ಕರ್ನಾಟಕ

karnataka

ಮೈದಾನದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಕ್ರೀಡಾಪಟುಗಳ ವಿರೋಧ; ಇದೇನು ನಿಮ್ಮಪ್ಪನ ಆಸ್ತಿನಾ? ಎಂದು ಮಾಧುಸ್ವಾಮಿ ಗರಂ

By

Published : Sep 6, 2021, 5:14 PM IST

minister-madhuswamy
ಗುದ್ದಲಿಪೂಜೆ ನೆರವೇರಿಸಿದ ಸಚಿವ ಮಾಧುಸ್ವಾಮಿ ()

ಹುಳಿಯಾರ್ ಕ್ಲಸ್ಟರ್ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಇರುವುದು ಒಂದೇ ಆಟದ ಮೈದಾನ. ಹೀಗಾಗಿ, ನಮಗೆ ಶಾಲಾ ಕೊಠಡಿಗಳು ಬೇಕು. ಆದ್ರೆ ಆಟದ ಮೈದಾನದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದವರ ವಿರುದ್ಧ ಸಚಿವ ಮಾಧುಸ್ವಾಮಿ ಗರಂ ಆಗಿದ್ದಾರೆ.

ತುಮಕೂರು:ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಠಡಿ ನಿರ್ಮಾಣಕ್ಕೆ ಸ್ಥಳೀಯ ಕ್ರೀಡಾಪಟುಗಳು ವಿರೋಧಿಸಿದ್ದಾರೆ. ಇದಕ್ಕೆ ಸಚಿವ ಮಾಧುಸ್ವಾಮಿ ಗರಂ ಆಗಿದ್ದಾರೆ.

ಶಾಲಾ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧಿಸುತ್ತಿರುವವರ ವಿರುದ್ಧ ಸಿಡಿಮಿಡಿಗೊಂಡ ಅವರು, ಅದು ಅವರ ಅಪ್ಪನ ಆಸ್ತಿಯೇ? ಇದು ಜಾಸ್ತಿ ಆಯ್ತು. ಇದು ಶಾಲಾ ಆವರಣ ಎಂದು ಗುಡುಗಿದರು.

ಹುಳಿಯಾರು ಪಟ್ಟಣದ ಕ್ರೀಡಾಪಟುಗಳ ವಾದವೇ ಬೇರೆಯಾಗಿದೆ. ಹುಳಿಯಾರ್ ಕ್ಲಸ್ಟರ್ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಇರುವುದು ಒಂದೇ ಆಟದ ಮೈದಾನ. ಹೀಗಾಗಿ, ನಮಗೆ ಶಾಲಾ ಕೊಠಡಿಗಳು ಬೇಕು. ಆಟದ ಮೈದಾನವು ಬೇಕಾಗಿದೆ ಎನ್ನುತ್ತಿದ್ದಾರೆ.

ಕ್ರೀಡಾಪಟುಗಳ ವಿರುದ್ದ ಗರಂ ಆದ ಸಚಿವ ಮಾಧುಸ್ವಾಮಿ

ಹಳೆಯ ಶೌಚಾಲಯದ ಕೊಠಡಿಗಳನ್ನು ತೆರವುಗೊಳಿಸಿ ಹೊಸದಾಗಿ ಕೊಠಡಿಗಳಿಗೆ ಜಾಗ ಮಾಡಿಕೊಟ್ಟು, ಆಟದ ಮೈದಾನವನ್ನು ಉಳಿಸುವಂತೆ ಅನೇಕ ಬಾರಿ ಸಚಿವ ಮಾಧುಸ್ವಾಮಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅಲ್ಲದೆ, ನೂತನ ಕೊಠಡಿ ಗುದ್ದಲಿ ಪೂಜೆ ನೆರವೇರಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದರು.

ಹೀಗಾಗಿ, ಕಳೆದ ಬಾರಿಯೂ ಕೂಡ ಶಾಲಾ ಆವರಣದಲ್ಲಿ ಹೊಸದಾಗಿ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ಸ್ಥಳೀಯ ಕ್ರೀಡಾಪಟುಗಳು ಇದಕ್ಕೆ ತಡೆಯೊಡ್ಡಿದ್ದರಿಂದ ಈ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಆದರೆ, ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದರು. ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಕ್ರೀಡಾಪಟುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಓದಿ:ಮೈಸೂರು ಗ್ಯಾಂಗ್​ರೇಪ್​ ಬಳಿಕ ಪೊಲೀಸರು ಅಲರ್ಟ್​ : ಪ್ರವಾಸಿತಾಣ, ನಿರ್ಜನ ಪ್ರದೇಶದಲ್ಲಿ ಹದ್ದಿನ ಕಣ್ಣು

TAGGED:

ABOUT THE AUTHOR

...view details