ಕರ್ನಾಟಕ

karnataka

ಸಿದ್ದಗಂಗಾ ಮಠದ 20 ರಿಂದ 30 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

By

Published : Apr 20, 2021, 1:37 PM IST

ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತ ಮಕ್ಕಳಿಗೆ ಪ್ರತ್ಯೇಕವಾಗಿ ಇರುವ ವ್ಯವಸ್ಥೆ ಮಾಡಲಾಗಿದೆ ಎಂದು ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

Tumakur
ಸಿದ್ದಲಿಂಗ ಸ್ವಾಮೀಜಿ

ತುಮಕೂರು:ಸಿದ್ದಗಂಗಾ ಮಠದಲ್ಲಿ 20 ರಿಂದ 30 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಮಠದಲ್ಲಿ ಪ್ರಸ್ತುತ 2 ಸಾವಿರ ಮಕ್ಕಳಿದ್ದಾರೆ. ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಇವರ ಪೈಕಿ 25 ರಿಂದ 30 ಮಕ್ಕಳಿಗೆ ಎಸಿಂಪ್ಟಮಾಟಿಕ್ ಇರೋದು ಕಂಡು ಬಂದಿದೆ. ಮಕ್ಕಳಿಗೆ ನೆಗಡಿ ಹಾಗೂ ಕೆಮ್ಮಿನಂತಹ ಲಕ್ಷಣಗಳಿಲ್ಲ. ಎಲ್ಲರೂ ದೈಹಿಕವಾಗಿ ಚೆನ್ನಾಗಿದ್ದಾರೆ ಎಂದು ಹೇಳಿದರು.

ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯೆ

ಕೋವಿಡ್​ ಸೋಂಕಿತ ಮಕ್ಕಳಿಗೆ ಪ್ರತ್ಯೇಕವಾಗಿ ಇರುವ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದಿಂದ ಅಧಿಕಾರಿಗಳು ಬಂದು ಪರೀಕ್ಷೆ‌ ಮಾಡುತ್ತಿದ್ದಾರೆ. ಸದ್ಯಕ್ಕೆ ಮಠಕ್ಕೆ ಬರುವ ಯಾವ ಭಕ್ತರಿಗೂ ನಿರ್ಬಂಧ ಹೇರುವುದಿಲ್ಲ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಬಂದು ಹೋಗಲು ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸ್ವಾಮೀಜಿ ತಿಳಿಸಿದರು.

ABOUT THE AUTHOR

...view details