ಕರ್ನಾಟಕ

karnataka

ಕಾಳಜಿ ಕೇಂದ್ರದಲ್ಲಿ ಅಸಮರ್ಪಕ ವ್ಯವಸ್ಥೆ : ಶಾಸಕಿ ರೂಪಾಲಿಗೆ ಕ್ಲಾಸ್ ತೆಗೆದುಕೊಂಡ ನೆರೆ ಸಂತ್ರಸ್ತರು

By

Published : Jul 26, 2021, 9:32 PM IST

ಕದ್ರಾ ಜಲಾಶಯದಿಂದ ನೀರು ಬಿಟ್ಟ ಕಾರಣ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿರುವ ಇಲ್ಲಿನ ಗಾಂಧಿನಗರದ ಪ್ರವಾಹ ಸಂತ್ರಸ್ತರ ಸಮಸ್ಯೆ ಅಸಲಿಸಲು ಶಾಸಕಿ ರೂಪಾಲಿ ನಾಯ್ಕ್ ಆಗಮಿಸಿದ್ದರು. ಈ ವೇಳೆ ಅವರಿಗೆ ಜನ ಕ್ಲಾಸ್ ತೆಗೆದುಕೊಂಡಿದ್ದಾರೆ..

ಶಾಸಕಿ ರೂಪಾಲಿಗೆ ಕ್ಲಾಸ್ ತೆಗೆದುಕೊಂಡ ಸಂತ್ರಸ್ತರು
Flood victims taken a class to MLA Roopali in Karwar

ಕಾರವಾರ :ಪ್ರವಾಹ ಸಂತ್ರಸ್ತರ ಸಮಸ್ಯೆ ಆಲಿಸಲು ನಿರ್ಲಕ್ಷ್ಯ ಮತ್ತು ಕಾಳಜಿ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಶಾಸಕಿ ರೂಪಾಲಿ ನಾಯ್ಕ್​​​ಗೆ ಸಂತ್ರಸ್ತರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ‌ ಘಟನೆ ಮಲ್ಲಾಪುರದಲ್ಲಿ ನಡೆದಿದೆ.

ಶಾಸಕಿ ರೂಪಾಲಿ ಅವರಗೆ ಕ್ಲಾಸ್ ತೆಗೆದುಕೊಂಡ ಸಂತ್ರಸ್ತರು

ಕದ್ರಾ ಜಲಾಶಯದಿಂದ ನೀರು ಬಿಟ್ಟ ಕಾರಣ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿರುವ ಇಲ್ಲಿನ ಗಾಂಧಿನಗರದ ಪ್ರವಾಹ ಸಂತ್ರಸ್ತರ ಸಮಸ್ಯೆ ಅಸಲಿಸಲು ಶಾಸಕಿ ರೂಪಾಲಿ ನಾಯ್ಕ್ ಆಗಮಿಸಿದ್ದರು. ಈ ವೇಳೆ ಅವರಿಗೆ ಜನ ಕ್ಲಾಸ್ ತೆಗೆದುಕೊಂಡಿದ್ದಾರೆ.

ಘಟನೆ ನಡೆದು ಎರಡು ದಿನ ಸಮೀಪಿಸಿದ್ದು, ಸಂತ್ರಸ್ತರ ಗೋಳು ಕೇಳಿಲ್ಲ. ಕಾಳಜಿ ಕೇಂದ್ರದಲ್ಲಿ 80ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದು, ಬಹುತೇಕರ ಮನೆ ಸಂಪೂರ್ಣ ನಾಶವಾಗಿವೆ. ಉಟ್ಟ ಬಟ್ಟೆ ಬಿಟ್ಟು ಬೇರೇನೂ ಇಲ್ಲದ ಸಂತ್ರಸ್ತರಿಗೆ ಈವರೆಗೂ ಯಾವುದೇ ಅಗತ್ಯ ವಸ್ತುವನ್ನು ನೀಡಿಲ್ಲ. ಜೀವನಾವಶ್ಯಕ ವಸ್ತುಗಳಾಗಲಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಹ ಆಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಈ ವೇಳೆ ಸಂತ್ರಸ್ಥರು ಹಾಗೂ ಶಾಸಕಿ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಇದನ್ನು ಗಮನಿಸಿ ಮಧ್ಯಪ್ರವೇಶಿಸಿದ ಪೊಲೀಸರು ಗಲಾಟೆ ತಹಬದಿಗೆ ತಂದರು. ಬಳಿಕ ಶಾಸಕಿ ರೂಪಾಲಿ ನಾಯ್ಕ ಅಗತ್ಯ ಸೌಲಭ್ಯವನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ಓದಿ: ಕರ್ನಾಟಕಕ್ಕೆ ಹೊಸ ಸಿಎಂ ಆಯ್ಕೆ: ಕೇಂದ್ರದ ಸೀಕ್ರೆಟ್, ಸರ್ಪ್ರೈಸ್ ಸೂತ್ರವೇನು?

ABOUT THE AUTHOR

...view details