ತುಮಕೂರು:ಬಿಜೆಪಿಗೆ ಬಂದ ನಂತರ ನಾವು ತೃಪ್ತಿಯಾಗಿದ್ದೇವೆ, ಮುಂದಿನ 2 ವರ್ಷ ಸರ್ಕಾರ ನಡೆಯಲಿದೆ. ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಆಡಳಿತಕ್ಕೆ ತರಲಿದ್ದೇವೆ ಎಂದು ಸಚಿವ ಎಂ.ಟಿ.ಬಿ ನಾಗರಾಜ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಾವು 17 ಮಂದಿಯೂ ತೃಪ್ತರಾಗಿದ್ದೇವೆ ಎಂದರು. ಇದೇ ವೇಳೆ ಪಕ್ಕದಲ್ಲಿಯೇ ಕುಳಿತಿದ್ದ ಸಚಿವ ಮಾಧುಸ್ವಾಮಿ “ಅತೃಪ್ತರನ್ನು ಬಿಟ್ಟು ತೃಪ್ತರನ್ನು ಏನು ಕೇಳುತ್ತೀರಿ’' ಹೇಳಿ ಮುಗುಳ್ನಕ್ಕರು.
ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ರಾಜ್ಯದಲ್ಲಿ ದೊಡ್ಡ ಕೈಗಾರಿಕೆಗಳು, ಎಚ್ಎಎಲ್, ಬಿಇಎಂಎಲ್, ಐಟಿಐ ಬಿಇಎಲ್ ಮುಚ್ಚಿವೆ. ಸಣ್ಣ ಕೈಗಾರಿಕೆಗಳು ಕೋವಿಡ್ ಬಂದ ನಂತರ ಬಹುತೇಕ ಮುಚ್ಚಿವೆ. ಶೇ.25ರಷ್ಟು ಸಣ್ಣ ಕೈಗಾರಿಕೆಗಳು ಆರ್ಥಿಕ ಹಾಗೂ ವಿವಿಧ ತೊಂದರೆಗಳಿಂದ ಮುಚ್ಚಲ್ಪಟ್ಟಿವೆ ಎಂದರು.
ಸರ್ಕಾರಕ್ಕೆ ಬರಬೇಕಾದಂತಹ ಆಸ್ತಿ ತೆರಿಗೆ, ವಾಣಿಜ್ಯ ಕಟ್ಟಡಗಳ ತೆರಿಗೆ, ಕುಡಿಯುವ ನಿರಿನ ತೆರೀಗೆ, ಲೈಸೆನ್ಸ್ ತೆರಿಗೆ ಶೇಕಡವಾಡು ಕಡಿಮೆಯಾಗಿದೆ. ಕೋವಿಡ್ ಬಂದ ನಂತರ ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ಇದ್ರಿಂದಾಗಿ ತೆರಿಗೆ ಸಂಗ್ರಹ ಕ್ಷೀಣಿಸಿದೆ. 15ನೇ ಹಣಕಾಸಿನ ಪ್ರಗತಿಯಲ್ಲಿ ಕಡಿಮೆಯಾಗಿದೆ ಎಂದರು.