ಕರ್ನಾಟಕ

karnataka

ಸ್ಮಾರ್ಟ್​ ಸಿಟಿ-ಮಹಾನಗರ ಪಾಲಿಕೆಯ ವೈಶಮ್ಯಕ್ಕೆ ತುಮಕೂರು ಜನತೆ ಬಲಿ!

By

Published : Nov 21, 2019, 9:13 PM IST

ತುಮಕೂರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್​ ಸಿಟಿ ಅಧಿಕಾರಿಗಳ ಒಳ ವೈಶಮ್ಯದಿಂದಾಗಿ ನಗರದ ಜನತೆ ರಸ್ತೆಯಲ್ಲಿ ಸಂಚಾರ ಮಾಡಲಾರದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತುಮಕೂರು ನಗರದ ಜನರ ಗೋಳು

ತುಮಕೂರು:ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ನಡುವೆ ಹೊಂದಾಣಿಕೆ ಕೊರತೆಯಿಂದ ಕಾಮಗಾರಿಗಳು ಕುಂಟುತ್ತಾ ಸಾಗಿದ್ದು, ನಗರದ ಬಾರ್ ಲೈನ್ ರಸ್ತೆಯಲ್ಲಿ ರಸ್ತೆ ಕಾಮಗಾರಿಯಿಂದಾಗಿ ಸಂಚಾರವೇ ಸ್ಥಗಿತಗೊಂಡಿದೆ.

ತುಮಕೂರು ನಗರದ ಜನರ ಗೋಳು

ಈ ಮೊದಲು ಮೊದಲು ಸ್ಮಾರ್ಟ್ ಸಿಟಿ ಅಧಿಕಾರಿಗಳು ಪೈಪ್ ಲೈನ್ ಅಳವಡಿಸಲು ರಸ್ತೆ ಅಗಿದಿದ್ದರು, ತದನಂತರ ಮಹಾನಗರಪಾಲಿಕೆ ಅದೇ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಅಳವಡಿಸಿದ್ದ ಪೈಪ್​​ಲೈನ್​​ಗಳೆಲ್ಲಾ ಸಂಪೂರ್ಣವಾಗಿ ಹಾಳಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಭಾಗದ ಜನರ ದಿನನಿತ್ಯದ ಸಂಚಾರವೇ ಸ್ಥಗಿತಗೊಂಡಿದೆ.

ಈ ಕುರಿತು ಸಾರ್ವಜನಿಕರು, ಅಧಿಕಾರಿಗಳನ್ನ ಪ್ರಶ್ನಿಸಿದರೆ ನಮಗೆ ಸಂಬಂಧವೇ ಇಲ್ಲದಂತೆ ಒಬ್ಬರ ಮೇಲೊಬ್ಬರು ಗೂಬೆ ಕೂರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಮಾತಿದೆ. ಆದರೆ ಇಲ್ಲಿ ಇಬ್ಬರ ಜಗಳದಿಂದಾಗಿ ಮೂರನೆಯವನಿಗೆ ನಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ.

TAGGED:

ABOUT THE AUTHOR

...view details