ಕರ್ನಾಟಕ

karnataka

ಕಂದಾಯ ಸಚಿವ ಆರ್​. ಅಶೋಕ್ ವಿರುದ್ಧ ಮೀನುಗಾರ ಸಮುದಾಯ ಆಕ್ರೋಶ

By

Published : May 18, 2021, 10:38 PM IST

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಡಲಕೊರೆತ ವೀಕ್ಷಣೆಯನ್ನು ತರಾತುರಿಯಲ್ಲಿ ಮುಗಿಸಿದರು. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೆಲ ನಿಮಿಷಗಳ ಕಾಲ ಅಧಿಕಾರಿಗಳ ಸಭೆ ನಡೆಸಿ, ನೇರ ಮಂಗಳೂರಿಗೆ ತೆರಳಿ ಅಲ್ಲಿಂದ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

fisheries-community-outrage-against-minister-r-ashok
ಅಕ್ರೋಶ

ಉಡುಪಿ:ಕಂದಾಯ ಸಚಿವ ಆರ್ ಅಶೋಕ್ ತೌಕ್ತೆ ಚಂಡಮಾರುತದಷ್ಟೇ ವೇಗದಲ್ಲಿ ಕರಾವಳಿ ಜಿಲ್ಲೆ ಉಡುಪಿಯ ಪ್ರವಾಸ ಪೂರೈಸಿದ್ದಾರೆ ಎಂದು ಆಗ್ರಹಿಸಿ, ಮೀನುಗಾರ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಚಂಡಮಾರುತದಿಂದ ಉಂಟಾದ ಹಾನಿಯ ಪರಿಶೀಲನೆಗೆ ಸಚಿವ ಅಶೋಕ್ ಉಡುಪಿ ಜಿಲ್ಲೆಗೆ ಬಂದಿದ್ದರು. ಬೈಂದೂರು ತಾಲೂಕಿನ ಮರವಂತೆ ಬೀಚ್​ನಲ್ಲಿ ಚಂಡಮಾರುತದಿಂದ ಅಪಾರ ಹಾನಿಯಾಗಿತ್ತು. ಸಚಿವರೊಂದಿಗೆ ತಮ್ಮ ನೋವು ಹೇಳಿಕೊಳ್ಳಲು ಮೀನುಗಾರರು ಕಾದಿದ್ದರು. ಆದರೆ, ಕೆಲವೇ ನಿಮಿಷಗಳಲ್ಲಿ ಪರಿಶೀಲನೆ ನಡೆಸಿ ನೇರವಾಗಿ ಜಿಲ್ಲಾ ಕೇಂದ್ರಕ್ಕೆ ತೆರಳಿದರು.

ಸಚಿವ ಆರ್​. ಅಶೋಕ್ ವಿರುದ್ಧ ಮೀನುಗಾರ ಸಮುದಾಯ ಅಕ್ರೋಶ

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಡಲಕೊರೆತ ವೀಕ್ಷಣೆಯನ್ನು ತರಾತುರಿಯಲ್ಲಿ ಮುಗಿಸಿದರು. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೆಲ ನಿಮಿಷಗಳ ಕಾಲ ಅಧಿಕಾರಿಗಳ ಸಭೆ ನಡೆಸಿ, ನೇರ ಮಂಗಳೂರಿಗೆ ತೆರಳಿ ಅಲ್ಲಿಂದ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಇದರಿಂದ ಕಂದಾಯ ಸಚಿವರ ಪ್ರವಾಸಕ್ಕೆ ಮೀನುಗಾರ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬೆಂಗಳೂರಿನಿಂದ ಉಡುಪಿಗೆ ಟೂರ್​ಗೆ ಬಂದಿದ್ದ ಎಂದು ಕಿಡಿಕಾರಿದರು, ಇನ್ನು ಮುಂದೆ ಯಾವ ಜನಪ್ರತಿನಿಧಿ ಕರೆದರೂ ನಾವು ಸಮಸ್ಯೆ ಹೇಳಿಕೊಂಡು ಹೋಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details