ಕರ್ನಾಟಕ

karnataka

ಕಳ್ಳತನ ಪ್ರಕರಣ: ಆಭರಣ ಸಮೇತ ಆರೋಪಿಯ ಬಂಧನ

By

Published : Jan 21, 2020, 2:58 PM IST

ಜ.4ರಂದು ಬೆಳಗ್ಗೆ ತಾಲೂಕಿನ ಬೆಳಕೆ ಪಂಚಾಯತ್ ವ್ಯಾಪ್ತಿಯ ಕಂಚಿಕೇರಿಯ ನಾಗರಾಜ ಗಣಪತಿ ಹೆಗಡೆ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡಹಗಲೇ ಮನೆ ಬಾಗಿಲು ಮುರಿದು ನಗದು ಹಾಗೂ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.

Bhatkal police arrested the accused
ಬಾಳಾ ತಂದೆ ಪಿಯದಾದ್ ಲೂಪಿಸ್ ಬಂಧಿತ ಆರೋಪಿ

ಭಟ್ಕಳ: ಜ.4ರಂದು ಬೆಳಗ್ಗೆ ತಾಲೂಕಿನ ಬೆಳಕೆ ಪಂಚಾಯತ್ ವ್ಯಾಪ್ತಿಯ ಕಂಚಿಕೇರಿಯ ನಾಗರಾಜ ಗಣಪತಿ ಹೆಗಡೆ ಎಂಬುವವರ ಮನೆಯಲ್ಲಿ ಯಾರು ಇಲ್ಲದ ವೇಳೆ ಹಾಡಹಗಲೇ ಮನೆ ಬಾಗಿಲು ಮುರಿದು ನಗದು ಹಾಗೂ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮೀಣ ಠಾಣಾ ಪೊಲೀಸರ ಕ್ಷೀಪ್ರ ತನಿಖೆ ನಡೆಸಿದ್ದು ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ.

ಬಂಧಿತ ಆರೋಪಿ

ಕುಂದಾಪುರದ ಕೋಟೇಶ್ವರದ ವಿಲ್ಸನ್ ಅಲಿಯಾಸ ಬಾಳಾ ತಂದೆ ಪಿಯದಾದ್ ಲೂಪಿಸ್(28) ಬಂಧಿತ ಆರೋಪಿ. ಜ.4ರಂದು ಬೆಳಿಗ್ಗೆ 8.30 ಸುಮಾರಿಗೆ ಮನೆಯ ಬಾಗಿಲು ಮುರಿದು 75 ಸಾವಿರ ನಗದು ಹಾಗೂ 48 ಸಾವಿರ ಮೌಲ್ಯದ (16 ಗ್ರಾಂ ತೂಕದ)ಬಂಗಾರದ ಚೈನು, ಎರಡು ಉಂಗುರ, ಒಂದು ಜೊತೆ ಕಿವಿಯೋಲೆ ಕಳುವು ಮಾಡಲಾಗಿತ್ತು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಮನೆಯ ಮಾಲೀಕ ನಾಗರಾಜ ಗಣಪತಿ ಹೆಗಡೆ ದೂರು ನೀಡಿದ್ದರು.

ಕಳ್ಳತನ ನಡೆದ ಸ್ಥಳದಲ್ಲಿ ಪೊಲೀಸರಿಂದ ಸ್ಥಳ ಪರಿಶೀಲನೆ

ಆರೋಪಿತನಿಂದ ಒಟ್ಟು 38.54 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Intro:ಭಟ್ಕಳ ಬೆಳಕೆಯ ಮನೆಯೊಂದರ ಕಳ್ಳತನ ಪ್ರಕರಣ ಭೇಧಿಸಿ ಆರೋಪಿ ಬಂಧಿಸಿದ ಗ್ರಾಮೀಣ ಠಾಣಾ ಪೊಲೀಸರು’

10 ದಿನದ ಕ್ಷೀಪ್ರಗತಿಯ ತನಿಖೆಯಿಂದ ಮಂಕಿ ವ್ಯಾಪ್ತಿಯ ಇನ್ನೊಂದು ಪ್ರಕರಣವೂ ಬಯಲು’: ಎಸ್ಪಿ ದೇವರಾಜು ತನಿಖೆಯ ಬಗ್ಗೆ ಪ್ರಶಂಸೆ’

ಭಟ್ಕಳ: ಇದೇ ಜನವರಿ 4ರಂದು ಬೆಳಿಗ್ಗೆ ತಾಲೂಕಿನ ಬೆಳಕೆ ಪಂಚಾಯತ್ ವ್ಯಾಪ್ತಿಯ ಕಂಚಿಕೇರಿಯ ನಾಗರಾಜ ಗಣಪತಿ ಹೆಗಡೆ ಎಂಬುವವರ ಮನೆಯಲ್ಲಿ ಯಾರು ಇಲ್ಲದ ವೇಳೆ ಹಾಡು ಹಗಲೇ ಮನೆ ಬಾಗಿಲು ಮುರಿದು ನಗದು ಹಾಗೂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮೀಣ ಠಾಣಾ ಪೊಲೀಸರ ಕ್ಷೀಪ್ರ ಗತಿಯ ತನಿಖೆಯಿಂದಾಗಿ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಳ್ಳತನಗೊಂಡ ಮಾಲು ಸಮೇತ ಬಂಧಿಸಿದ್ದಾರೆ.
Body:ಬಂಧಿತ ಆರೋಪಿಯೂ ಹೊನ್ನಾವರದ ಮಂಕಿಯ ಚರ್ಚವಾಡ ದೊಡ್ಡ ಹಿತ್ಲು ಹಾಲಿ ಈತನು ಕುಂದಾಪುರದ ಕೋಟೇಶ್ವರದ ವಿಲ್ಸನ್ ಅಲಿಯಾಸ ಬಾಳಾ ತಂದೆ ಪಿಯದಾದ್ ಲೂಪಿಸ್(28) ಎಂದು ತಿಳಿದು ಬಂದಿದೆ

ಜನವರಿ 4ರಂದು ಬೆಳಿಗ್ಗೆ ಸುಮಾರಿಗೆ ಮನೆಯ ಮಾಲಿಕ ನಾಗರಾಜ ಹೆಗಡೆ ಅಂಬಾಗಿಲಿಗೆ ಪೂಜೆಗೆ ತೆರಳಿದ್ದು, ಪತ್ನಿ ಅಂಗನವಾಡಿ ಶಿಕ್ಷಕಿಯಾಗಿದ್ದು ಅವರು ಕೆಲಸಕ್ಕೆ ತೆರಳಿದ್ದು ಮಗಳು ಕಾಲೇಜಿಗೆ ತೆರಳಿದ್ದಾಳೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12 ಗಂಟೆಯೊಳಗೆ ಮನೆಯ ಬಾಗಿಲು ಮುರಿದು ಒಳಹೊಕ್ಕಿ ಎರಡು ಕಪಾಟನ್ನು ಒಡೆದು ಅದರಲ್ಲಿನ 75 ನಗದು ಹಾಗೂ 48 ಸಾವಿರ ಮೌಲ್ಯದ (16 ಗ್ರಾಂ ತೂಕದ)ಬಂಗಾರದ ಚೈನು, ಎರಡು ಉಂಗುರ, ಒಂದು ಜೊತೆ ಕಿವಿಯೋಲೆ ಕಳುವು ಮಾಡಿಕೊಂಡು ಮನೆಯಲ್ಲಿದ್ದ ಲಡ್ಡು ತಿಂದು ಪರಾರಿಯಾಗಿ ಹೋದ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಮನೆಯ ಮಾಲೀಕ ನಾಗರಾಜ ಹೆಗಡೆ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು.

ದೂರು ದಾಖಲಿಸಿಕಂಡು ತನಿಖೆ ಮುಂದುವರೆಸಿದ ಗ್ರಾಮೀಣ ಠಾಣಾ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್, ಭಟ್ಕಳ ಎಎಸ್ಪಿ ನಿಖಿಲ್ ಬಿ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ ಸಿಪಿಐ ಎಂ.ಎಸ್. ಪ್ರಕಾಶ ಹಾಗೂ ಗ್ರಾಮೀಣ ಠಾಣಾ ಪಿಎಸೈ ಓಂಕಾರಪ್ಪ ಅವರ ನೇತೃತ್ವದ ತಂಡದ ಕ್ಷೀಪ್ರಗತಿಯ ಕಾರ್ಯಚರಣೆ ನಡೆಸಿದ್ದಾರೆ. ಕಳ್ಳತನವಾದ 15 ದಿನದ ಕಾರ್ಯಚರಣೆಯಲ್ಲಿ ಆರೋಪಿಯನ್ನು 10 ದಿನದಲ್ಲಿ ಪತ್ತೆ ಹಚ್ಚಿದ್ದು ಸೋಮವಾರದಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಕೆ ಮನೆಯ ಕಳ್ಳತನದ ಆರೋಪಿತನಿಂದ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಳವು ಪ್ರಕರಣವೊಂದು ಪತ್ತೆ ಹಚ್ಚಿದ ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಆರೋಪಿತನಿಂದ ಒಟ್ಟು 38.54 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಗ್ರಾಮೀಣ ಠಾಣಾ ಎಎಸೈ ಮಂಜುನಾಥ ಬಿ. ಗೌಡರ್, ಸಿಬ್ಬಂದಿಗಳಾದ ಮಹೇಶ ಪಟಗಾರ, ಅರುಣ ಪಿಂಟೋ, ದೇವು ಆರ್.ನಾಯ್ಕ ಸತ್ಯಾನಂದ ನಾಯ್ಕ, ನಿಂಗನಗೌಡ ಪಾಟೀಲ ಅವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
Conclusion:ಉದಯ ನಾಯ್ಕ ಭಟ್ಕಳ

ABOUT THE AUTHOR

...view details