ಕರ್ನಾಟಕ

karnataka

ಕೊರೊನಾ ತಡೆಗೆ ಹಳ್ಳಿ ಔಷಧಿ ಕುಡಿದು ಮಗ ಸಾವು, ತಂದೆ ಸ್ಥಿತಿ ಗಂಭೀರ: ಶಿರಸಿಯಲ್ಲಿ ದುರಂತ

By

Published : May 24, 2020, 9:43 AM IST

ಕೊರೊನಾ ತಡೆಯಬೇಕೆಂದು ಏನೋ ಮಾಡಲು ಹೋಗಿ ಇನ್ನೇನೋ ಯಡವಟ್ಟು ಆಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಹಳ್ಳಿ ಔಷಧಿ ಕುಡಿದು ಮಗ ಸಾವನ್ನಪ್ಪಿದ್ದರೆ, ತಂದೆಯ ಸ್ಥಿತಿ ಗಂಭೀರವಾಗಿದೆ.

ಕೊರೊನಾ ತಡೆಗೆ ಹಳ್ಳಿ ಔಷಧ ಕುಡಿದು ಮಗ ಸಾವು
ಕೊರೊನಾ ತಡೆಗೆ ಹಳ್ಳಿ ಔಷಧ ಕುಡಿದು ಮಗ ಸಾವು

ಶಿರಸಿ: ಕೊರೊನಾ ಸೋಂಕಿಗೆ ತುತ್ತಾಗಬಾರದೆಂದು ಆರೋಗ್ಯವರ್ಧಕ ಹಳ್ಳಿ ಔಷಧಿ ಕುಡಿದ ಪರಿಣಾಮ ಮಗ ಸಾವನ್ನಪ್ಪಿದ್ದು, ತಂದೆಯ ಪರಿಸ್ಥಿತಿ ಗಂಭೀರವಾಗಿರುವ ಘಟನೆ ತಾಲೂಕಿನ ರಾಮನಬೈಲಿನಲ್ಲಿ ನಡೆದಿದೆ.

ಕೊರೊನಾ ತಡೆಗೆ ಹಳ್ಳಿ ಔಷಧ ಕುಡಿದು ಮಗ ಸಾವು, ತಂದೆ ಸ್ಥಿತಿ ಗಂಭೀರ

ರಾಮನಬೈಲಿನ ಫ್ರಾನ್ಸಿಸ್ ರೇಘೋ(42) ಮೃತರು ಹಾಗೂ ಅಂಥೋನಿ(70) ಅಸ್ವಸ್ಥರಾದವರು.

ಗ್ರಾಮೀಣ ಪ್ರದೇಶದಿಂದ ತಂದ ಯಾವುದೋ ಔಷಧವನ್ನು ಕಾಯಿಸಿ ತಂದೆ- ಮಗ ಸೇವಿಸಿದ್ದರು. ಆದ್ರೆ, ಈ ಔಷಧಿ ಅಡ್ಡಪರಿಣಾಮ ಬೀರಿ​ ಮಗ ಸಾವನ್ನಪ್ಪಿದ್ದಾನೆ. ಬಳಿಕ ಅಸ್ವಸ್ಥಗೊಂಡ ಅಂಥೋನಿಯವರನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ABOUT THE AUTHOR

...view details