ ಸಂಭವನೀಯ ದುರಂತ ತಪ್ಪಿದೆ. ಈ ಘಟನೆ ತಾಲೂಕಿನ ಬಸರಕೋಡ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಘಟನೆ ನಡೆದಾಗ ಹೆಚ್ಚಿನ ಸಂಖ್ಯೆಯ ಜನರು ರಸ್ತೆಯಲ್ಲಿ ಓಡಾಡುತ್ತಿರಲಿಲ್ಲ. ಆದರೆ ಅದೇ ಮಾರ್ಗದಲ್ಲಿ ಮುದ್ದೇಬಿಹಾಳದಿಂದ ನಿಡಗುಂದಿ ಕಡೆಗೆ ಸಂಚರಿಸುತ್ತಿದ್ದ ಸಾರಿಗೆ ಬಸ್ ಕೂದಲೆಳೆ ಅಂತರದಲ್ಲಿ ಜೀವಂತ ವಿದ್ಯುತ್ ತಂತಿಗಳು ಹರಿದು ಬೀಳುವಷ್ಟರಲ್ಲಿಯೇ ಪಾರಾಗಿದೆ. ಬಸ್​​ನಲ್ಲಿದ್ದ 30ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಸ್ತೆ ಇಕ್ಕಟ್ಟಾಗಿದ್ದು ಮೇಲಿಂದ ಮೇಲೆ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕಂಬಕ್ಕೆ ಡಿಕ್ಕಿ ಹೊಡೆಯುತ್ತಿರುವುದು ಈ ಘಟನೆಗೆ ಕಾರಣ ಎನ್ನಲಾಗಿದೆ.

ABOUT THE AUTHOR

...view details