ಕರ್ನಾಟಕ

karnataka

ರೈತರ ಹೋರಾಟಕ್ಕಷ್ಟೇ ನಮ್ಮ ಬೆಂಬಲ, ಭಾರತ್ ಬಂದ್​ಗೆ ಇಲ್ಲ : ಕರವೇ ಸ್ಪಷ್ಟನೆ

By

Published : Dec 7, 2020, 9:26 AM IST

ದೇಶದ ಸುಮಾರು 300 ರೈತ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 8ರ ಭಾರತ ಬಂದ್​ಗೆ ಉಡುಪಿ ಜಿಲ್ಲೆಯಲ್ಲಿ ಎಡಪಕ್ಷಗಳು ಬೆಂಬಲ ಘೋಷಿಸಿವೆ. ಉಡುಪಿಯಲ್ಲಿ ಸಭೆ ಸೇರಿದ ಸಿಐಟಿಯು ಸಂಘಟನೆಯ ಸದಸ್ಯರು, ರೈತರ ಹೋರಾಟಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ..

karave will not  supports  Bharat band
ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿಕೆ

ಉಡುಪಿ: ರೈತರ ಹೋರಾಟಕ್ಕೆ ಬೆಂಬಲ ನೀಡ್ತೇವೆ. ಆದರೆ, ಭಾರತ್ ಬಂದ್​ಗೆ ಬೆಂಬಲ ಇಲ್ಲ ಅಂತಾ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿಕೆ

ಡಿ. 8ರಂದು ರೈತ ಸಂಘಟನೆಗಳ ಭಾರತ್ ಬಂದ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೊರೊನಾ ಸಂಕಟದಿಂದ ಜನತೆ ಅತೀವ ತೊಂದರೆಯಲ್ಲಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಸಾಕಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರು, ಆಟೋಚಾಲಕರು ಬೀದಿಗೆ ಬಂದಿದ್ದಾರೆ. ಜನರು ಸಮಸ್ಯೆಯಲ್ಲಿರುವಾಗ ಮತ್ತೆ ಮತ್ತೆ ಬಂದ್​ಗೆ ಕರೆ ನೀಡುವುದು ಸರಿಯಲ್ಲ. ರೈತರ ಹೋರಾಟಕ್ಕೆ ಸದಾಕಾಲ ನಮ್ಮ ಬೆಂಬಲ ಇದೆ. ಆದರೆ, ಯಾವುದೇ ಕಾರಣಕ್ಕೂ ಬಂದ್​ಗೆ​​ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತ್​ ಬಂದ್​ಗೆ ಎಡಪಕ್ಷಗಳ ಬೆಂಬಲ :ದೇಶದ ಸುಮಾರು 300 ರೈತ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 8ರ ಭಾರತ ಬಂದ್​ಗೆ ಉಡುಪಿ ಜಿಲ್ಲೆಯಲ್ಲಿ ಎಡಪಕ್ಷಗಳು ಬೆಂಬಲ ಘೋಷಿಸಿವೆ. ಉಡುಪಿಯಲ್ಲಿ ಸಭೆ ಸೇರಿದ ಸಿಐಟಿಯು ಸಂಘಟನೆಯ ಸದಸ್ಯರು, ರೈತರ ಹೋರಾಟಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಕಾರ್ಪೊರೇಟ್ ಕಂಪನಿಗಳ ಪರವಾಗಿರುವ ಈ ತಿದ್ದುಪಡಿಯನ್ನು ನಾವು ವಿರೋಧಿಸುತ್ತೇವೆ ಎಂದು ಸಿಪಿಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಸಿಪಿಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ

ಉಡುಪಿಯಲ್ಲಿ ಮಾತನಾಡಿದ ಅವರು, ಅದಾನಿ-ಅಂಬಾನಿಗಳಿಗೆ ಬೆಂಬಲ ನೀಡುವ ಇಂತಹ ಕಾಯ್ದೆಗಳಿಗೆ ನಮ್ಮ ಬೆಂಬಲವಿಲ್ಲ. ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಸಿಪಿಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.

ABOUT THE AUTHOR

...view details