ಕರ್ನಾಟಕ

karnataka

ಎಸ್​ಎಸ್​ಎಲ್​ಸಿ: ಅಂಧ ವಿದ್ಯಾರ್ಥಿ ಶಾಯಲ್​ ಉತ್ತಮ ಸಾಧನೆ

By

Published : May 2, 2019, 3:52 AM IST

Updated : May 2, 2019, 4:18 AM IST

ಉತ್ತರಕನ್ನಡ ಜಿಲ್ಲೆಯ ಅಂಧ ವಿದ್ಯಾರ್ಥಿವೋರ್ವ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಶೇ. 70 ರಷ್ಟು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ.

ಅಂಧ ವಿದ್ಯಾರ್ಥಿ ಶಾಯಲ್​ಗೆ ಶೇ. 70 ಅಂಕ

ಕಾರವಾರ: ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಅಂಧ ವಿದ್ಯಾರ್ಥಿವೋರ್ವ ಶೇ. 70 ರಷ್ಟು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ.

ಅಂಧ ವಿದ್ಯಾರ್ಥಿ ಶಾಯಲ್​ಗೆ ಶೇ. 70 ಅಂಕ

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯ ಸರ್ಕಾರಿ ಪ್ರೌಢಶಾಲೆಯ ಶಾಯಲ್ ಅಂಥೋನಿ ಗೋಮ್ಸ ಶೇ. 70 ರಷ್ಟು ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ.

ಶಾಯಲ್ ಅಂಧನಾದ ಕಾರಣ 9ನೇ ತರಗತಿ ವಿದ್ಯಾರ್ಥಿ ದಯಾನಂದ ಪರೀಕ್ಷೆ ಬರೆದಿದ್ದ. ಇದೀಗ ಫಲಿತಾಂಶದಲ್ಲಿ ಉತ್ತಮ ಅಂಕ ಬರುತ್ತಿದ್ದಂತೆ ಸಾಧನೆಗೆ ಸಹಕರಿಸಿದ ವಿದ್ಯಾರ್ಥಿ ದಯಾನಂದನಿಗೆ ಧನ್ಯವಾದ ತಿಳಿಸಿದ್ದಾನೆ. ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುವ ಶಾಯಲ್ ಸಾಧನೆ ಕಂಡು ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 12 ರಂದು ರಾಜ್ಯಾದ್ಯಂತ ಬಿಡುಗಡೆಯಾದ ವಿರೂಪ ಮಕ್ಕಳ ಚಿತ್ರದಲ್ಲಿ ಆಂಥೋನಿ ಅಂಧ ಬಾಲಕನ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದು, ಈಗ ತನ್ನ ವಿದ್ಯಾಭ್ಯಾಸದಲ್ಲಿಯೂ ಸಹ ಸಾಧನೆ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾನೆ

Intro:ಅಂಧ ವಿದ್ಯಾರ್ಥಿ ಶಾಯಲ್ ಗೆ ಶೇ. ೭೦ ಅಂಕ
ಕಾರವಾರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಂಧ ವಿದ್ಯಾರ್ಥಿಯೋರ್ವ ಶೇ. ೭೦ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುಂಡಳ್ಳಿಯ ಸರಕಾರಿ ಪ್ರೌಢಶಾಲೆಯ ಶಾಯಲ್ ಅಂಥೋನಿ ಗೋಮ್ಸ ಶೇ. ೭೦ ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾನೆ. ಅದರಲ್ಲಿ ಕನ್ನಡ 76, ಇಂಗ್ಲೀಷ 65, ಹಿಂದಿ 83, ಸಮಾಜಶಾಸ್ತ್ರ 92, ರಾಜಕೀಯ ವಿಜ್ಞಾನ 65 ಹಾಗೂ ಸಮಾಜ ವಿಜ್ಞಾನ 44 ಅಂಕಗಳೊಂದಿಗೆ ಶೇ. 70 ಫಲಿತಾಂಶವನ್ನು ಪಡೆದಿದ್ದಾನೆ.
ಶಾಯಲ್ ಅಂಧನಾದ ಕಾರಣ ಪರೀಕ್ಷೆಯನ್ನು 9ನೇ ತರಗತಿ ವಿದ್ಯಾರ್ಥಿ ದಯಾನಂದ ಬರೆದಿದ್ದ. ಇದೀಗ ಫಲಿತಾಂಶದಲ್ಲಿ ಉತ್ತಮ ಅಂಕ ಬರುತ್ತಿದ್ದಂತೆ ಸಾಧನೆಗೆ ಸಹಕರಿಸಿದ ವಿದ್ಯಾರ್ಥಿ ದಯಾನಂದನಿಗೆ ಧನ್ಯವಾದ ತಿಳಿಸಿದ್ದಾನೆ.
ಇನ್ನು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು ಶಾಯಲ್ ಗೋಮ್ಸನ ಸಾಧನೆಯನ್ನು ಕಂಡು ಪಾಲಕರು ಸಂತಸ ವ್ಯಕ್ತಪಡಿಸಿದರು. ಏಪ್ರಿಲ್ 12 ರಂದು ರಾಜ್ಯಾದ್ಯಂತ ಬಿಡುಗಡೆಯಾದ ವಿರೂಪ ಮಕ್ಕಳಚಿತ್ರದಲ್ಲಿ ವಿನ್ಸೆಂಟ ಅಂಧ ಬಾಲಕನ ಪಾತ್ರದಲ್ಲಿ ಅಭಿನಯಿಸಿಸೈ ಎನ್ನಿಸಿಕೊಂಡಿದ್ದು, ಈಗ ತನ್ನ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿಯೂ ಸಹ ಸಾಧನೆ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾನೆ.Body:KConclusion:K
Last Updated :May 2, 2019, 4:18 AM IST

TAGGED:

ABOUT THE AUTHOR

...view details