ಕರ್ನಾಟಕ

karnataka

ಒಂದೇ ದಿನ ಜಿಲ್ಲೆಯಲ್ಲಿ 14 ಕೊರೊನಾ ಸೋಂಕಿತರು ಪತ್ತೆ

By

Published : Jun 28, 2020, 9:59 PM IST

Updated : Jun 28, 2020, 11:19 PM IST

ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇನ್ನಷ್ಟು ಬಿಗಿ ಕ್ರಮಕೈಗೊಳ್ಳಲು ಚರ್ಚೆ ನಡೆದಿದೆ ಎನ್ನಲಾಗುತ್ತಿದೆ..

Bhatkala
Bhatkala

ಭಟ್ಕಳ :ಜಿಲ್ಲೆಯಲ್ಲಿ ಇಂದು ಇದೇ ಮೊದಲ ಬಾರಿಗೆ 14 ಗರಿಷ್ಠ ಕೊರೊನಾ ಪ್ರಕರಣ ವರದಿಯಾಗಿವೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ನೇತೃತ್ವದ ಆರೋಗ್ಯಾಧಿಕಾರಿಗಳ ತಂಡ ತುರ್ತು ಸಭೆ ನಡೆಸಿದೆ.

ಜಿಲ್ಲಾಧಿಕಾರಿ ಡಾ.ಕೆ ಹರೀಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿನೋದ್ ಭೂತೆ ಅವರ ತಂಡ ಇಂದು ಭಟ್ಕಳಕ್ಕೆ ದಿಢೀರ್ ಭೇಟಿ ನೀಡಿದೆ.

ಉಪವಿಭಾಗಾಧಿಕಾರಿ ಭರತ್ ಎಸ್., ತಹಶೀಲ್ದಾರ್‌ ರವಿಚಂದ್ರ ಸೇರಿ ತಾಲೂಕು ಆಡಳಿತದ ಹಾಗೂ ಆರೋಗ್ಯ ಅಧಿಕಾರಿಗಳನ್ನು ಸೇರಿಸಿ ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇನ್ನಷ್ಟು ಬಿಗಿ ಕ್ರಮಕೈಗೊಳ್ಳಲು ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

ಜೊತೆಗೆ ನಗರಕ್ಕೆ ಅರಬ್ ದೇಶಗಳಿಂದ ಸಾಕಷ್ಟು ಮಂದಿ ಬರುತ್ತಿದ್ದಾರೆ. ತನ್ನಿಮಿತ್ತ ಭಟ್ಕಳ ಪಟ್ಟಣದಲ್ಲಿ ಮತ್ತಷ್ಟು ಬಿಗಿ ಕ್ರಮ ಅನುಸರಿಸುವ ಸಲುವಾಗಿಯೂ ಚರ್ಚೆ ನಡೆದಿದೆ.

Last Updated : Jun 28, 2020, 11:19 PM IST

ABOUT THE AUTHOR

...view details