ಕರ್ನಾಟಕ

karnataka

ಉಡುಪಿ: ತಾಯಿ ಊಟ ಬಡಿಸಲಿಲ್ಲವೆಂದು ಕೋಪಗೊಂಡು ಆತ್ಮಹತ್ಯೆಗೆ ಶರಣಾದ ಮಗ

By

Published : Jul 12, 2022, 9:27 AM IST

ಕ್ಷುಲ್ಲಕ ಕಾರಣಕ್ಕೆ ನೊಂದು ಓರ್ವ ಬಾಲಕ ಆತ್ಮಹತ್ಯೆಗೆ ಶರಣಾದರೆ, ಅಪಘಾತ ಸಂಭವಿಸಿ ಇಬ್ಬರು ಸಾವಿಗೀಡಾದ ಘಟನೆ ಉಡುಪಿಯಲ್ಲಿ ನಡೆದಿದೆ.

bike rider died after accident
ಬೈಕ್​ಗೆ ಕಾರು ಡಿಕ್ಕಿಯಾಗಿ ಸವಾರ ಸಾವು

ಉಡುಪಿ: ತಾಯಿ ಊಟ ಬಡಿಸಲಿಲ್ಲ ಎಂಬ ಕಾರಣಕ್ಕೆ ಮಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 11ರಂದು ಕೋಟ ಠಾಣಾ ವ್ಯಾಪ್ತಿಯ ಕಾರ್ಕಡದಲ್ಲಿ ನಡೆದಿದೆ. ಲಕ್ಷ್ಮೀ ಎಂಬುವವರ ಮಗ ನಾಗೇಂದ್ರ (14) ಮೃತಪಟ್ಟ ಬಾಲಕ.

ನಾಗೇಂದ್ರ ಕೋಟ ವಿವೇಕ ಹೈಸ್ಕೂಲಿನಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ. ತಾಯಿ ಲಕ್ಷ್ಮೀ ಕಾರ್ಕಡದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು. ಮಳೆ ಕಾರಣಕ್ಕೆ ಶಾಲೆಗೆ ರಜೆ ಇದ್ದ ಕಾರಣ ನಾಗೇಂದ್ರ ಕಾರ್ಕಡದ ಶಾಲಾ ಮೈದಾನದಲ್ಲಿ ಆಟವಾಡಲು ಹೋಗಿದ್ದು, ಮಧ್ಯಾಹ್ನ ಮನೆಗೆ ಬಂದವ ತನಗೆ ಊಟ ಬಡಿಸುವಂತೆ ತಾಯಿಗೆ ಹೇಳಿದ್ದಾನೆ. ಕ್ಯಾಂಟೀನ್​​ನಲ್ಲಿ ಗ್ರಾಹಕರಿದ್ದ ಕಾರಣಕ್ಕೆ ಮನೆಗೆ ಹೋಗಿ ಊಟ ಹಾಕಿಕೊಂಡು ತಿನ್ನುವಂತೆ ತಾಯಿ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಮಗ ಮನೆಯಲ್ಲಿ ಬಟ್ಟೆ ಒಣಗಿಸಲು ಕಟ್ಟಿದ್ದ ಹಗ್ಗದಿಂದ ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ- 2:ಬ್ರಹ್ಮಾವರದಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಕಾರೊಂದು ಡಿವೈಡರ್​ಗೆ ಡಿಕ್ಕಿ ಹೊಡೆದು ಬಳಿಕ ಬೈಕ್‌ನ ಮೇಲೆ ಬಿದ್ದು ಸವಾರ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಹೊಟೇಲ್ ಮಣಿಪಾಲ್ ಇನ್ ಬಳಿ ದುರ್ಘಟನೆ ಸಂಭವಿಸಿದೆ. ಬೈಕ್‌ ಸವಾರ (ವಿಜಯಪುರದ ನಿವಾಸಿ) ಸುನಿಲ್ (24) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಹ ಸವಾರ ಬಾಗಲಕೋಟೆ ನಿವಾಸಿ ಮಂಜುನಾಥ್‌ ಗಾಯಗೊಂಡಿದ್ದಾರೆ. ಉಡುಪಿ ನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ರೈತ ಸಂಘದ ಜೊತೆ ಸಿಎಂ ಸಂಧಾನ ಸಭೆ ಸಫಲ: ಪ್ರತಿಭಟನೆ ಕೈಬಿಟ್ಟ ಅನ್ನದಾತರು

ABOUT THE AUTHOR

...view details