ಕರ್ನಾಟಕ

karnataka

ತುಮಕೂರು: ಹೂ ಮಾರುವ ಮಹಿಳೆ ಸರ ಕದಿಯಲು ಯತ್ನ.. ಕಳ್ಳನಿಗೆ ಬಿತ್ತು ಧರ್ಮದೇಟು!

By

Published : Oct 2, 2021, 12:22 PM IST

Updated : Oct 2, 2021, 12:54 PM IST

ಚಿನ್ನದ ಸರ ಕದ್ದು ಪರಾರಿಯಾಗುವ ವೇಳೆ ಕಳ್ಳನನ್ನು ಸಾರ್ವಜನಿಕರೇ ಹಿಡಿದು ಥಳಿಸಿದ್ದಾರೆ. ಹೂ ಮಾರುತ್ತಿದ್ದ ಮಹಿಳೆಯ ಸರ ಎಗರಿಸಿ ಪರಾರಿಯಾಗುವಾಗ ಸಾರ್ವಜನಿಕರು ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

Public caught chain snatcher hand over to the police
ಹೂ ಮಾರುವ ಮಹಿಳೆ ಸರ ಕದಿಯಲು ಯತ್ನ..ಕಳ್ಳನ ಹಿಡಿದು ಥಳಿಸಿದ ಸಾರ್ವಜನಿಕರು

ತುಮಕೂರು:ಚಿನ್ನದಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳನಿಗೆ ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಕೆ.ಆರ್ ಬಡಾವಣೆಯಲ್ಲಿ ನಡೆದಿದೆ. ಹೂ ಮಾರುತ್ತಿದ್ದ ಮಹಿಳೆಯ ಚಿನ್ನದ ಸರ ಕದ್ದು ಪರಾರಿಯಾಗುವಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಹೂ ಮಾರುವ ಮಹಿಳೆ ಸರ ಕದಿಯಲು ಯತ್ನ..ಕಳ್ಳನ ಹಿಡಿದು ಥಳಿಸಿದ ಸಾರ್ವಜನಿಕರು

ಆಂಜಿನಮ್ಮ ಎಂಬಾಕೆಯ 40 ಗ್ರಾಂ ಚಿನ್ನದ ಸರ ಎಗರಿಸಲು ಹೋಗಿ ಸಿಕ್ಕಿಬಿದ್ದಿದ್ದು, ಬಳಿಕ ಸಾರ್ವಜನಿಕರು ಆತನಿಗೆ ಥಳಿಸಿದ್ದಾರೆ. ಕಳ್ಳತನಕ್ಕೆ ಯತ್ನಿಸಿದವನನ್ನು ಆಂಧ್ರ ಪ್ರದೇಶ ಮೂಲದ ನಾಗ ಅಲಿಯಾಸ್ ನಾಗಯ್ಯ ಎಂದು ಗುರುತಿಸಲಾಗಿದ್ದು, ಬಳಿಕ ಕಳ್ಳನನ್ನು ಮಧುಗಿರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಕ್ರೂರಿ ಕೋವಿಡ್​ಗೆ ಪತಿ ಬಲಿ.. ನೋವಿನಲ್ಲಿ ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

Last Updated :Oct 2, 2021, 12:54 PM IST

ABOUT THE AUTHOR

...view details