ಕರ್ನಾಟಕ

karnataka

ಶಿಥಿಲಗೊಂಡ ಕಾಲೇಜು ಕಟ್ಟಡ; ಸೌಲಭ್ಯಕ್ಕೆ ವಿದ್ಯಾರ್ಥಿಗಳ ಆಗ್ರಹ

By

Published : Sep 28, 2019, 2:20 PM IST

1972 ರಲ್ಲಿ ಪ್ರಾರಂಭವಾದ ಶಿಕ್ಷಣ ಸಂಸ್ಥೆಯಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಈ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ.

ಶಿಥಿಲಗೊಂಡ ಕಾಲೇಜು ಕಟ್ಟಡ.... ಸೌಲಭ್ಯಕ್ಕೆ ವಿದ್ಯಾರ್ಥಿಗಳ ಆಗ್ರಹ

ತುಮಕೂರು: ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಸ್ವತಂತ್ರ ಪದವಿಪೂರ್ವ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದು, ಮಳೆ ಬಂದರೆ ವಿದ್ಯಾರ್ಥಿಗಳು ಭಯದಿಂದಲೇ ಕುಳಿತು ಪಾಠ ಕೇಳುವಂತಾಗಿದೆ.

ಶಿಥಿಲಗೊಂಡ ಕಾಲೇಜು ಕಟ್ಟಡ.... ಸೌಲಭ್ಯಕ್ಕೆ ವಿದ್ಯಾರ್ಥಿಗಳ ಆಗ್ರಹ

1972ರಲ್ಲಿ ಶುರುವಾದ ಶಿಕ್ಷಣ ಸಂಸ್ಥೆಯಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಈ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಮಳೆ ಬಂತಂದ್ರೆ ಕಾಲೇಜಿನ ಕಟ್ಟಡಗಳ ಛಾವಣಿಗಳು ಶಿಥಿಲಗೊಂಡು ಕುಸಿಯತೊಡಗುತ್ತವೆ. ಜೊತೆಗೆ ಅಲ್ಲಲ್ಲಿ ಮೊಲ್ಡ್ ಕಳಚಿ ಬೀಳುತ್ತಿದೆ.

ಕನಿಷ್ಠ ಸೌಕರ್ಯದ ಕೊರತೆಯಿಂದಲೂ ವಂಚಿತವಾಗಿರುವ ಈ ಕಾಲೇಜಿನಲ್ಲಿ ಕುಡಿಯುವ ನೀರು ಬೇಕಾದ್ರೂ ವಿದ್ಯಾರ್ಥಿಗಳು ಅಕ್ಕಪಕ್ಕದ ಅಂಗಡಿಗಳಿಂದ ಖರೀದಿಸಬೇಕು. ಸಂಬಂಧಪಟ್ಟ ಅಧಿಕಾರಿಗಳೇ ಇತ್ತ ಗಮನಹರಿಸಿ. ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

Intro:Body:ಶಿಥಿಲಗೊಂಡ ಕಾಲೇಜು ಕಟ್ಟಡ.... ಸೌಲಭ್ಯಕ್ಕೆ ವಿದ್ಯಾರ್ಥಿಗಳ ಆಗ್ರಹ

ತುಮಕೂರು
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಸ್ವತಂತ್ರ ಪದವಿಪೂರ್ವ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದು ಮಳೆ ಬಂದರೆ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲೇ ಕುಳಿತು ಪಾಠ ಕೇಳುವಂತಾಗಿದೆ.
1972 ರಲ್ಲಿ ಪ್ರಾರಂಭವಾದ ಶೈಕ್ಷಣಿಕ ಸಂಸ್ಥೆಯಲ್ಲಿ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ವ್ಯಾಸಂಗ ಮಾಡುತ್ತಿದ್ದಾರೆ.
ಕಾಲೇಜಿನ ಕಟ್ಟಡಗಳ ಛಾವಣಿಗಳು ಮಳೆ ಬಂತೆಂದರೆ ಶಿಥಿಲಗೊಂಡು ಕುಸಿಯತೊಡಗುತ್ತವೆ.
ಅಲ್ಲಲ್ಲಿ ಮೊಲ್ಡ್ ಕಳಚಿ ಬೀಳುತ್ತಿದೆ, ಇನ್ನು ಕಾಲೇಜು ಅಂಗಳದಲ್ಲೇ ಮಳೆ ನೀರು ನಿಂತು ವಿದ್ಯಾರ್ಥಿಗಳು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಐವತ್ತು ವರ್ಷ ಹಳೆಯ ಕಟ್ಟಡಕ್ಕೆ ಕಾರ್ಯಕಲ್ಪ ಒಡಗಿಸಿಕೊಡಬೇಕಿದೆ.
ಇದಲ್ಲದೇ ಕಾಲೇಜಿನ ಆವರಣದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು
ಕುಡಿಯುವ ನೀರು ಬೇಕಂದ್ರೆ ಅಕ್ಕಪಕ್ಕದ ಅಂಗಡಿಗಳಿಗೆ ಹೋಗುವಂತಾಗಿದೆ.
ಹೊಣೆಗಾರರು ಇತ್ತ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆConclusion:

ABOUT THE AUTHOR

...view details