ಕರ್ನಾಟಕ

karnataka

ಸಾಲ ಮಾಡಿ ಬೆಳೆದ ಶುಂಠಿಗೆ ಕೊಳೆ ರೋಗ: ಕಂಗಾಲಾದ ಅನ್ನದಾತ

By

Published : Sep 30, 2020, 8:15 AM IST

ಕಳೆದೊಂದು ತಿಂಗಳಿನಿಂದ ಬನವಾಸಿ ಸುತ್ತಮುತ್ತ ಕೊಳೆ ರೋಗ ಕಾಣಿಸಿಕೊಂಡು ಕೊಳೆತ ಶುಂಠಿಯನ್ನು ಕೀಳುವುದರಲ್ಲೇ ಬೆಳೆಗಾರರು ಹೈರಾಣಾಗುತ್ತಿದ್ದಾರೆ.

Disease of ginger crop A farmer in distress
ಶುಂಠಿ ಬೆಳೆಗೆ ಕೊಳೆ ರೋಗ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆ ಪ್ರಸಕ್ತ ಸಾಲಿನಲ್ಲಿ ಕೊಳೆ ರೋಗಕ್ಕೆ ತುತ್ತಾಗಿದ್ದು, ಪ್ರತಿಶತ 40ರಷ್ಟು ಬೆಳೆ ನಾಶವಾಗಿ ರೈತರ ನೆಮ್ಮದಿ ಕೆಡಿಸಿದೆ. ಬೆಳೆ ಉತ್ತಮವಾಗಿದ್ದರೂ ಕೊಳೆ ರೋಗದಿಂದ ನಾಶವಾಗಿದ್ದು, ಸರ್ಕಾರದ ಸಹಕಾರಕ್ಕೆ ರೈತರು ಆಗ್ರಹಸಿಸುವಂತಾಗಿದೆ.

ಶಿರಸಿಯ ಬನವಾಸಿ, ಮುಂಡಗೋಡ ಭಾಗದಲ್ಲಿ ಇತ್ತೀಚೆಗೆ ಭತ್ತಕ್ಕಿಂತ ಶುಂಠಿಯನ್ನೇ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಕಳೆದ ಸೀಸನ್‍ನಲ್ಲಿ ದರ ಉತ್ತಮವಾಗಿದ್ದರಿಂದ ಈ ಭಾಗದಲ್ಲಿ ಹೇರಳವಾಗಿ ಶುಂಠಿ ಬೆಳೆದಿದ್ದು, ಕಳೆದೊಂದು ತಿಂಗಳಿನಿಂದ ಬನವಾಸಿ ಸುತ್ತಮುತ್ತ ಕೊಳೆ ರೋಗ ಕಾಣಿಸಿಕೊಂಡು ಕೊಳೆತ ಶುಂಠಿಯನ್ನು ಕೀಳುವುದರಲ್ಲೇ ಬೆಳೆಗಾರರು ಹೈರಾಣಾಗುತ್ತಿದ್ದಾರೆ. ಈ ಬಾರಿ ಎದುರಾದ ಕೊಳೆ ರೋಗ ರೈತರನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಮುಂದೇನು ಎಂಬ ಚಿಂತೆಯಲ್ಲಿ ರೈತರಿದ್ದಾರೆ.‌ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ಕಣ್ಣೆದುರೇ ನಾಶವಾಗುತ್ತಿದ್ದು, ಮುಂದೇನು ಎಂಬ ಚಿಂತೆಯಲ್ಲಿ ರೈತರಿದ್ದಾರೆ.

ಶುಂಠಿ ಬೆಳೆಗೆ ಕೊಳೆ ರೋಗ

ಶಿರಸಿ ತಾಲೂಕಿನಲ್ಲಿ ಅಂದಾಜು 140 ಹೆಕ್ಟೇರ್​​​, ಮುಂಡಗೋಡಿನಲ್ಲಿ 307, ಸಿದ್ದಾಪುರದಲ್ಲಿ 4.5 ಹೆಕ್ಟೇರ್ ಶುಂಠಿ ಬೆಳೆಯಲಾಗುತ್ತದೆ. ಅದರಲ್ಲಿ ಶಿರಸಿ ತಾಲೂಕೊಂದರಲ್ಲೇ ಅಂದಾಜು 54 ಹೆಕ್ಟೇರ್ ಪ್ರದೇಶದಲ್ಲಿನ ಶುಂಠಿಗೆ ಕೊಳೆ ರೋಗ ಬಂದಿದೆ. ಶಿರಸಿ ತಾಲೂಕಿನ ಅಂಡಗಿ, ಕಿರವತ್ತಿ, ಕಲಕರಡಿ, ಹೆಬ್ಬತ್ತಿ, ರಾಮಾಪುರ, ಹೊಸಕೊಪ್ಪ, ದಾಸನಕೊಪ್ಪ ಶುಂಠಿ ಬೆಳೆಯಲಾಗಿದ್ದು, ಆಗಸ್ಟ್​​ನಲ್ಲಿ ಸುರಿದ ಭಾರೀ ಮಳೆಯ ಜೊತೆಗೆ ನಂತರ ಎದುರಾದ ಹವಾಮಾನ ವೈಪರೀತ್ಯದಿಂದ ಶುಂಠಿಗೆ ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ನೀರು ಹೆಚ್ಚಾಗಿ ನಿಂತ ಪರಿಣಾಮ ಕೊಳೆ ರೋಗ ಕಾಣಿಸಿಕೊಂಡಿದೆ.

ABOUT THE AUTHOR

...view details