ಕರ್ನಾಟಕ

karnataka

ಮೃತಪಟ್ಟು 10 ದಿನ ಕಳೆದರೂ ಹೋಗದ ಆತ್ಮ; ಬೌದ್ಧ ಸನ್ಯಾಸಿಯ ಮೃತದೇಹಕ್ಕೆ ನಿತ್ಯವೂ ಪೂಜೆ

By

Published : Sep 19, 2021, 8:31 PM IST

Updated : Sep 19, 2021, 8:45 PM IST

ಮೃತಪಟ್ಟು 10 ದಿನ ಕಳೆದರೂ ಹೋಗದ ಆತ್ಮ
ಮೃತಪಟ್ಟು 10 ದಿನ ಕಳೆದರೂ ಹೋಗದ ಆತ್ಮ ()

ಟಿಬೆಟಿಯನ್ ಕಾಲೋನಿಯ ಕ್ಯಾಂಪ್ ನಂ.1ರ ಶರ ಗಾದೆನ್ ಬೌದ್ಧಮಠದ ಹಿರಿಯ ಬೌದ್ಧ ಸನ್ಯಾಸಿ ಯೇಷಿ ಪುನತ್ಸೊ(90 ವರ್ಷ) ಸೆ.9 ರಂದು ನಿಧನರಾಗಿದ್ದಾರೆ.

ಕಾರವಾರ:ಹತ್ತು ದಿನಗಳ ಹಿಂದೆ ಮೃತಪಟ್ಟ ಬೌದ್ಧ ಸನ್ಯಾಸಿಯ ದೇಹದಿಂದ ಆತ್ಮ ಹೋಗಿಲ್ಲ ಎಂಬ ಕಾರಣಕ್ಕೆ ಕಳೆದ 10 ದಿನಗಳಿಂದ ಮೃತಪಟ್ಟ ಹಾಸಿಗೆ ಮೇಲೆಯೇ ಬೌದ್ಧ ಸನ್ಯಾಸಿಗೆ ಪೂಜೆ ಸಲ್ಲಿಸುತ್ತಿರುವ ಘಟನೆ ಮುಂಡಗೋಡ ತಾಲ್ಲೂಕಿನ ಟಿಬೆಟಿಯನ್ ಕಾಲೋನಿಯಲ್ಲಿ ನಡೆದಿದೆ.

ಮೃತಪಟ್ಟು 10 ದಿನ ಕಳೆದರೂ ಹೋಗದ ಆತ್ಮ

ಟಿಬೆಟಿಯನ್ ಕಾಲೋನಿಯ ಕ್ಯಾಂಪ್ ನಂ.1ರ ಶರ ಗಾದೆನ್ ಬೌದ್ಧಮಠದ ಹಿರಿಯ ಬೌದ್ಧ ಸನ್ಯಾಸಿ ಯೇಷಿ ಪುನತ್ಸೊ(90 ವರ್ಷ) ಸೆ.9 ರಂದು ನಿಧನರಾಗಿದ್ದಾರೆ. ಮಂಚದ ಮೇಲೆ ಮಲಗಿದಲ್ಲಿಯೇ ಸಾವನ್ನಪ್ಪಿರುವ ಯೇಷಿ ಪುನತ್ಸೊ ಅವರ ಮೃತದೇಹವನ್ನು ಹಿರಿಯ ಬೌದ್ಧ ಬಿಕ್ಕುಗಳು ಆಗಾಗ ಪರೀಕ್ಷಿಸುತ್ತಿದ್ದಾರೆ.

ಕೋಣೆಯಲ್ಲಿ ದೀಪಗಳನ್ನು ಹಚ್ಚಿ ಪ್ರಾರ್ಥಿಸುತ್ತಿದ್ದಾರೆ. ಕೋಣೆಯೊಳಗೆ ಹಿರಿಯ ಬಿಕ್ಕುಗಳು ಮಾತ್ರ ಒಳ ಹೋಗಿ ಆತ್ಮ ಹೋಗಿದೆಯೇ? ಎಂದು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಟಿಬೆಟಿಯನ್ ಬೌದ್ಧ ಧರ್ಮದಲ್ಲಿ ಹಿರಿಯ ಸನ್ಯಾಸಿಗಳು ಮೃತಪಟ್ಟಾಗ ಆತ್ಮ ಹೋಗುವವರೆಗೂ ಅಂದರೆ ಮೃತದೇಹದ ಮೂಗು, ಬಾಯಿಯಿಂದ ದ್ರವ ಬರುವವರೆಗೂ ಇಲ್ಲವೆ ವಾಸನೆ ಬರುವವರೆಗೂ ದೇಹದಲ್ಲಿ ಆತ್ಮ ಇರುತ್ತದೆ ಎಂದು ನಂಬಲಾಗುತ್ತದೆ.

ಇದನ್ನು ಹಿರಿಯ ಬೌದ್ಧ ಸನ್ಯಾಸಿಗಳು ಪರೀಕ್ಷಿಸಿ ಖಚಿತ ಪಡಿಸುತ್ತಾರೆ. ಈ ಹಿಂದೆ ಇದೇ ಟಿಬೆಟಿಯನ್ ಕಾಲೋನಿಯಲ್ಲಿ ನಾಲ್ವರು ಬೌದ್ಧ ಸನ್ಯಾಸಿಗಳು ಮೃತಪಟ್ಟ ಬಳಿಕ ಇದೇ ರೀತಿ ಇಟ್ಟು ಪೂಜಿಸಲಾಗಿತ್ತು. ನಂತರ ವಾರ, ಹದಿನೈದು ದಿನಗಳ ಬಳಿಕ ವಾಸನೆ ಬಂದಾಗ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ ಎನ್ನಲಾಗಿದೆ.

Last Updated :Sep 19, 2021, 8:45 PM IST

ABOUT THE AUTHOR

...view details