ಕರ್ನಾಟಕ

karnataka

ಜಮೀನಿನಲ್ಲಿ ಆನೆ ಹಿಂಡಿನ ದಾಂಧಲೆ: ಕಬ್ಬು, ಭತ್ತ ನಾಶ

By

Published : Nov 11, 2019, 7:19 PM IST

ಶಿರಸಿ ತಾಲೂಕಿನ ಕೆಲವು ಗ್ರಾಮಗಳ ಜಮೀನಿನಲ್ಲಿ ಆನೆ ಹಿಂಡು ಓಡಾಡಿದ ಪರಿಣಾಮ ಭತ್ತ, ಅಡಕೆ, ಕಬ್ಬಿನ ಬೆಳೆಗಳು ನಾಶವಾಗಿವೆ.

ಜಮೀನಿನಲ್ಲಿ ಆನೆ ಹಿಂಡು ದಾಂಧಲೆ

ಶಿರಸಿ/ಉತ್ತರ ಕನ್ನಡ:ಕಳೆದ ನಾಲ್ಕು ದಿನಗಳಿಂದ ಶಿರಸಿ ತಾಲೂಕಿನ ವಿವಿಧ ಭಾಗದಲ್ಲಿ ಆನೆಗಳ ಹಿಂಡು, ಶಿರಸಿ ಅರಣ್ಯ ವಲಯದ ಉಂಚಳ್ಳಿ ಭಾಗದಲ್ಲಿ ಓಡಾಡಿದ ಪರಿಣಾಮ ಕೃಷಿ ಜಮೀ‌ನು ಹಾಳಾಗಿದೆ.

ಮೂರು ದೊಡ್ಡ ಆನೆ ಮತ್ತು ಒಂದು ಮರಿ ಆನೆಯ ಹಿಂಡು ತಾಲೂಕಿನ ಬದನಗೋಡು, ಕ್ಯಾದಗಿಕೊಪ್ಪ, ಕಂತ್ರಾಜಿ ಸೇರಿದಂತೆ ವಿವಿಧ ಭಾಗದಲ್ಲಿ ಓಡಾಡಿದೆ. ಅಲ್ಲಿಂದ ಪು‌ನಃ ಮರಳಿ ಹೋಗುವ ಬದಲಿಗೆ ಇದೇ ಮೊದಲ ಬಾರಿಗೆ ಪಶ್ಚಿಮ ಭಾಗದತ್ತ ಆನೆಗಳು ಮುಖ ಮಾಡಿದ್ದು, ಅವುಗಳ ಕಾಲ್ತುಳಿತಕ್ಕೆ ನಾಲ್ಕಾರು ಎಕರೆ ಕೃಷಿ ಭೂಮಿ ಹಾಳಾಗಿದೆ.

ಜಮೀನಿನಲ್ಲಿ ಆನೆ ಹಿಂಡು ದಾಂಧಲೆ

ಉಂಚಳ್ಳಿ ಗ್ರಾಮದ ಕಬ್ಬೆ, ಹಲಸಿನಕೊಪ್ಪ ಸೇರಿದಂತೆ ಅಕ್ಕ ಪಕ್ಕದ ಗ್ರಾಮದ ಜಮೀನಿನಲ್ಲಿ ಭತ್ತ, ಅಡಕೆ, ಕಬ್ಬಿನ ಬೆಳೆಗಳು ಆನೆಗಳ ಹಾವಳಿಗೆ ಬಲಿಯಾಗಿದೆ. ಕಟಾವಿಗೆ ಬಂದಿದ್ದ ಭತ್ತದ ತೆನೆಗಳು ಮುರಿದು ಬಿದ್ದಿವೆ. ಇನ್ನು ಬಾಳೆ ತೋಟಕ್ಕೆ ನುಗ್ಗಿ ದಾಂಧಲೆ ಮಾಡಿದೆ. ಅಡಕೆ ಮತ್ತು ಕಬ್ಬಿನ ಬೆಳೆಗಳು ನಾಶವಾಗಿದೆ.

Intro:ಶಿರಸಿ :
ಕಳೆದ ನಾಲ್ಕು ದಿನಗಳಿಂದ ಶಿರಸಿ ತಾಲೂಕಿನ ವಿವಿಧ ಭಾಗದಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು, ಭಾನುವಾರ ರಾತ್ರಿ ಶಿರಸಿ ಅರಣ್ಯ ವಲಯದ ಉಂಚಳ್ಳಿ ಭಾಗದಲ್ಲಿ ಓಡಾಡಿದ ಪರಿಣಾಮ ಲಕ್ಷಾಂತರ ರೂ. ಕೃಷಿ ಜಮೀ‌ನು ಹಾಳಾಗಿದೆ.

ಮೂರು ದೊಡ್ಡ ಆನೆ ಮತ್ತು ಒಂದು ಮರಿ ಆನೆಯ ಹಿಂಡು ತಾಲೂಕಿನ ಬದನಗೋಡು, ಕ್ಯಾದಗಿಕೊಪ್ಪ, ಕಂತ್ರಾಜಿ ಸೇರಿದಂತೆ ವಿವಿಧ ಭಾಗದಲ್ಲಿ ಓಡಾಡಿದೆ. ಅಲ್ಲಿಂದ ಪು‌ನಃ ಮರಳಿ ಹೋಗುವ ಬದಲಿಗೆ ಇದೇ ಮೊದಲ ಬಾರಿಗೆ ಪಶ್ಚಿಮ ಭಾಗದತ್ತ ಆನೆಗಳ ಹಿಂಡು ಮುಖ ಮಾಡಿದ್ದು, ಅಲ್ಲಿ ಓಡಾಡುವಾ ಕಾಲ್ತುಳಿತಕ್ಕೆ ನಾಲ್ಕಾರು ಎಕರೆ ಕೃಷಿ ಭೂಮಿ ಹಾಳಾಗಿದೆ.

Body:ಉಂಚಳ್ಳಿ ಗ್ರಾಮದ ಕಬ್ಬೆ, ಹಲಸಿನಕೊಪ್ಪ ಸೇರಿದಂತೆ ಅಕ್ಕ ಪಕ್ಕದ ಊರುಗಳಲ್ಲಿನ ಭತ್ತ, ಅಡಿಕೆ, ಕಬ್ಬಿನ ಬೆಳೆಗಳು ಆನೆಗಳ ಹಾವಳಿಗೆ ಬಲಿಯಾಗಿದೆ. ೨ ಎಕರೆಗೂ ಅಧಿಕ ಕ್ಷೇತ್ರದ ಭತ್ತದ ಕ್ಷೇತ್ರಕ್ಕೆ ಹಾನಿಯಾಗಿದೆ. ಕಟಾವಿಗೆ ಬಂದಿದ್ದ ಭತ್ತದ ತೆನೆಗಳು ಮುರಿದು ಬಿದ್ದಿವೆ. ಇನ್ನು ಬಾಳೆ ತೋಟಕ್ಕೆ ನುಗ್ಗಿ ದಾಂಧಲೆ ಮಾಡಿದೆ. ಅಡಿಕೆ ಮತ್ತು ಕಬ್ಬಿನ ಬೆಳೆಗಳು ನಾಶವಾಗಿದೆ.

ಬೈಟ್ (೧) : ವೆಂಕಟ್ರಮಣ ನಾಯ್ಕ , ಸ್ಥಳೀಯ.
.............
ಸಂದೇಶ ಭಟ್ ಶಿರಸಿ. Conclusion:

ABOUT THE AUTHOR

...view details