ಕರ್ನಾಟಕ

karnataka

ಕಳಪೆ ರಸ್ತೆ ಕಾಮಗಾರಿ ಆರೋಪ... ಯಂತ್ರದೊಂದಿಗೆ ತೆರಳಿ ಪರಿಶೀಲಿಸಿದ ಡಿಸಿ!

By

Published : Jun 28, 2019, 7:36 PM IST

ಜೋಯಿಡಾ ತಾಲೂಕಿನ ವಿವಿಧ ಭಾಗಗಳಲ್ಲಿ ನಡೆಸಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಕಳಪೆ ಗುಣಮಟ್ಟ ಹೊಂದಿವೆ ಎಂದು ವ್ಯಾಪಕ ದೂರುಗಳು ಬಂದ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್​ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳಪೆ ರಸ್ತೆ ಕಾಮಗಾರಿ ಆರೋಪ... ಯಂತ್ರದೊಂದಿಗೆ ತೆರಳಿ ಪರಿಶೀಲಿಸಿದ ಜಿಲ್ಲಾಧಿಕಾರಿ

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ವಿವಿಧ ಭಾಗಗಳಲ್ಲಿ ನಡೆಸಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟ ಹೊಂದಿವೆ ಎಂದು ವ್ಯಾಪಕ ದೂರುಗಳು ಬಂದ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್​ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಿಎಂಜಿಎಸ್​ವೈ ಹಾಗೂ ಡಿಯುಡಿಸಿ ಮತ್ತು ಪಿಡಬ್ಲ್ಯೂಡಿ ಎಂಜನಿಯರ್​ಗಳ ತಂಡ ಹಾಗೂ ರಸ್ತೆ ಗುಣಮಟ್ಟ ಯಂತ್ರದೊಂದಿಗೆ ತೆರಳಿದ ಜಿಲ್ಲಾಧಿಕಾರಿ, ಜೋಯಿಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ದಿಗಲಂಬಾ, ಕಳಸೈ ರಸ್ತೆ ಮತ್ತು ಸೇತುವೆ ಕಾಮಗಾರಿ, ಮೆಸ್ತ-ಬಿರೋಡಾ ರಸ್ತೆ ಮತ್ತು ಚರಂಡಿ ಕಾಮಗಾರಿ, ಕಟೇಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೆಂದಲ ಮಹಾರಾಜ ರಸ್ತೆ ಮತ್ತು ಸೇತುವೆ, ಕುಂದಲ ಹಾಗೂ ತೇರಾಲಿ ರಸ್ತೆ, ಅಣಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಡೊಕರಪ್ಪಾ, ನಿಗುಂದಿ ಹಾಗೂ ದೂದ್‍ಗಲ್ಲಿ ರಸ್ತೆ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸಿದರು.

ಕೆಲ ಭಾಗದ ರಸ್ತೆಗಳಲ್ಲಿ ಕಳಪೆ ಗುಣಮಟ್ಟದ ಡಾಂಬರೀಕರಣ ಮಾಡಿರುವುದು ಕಂಡು ಬಂದಿದ್ದು, ಅಂತಹ ಕಾಮಗಾರಿಗಳ ಅನುದಾನವನ್ನು ಕಾಮಗಾರಿ ಸರಿಪಡಿಸುವವರೆಗೂ ತಡೆ ಹಿಡಿಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

Intro:ಕಳಪೆ ರಸ್ತೆ ಕಾಮಗಾರಿ ಆರೋಪ... ಯಂತ್ರದೊಂದಿಗೆ ತೆರಳಿ ಪರಿಶೀಲಿಸಿದ ಡಿಸಿ
ಕಾರವಾರ: ಜೋಯಿಡಾ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ನಡೆಸಿದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟ ಇಲ್ಲದ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಇಂದು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪಿಎಂಜಿಎಸ್ ವೈ ಹಾಗೂ ಡಿಯುಡಿಸಿ ಮತ್ತು ಪಿಡಬ್ಲೂಡಿ ಎಂಜನೀಯರ್‍ಗಳ ತಂಡ ಹಾಗೂ ರಸ್ತೆ ಗುಣ ಮಟ್ಟ ಯಂತ್ರದೊಂದಿಗೆ ತೆರಳಿದ ಜಿಲ್ಲಾಧಿಕಾರಿ ಜೋಯಿಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ದಿಗಲಂಬಾ-ಕಳಸೈ ರಸ್ತೆ ಮತ್ತು ಸೇತುವೆ ಕಾಮಗಾರಿ, ಮೆಸ್ತ-ಬಿರೋಡಾ ರಸ್ತೆ ಮತ್ತು ಚರಂಡಿ ಕಾಮಗಾರಿ, ಕಟೇಲಿ ಗ್ರಾಮ ಪಂಚಾಯತ್ ವ್ಯ್ಯಾಪ್ತಿಯ ಶೆಂದಲ ಮಹಾರಾಜ ರಸ್ತೆ ಮತ್ತು ಸೇತುವೆ, ಕುಂದಲ ಹಾಗೂ ತೇರಾಲಿ ರಸ್ತೆ, ಅಣಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಡೊಕರಪ್ಪಾ, ನಿಗುಂದಿ ಹಾಗೂ ದೂದ್‍ಗಲ್ಲಿ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿದರು.
ಕೆಲ ಭಾಗದ ರಸ್ತೆಗಳಲ್ಲಿ ಕಳಪೆ ಗುಣಮಟ್ಟದ ಡಾಂಬರಿಕರಣ ಮಾಡಿರುವುದು ಕಂಡುಬಂದಿದ್ದು, ಅಂತಹ ಕಾಮಗಾರಿಗಳ ಅನುದಾನವನ್ನು ಕಾಮಗಾರಿ ಸರಿಪಡಿಸುವರೆಗೂ ತಡೆ ಹಿಡಿಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚಿಸಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ರೋಶನ್ ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಇದ್ದರು.Body:ಕConclusion:ಕ

TAGGED:

ABOUT THE AUTHOR

...view details