ಕರ್ನಾಟಕ

karnataka

ಮುರುಡೇಶ್ವರದಲ್ಲಿ ಮೀನುಗಾರರು-ಗೂಡಂಗಡಿಕಾರರ ಮಧ್ಯೆ ಬಿಗ್​ ಫೈಟ್​! ವಿಡಿಯೋ...

By

Published : Jan 10, 2021, 5:32 AM IST

Updated : Jan 10, 2021, 7:26 AM IST

ಮೀನುಗಾರರು ಮತ್ತು ಗೂಡಂಗಡಿಕಾರರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.

Big Fight between fisherman and street shops, Big Fight between fisher man and street shops in Murdeshwar beach, Karwar crime news, ಮೀನುಗಾರರು ಮತ್ತು ಗುಡಂಗಡಿಕಾರರ ಮಧ್ಯೆ ಬಿಗ್​ ಫೈಟ್, ಮುರುಡೇಶ್ವರದಲ್ಲಿ ಮೀನುಗಾರರು ಮತ್ತು ಗುಡಂಗಡಿಕಾರರ ಮಧ್ಯೆ ಬಿಗ್​ ಫೈಟ್, ಕಾರವಾರ ಅಪರಾಧ ಸುದ್ದಿ,
ಮುರುಡೇಶ್ವರದಲ್ಲಿ ಮೀನುಗಾರರು, ಗುಡಂಗಡಿಕಾರರ ಮಧ್ಯೆ ಬಿಗ್​ ಫೈಟ್

ಕಾರವಾರ:ಮುರುಡೇಶ್ವರದ ಕಡಲತೀರದಲ್ಲಿ ಕಳೆದ ಕೆಲ ತಿಂಗಳಗಳಿಂದ ಗೂಡಂಗಡಿಕಾರರು ಹಾಗೂ ಮೀನುಗಾರರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ವಿಕೋಪಕ್ಕೆ ತಿರುಗಿದ್ದು, ರಾತ್ರಿ ನಡೆದ ಹೊಡೆದಾಟದಲ್ಲಿ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಮುರುಡೇಶ್ವರದಲ್ಲಿ ಮೀನುಗಾರರು, ಗುಡಂಗಡಿಕಾರರ ಮಧ್ಯೆ ಬಿಗ್​ ಫೈಟ್

ಗಾಯಗೊಂಡವರನ್ನು ಸ್ಥಳೀಯ ಗೂಡಂಗಡಿಕಾರರ ಸಂಘದ ಉಪಾಧ್ಯಕ್ಷ ವೆಂಕಟೇಶ ಈರಯ್ಯ ಹರಿಕಾಂತ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಮೀನುಗಾರಿಕೆ ಮುಗಿಸಿ ವಾಪಸ್ಸಾದ ಕೆಲ ಮೀನುಗಾರರು ದೋಣಿ ಇಡುವ ಸ್ಥಳದಲ್ಲಿ ಅಂಗಡಿ ಇಟ್ಟ ಬಗ್ಗೆ ಆಕ್ಷೇಪಿಸಿ ಅಂಗಡಿಯನ್ನು ನೆಲಕ್ಕೆ ಉರುಳಿಸಿದ್ದಾರೆ.

ಅಂಗಡಿಯನ್ನು ಕೆಡವಿದಕ್ಕೆ ಆಕ್ರೋಶಗೊಂಡ ಗೂಡಂಗಡಿಕಾರರ ಸಂಘದ ಉಪಾಧ್ಯಕ್ಷ ವೆಂಕಟೇಶ ಹರಿಕಾಂತ, ಅಂಗಡಿಯನ್ನು ತೆರವು ಬದಲು ಹೇಳಿದ್ರೆ ಆಗಿತ್ತು ಎಂದು ಅಸಮಾಧಾನ ಹೊರಹಾಕಿದ್ದರು ಎನ್ನಲಾಗಿದೆ.

ಇದೇ ವಿಷಯ ಮಾತಿಗೆ ಮಾತಾಗಿ ಕೊನೆಗೆ ಹೊಡೆದಾಟಕ್ಕೆ ತಿರುಗಿದ್ದು, ವೆಂಕಟೇಶ್​ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ವೆಂಕಟೇಶ, ಅಣ್ಣಪ್ಪ ಹರಿಕಾಂತ, ಗಣೇಶ ಹರಿಕಾಂತ, ಕುಮಾರ ಹರಿಕಾಂತ ಸೇರಿದಂತೆ ನಾಲ್ವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಆರೋಪಿಗಳ ಪೈಕಿ ಒಬ್ಬರಾಗಿರುವ ಗಣೇಶ ಹರಿಕಾಂತ ಅವರ ಪತ್ನಿ ಸರಸ್ವತಿ ಹರಿಕಾಂತ ನನ್ನ ಮೇಲೆ ವೆಂಕಟೇಶ್​ ಹಲ್ಲೆ ನಡೆಸಿರುವುದಾಗಿ ಪ್ರತಿ ದೂರು ನೀಡಿದ್ದಾರೆ.

ಈ ಘಟನೆ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Jan 10, 2021, 7:26 AM IST

ABOUT THE AUTHOR

...view details