ಕರ್ನಾಟಕ

karnataka

ಕೇಂದ್ರ ನಾಯಕರ ಜೊತೆಗಿನ ಭೇಟಿ ಫಲಪ್ರದವಾಗಿದೆ : ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

By ETV Bharat Karnataka Team

Published : Jan 8, 2024, 10:42 PM IST

Updated : Jan 8, 2024, 11:01 PM IST

ನನಗೆ ಯಾವುದೇ ನೋಟಿಸ್ ಇಲ್ಲ, ಎಚ್ಚರಿಕೆ ನೀಡಿಲ್ಲ. ನನ್ನ ಜೊತೆ ಇಬ್ಬರು ನಾಯಕರು ಗೌರವಯುತವಾಗಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಆಗಲಿದೆ ಎಂಬ ಭರವಸೆಯನ್ನು ಹೈಕಮಾಂಡ್​ ನಾಯಕರು ನೀಡಿದ್ದಾರೆ ಎಂದರು.

delhi-visit-is-fruitful-mla-basan-gowda-patil-yatnal
ಕೇಂದ್ರ ನಾಯಕರ ಜೊತೆಗಿನ ಭೇಟಿ ಫಲಪ್ರದವಾಗಿದೆ : ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ಕೇಂದ್ರ ನಾಯಕರ ಜೊತೆಗಿನ ಭೇಟಿ ಫಲಪ್ರದವಾಗಿದೆ : ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ವಿಜಯಪುರ :ಎಲ್ಲಾ ವಿಚಾರಗಳನ್ನು ಕೇಂದ್ರ ನಾಯಕರ ಮುಂದೆ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುವುದಾಗಿ ಕೇಂದ್ರ ನಾಯಕರು ಭರವಸೆ ನೀಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತ್ನಾಳ್​, ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿರುವ ಕುರಿತು ಮಾತನಾಡಿ, ದೆಹಲಿಯ ಭೇಟಿ ಫಲಪ್ರದವಾಗಿದೆ. ದೆಹಲಿಗೆ ಬರಲು ರಾಷ್ಟ್ರೀಯ ಅಧ್ಯಕ್ಷರಿಂದ ನನಗೆ ಕರೆ ಬಂದಿತ್ತು. ಈ ಸಂಬಂಧ ದೆಹಲಿಗೆ ತೆರಳಿದ್ದೆ. ರಾಷ್ಟ್ರೀಯ ಅಧ್ಯಕ್ಷರ ಭೇಟಿಗೂ ಮುನ್ನ ಅರುಣಸಿಂಗ್ ಹಾಗೂ ರಾಧಾ‌ಮೋಹನ್ ಅಗರವಾಲ್ ಅವರನ್ನು ಭೇಟಿ ಮಾಡಿದ್ದೇನೆ. ಬಳಿಕ ಅಮಿತ್ ಶಾ ಹಾಗೂ ನಡ್ಡಾ ಅವರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದರು.

ಸುಮಾರು 25 ನಿಮಿಷಗಳ ಕಾಲ ಸುದೀರ್ಘ ಮಾತುಕತೆ ನಡೆಸಿದೆವು. ಎಲ್ಲಾ ವಿಚಾರಗಳನ್ನು ಕೇಂದ್ರದ ನಾಯಕರ ಮುಂದೆ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುವುದಾಗಿ ಕೇಂದ್ರದ ನಾಯಕರು ಭರವಸೆ ನೀಡಿದ್ದಾರೆ. ಏನಾದರೂ ಹೇಳುವುದಿದ್ದರೆ ನನಗೆ ನೇರವಾಗಿ ಹೇಳಿ ಎಂದು ನಡ್ಡಾ ತಿಳಿಸಿದ್ದಾರೆ. ಯಾರ ಮುಲಾಜೂ ಇಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ನನಗೆ ಯಾವುದೇ ನೋಟಿಸ್ ಇಲ್ಲ, ಎಚ್ಚರಿಕೆ ನೀಡಿಲ್ಲ, ನನ್ನ ಜೊತೆ ಇಬ್ಬರು ನಾಯಕರು ಗೌರವಯುತವಾಗಿ ನಡೆದುಕೊಂಡಿದ್ದಾರೆ ಎಂದರು. ರಾಜ್ಯ ಬಿಜೆಪಿ ಉಸ್ತುವಾರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಅದೆಲ್ಲಾ ಹೈಕಮಾಂಡ್ ನಿರ್ಣಯ. ಬದಲಾವಣೆ ಯಾರು ಮಾಡುತ್ತಾರೆ ಗೊತ್ತಿಲ್ಲ ಎಂದರು.

ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮತ್ತೊಂದು ಗೋಧ್ರಾ ಗಲಭೆ ರೀತಿಯ ಮಾಡಲು ಸಂಚು ರೂಪಿಸುತ್ತಿದೆ. ಇದನ್ನು ತಮ್ಮ ಹೇಳಿಕೆಯ ಮೂಲಕ ಬಿ ಕೆ ಹರಿಪ್ರಸಾದ್ ಬಹಿರಂಗಪಡಿಸಿದ್ದಾರೆ. ರಾಜ್ಯ ಸರ್ಕಾರ ಹರಿಪ್ರಸಾದ್ ಮೇಲೆ ಕೇಸ್ ದಾಖಲಿಸಬೇಕೆಂದು ಯತ್ನಾಳ್​ ಒತ್ತಾಯಿಸಿದರು. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ದಿನ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಬಗ್ಗೆ ಪ್ರತಿಕ್ರಿಯಿಸಿ, ಧಾರ್ಮಿಕ ದತ್ತಿ ಸಚಿವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವೆಲ್ಲ ರಾಮಭಕ್ತರು. ನಮ್ಮ ದೇಶದ ಮೂಲಪುರುಷ ಶ್ರೀರಾಮ ಎಂದರು.

ಹಿಂದೂ ಕಾರ್ಯಕರ್ತನ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದುಗಳ ಮೇಲೆ ದೌರ್ಜನ್ಯ ಮಾಡುತ್ತಿದೆ. ಡಿಕೆಶಿ ಅವರು ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಾಟೆ ಮಾಡಿದವರ ಪರ ಮಾತನಾಡುತ್ತಾರೆ. ಆ ಪ್ರಕರಣಗಳು ಎನ್ಐಎ ವಿಚಾರಣೆಗೆ ಹೋಗಿದ್ದರೂ ಅವರ ಬಿಡುಗಡೆ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಇದನ್ನೂ ಓದಿ :ಗೆಲ್ಲುವ ರೂಪುರೇಷೆ ಕುರಿತು ಚರ್ಚೆ, ಸೀಟು ಹಂಚಿಕೆ ಹೈಕಮಾಂಡ್ ನಿರ್ಧಾರ: ಸಿ‌ ಟಿ ರವಿ

Last Updated :Jan 8, 2024, 11:01 PM IST

ABOUT THE AUTHOR

...view details