ಕರ್ನಾಟಕ

karnataka

ಗುತ್ತಿಗೆ ಆಧಾರದ ವೈದ್ಯರನ್ನು ಖಾಯಂಗೊಳಿಸಿ: ಸರ್ಕಾರಕ್ಕೆ ಪತ್ರ ಬರೆದ ವೈದ್ಯ

By

Published : Jun 1, 2020, 10:28 PM IST

ಮುದ್ದೇಬಿಹಾಳ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಖಾಯಂಗೊಳಿಸುವಂತೆ ಗುತ್ತಿಗೆ ವೈದ್ಯ ಡಾ.ಸಂಗಮೇಶ್ ದಶವಂತ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

Muddebihala
Muddebihala

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಖಾಯಂಗೊಳಿಸುವಂತೆ ಗುತ್ತಿಗೆ ವೈದ್ಯ ಡಾ.ಸಂಗಮೇಶ್ ದಶವಂತ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಸರ್ಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ ವೈದ್ಯ

ಈ ಕುರಿತು ಸಲ್ಲಿಸಿರುವ ಮನವಿಯಲ್ಲಿ 506 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರು ಗುತ್ತಿಗೆ ಆಧಾರಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ 264 ವೈದ್ಯರು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.

ಪ್ರವಾಹ, ಬರಗಾಲ, ಕೋವಿಡ್ ಸಮಯದಲ್ಲೂ ಹಿಂಜರಿಯದೆ ಎಲ್ಲಾ ರೀತಿಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ವೈದ್ಯರನ್ನು ಸರ್ಕಾರ ಖಾಯಂಗೊಳಿಸಿ ಅವರಿಗೂ ಸೇವಾ ಭದ್ರತೆ ಕಲ್ಪಿಸಬೇಕು. ಕೂಡಲೇ ಸರ್ಕಾರ ಈ ವಿಷಯದ ಕಡೆ ಗಮನ ಹರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details