ಕರ್ನಾಟಕ

karnataka

ದಾಯಾದಿಗಳ ನಡುವೆ ಜಗಳ: ಓರ್ವನ ಕೊಲೆ

By

Published : Jun 18, 2021, 1:27 PM IST

ಎರಡು ಕುಟುಂಬಗಳ ನಡುವೆ ಅನೇಕ ದಿನಗಳಿಂದ 7 ಗುಂಟೆ ಜಮಿನಿಗಾಗಿ ಗಲಾಟೆ ನಡೆಯುತ್ತಿತ್ತು. ಬಸವರಾಜು ಕುಟುಂಬದಿಂದ ಜಯಣ್ಣ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಇದರ ಪರಿಣಾಮ ಜಯಣ್ಣರ ಮಗ ತೀರ್ಥಪ್ರಸಾದ್ ಮೃತಪಟ್ಟಿದ್ದಾನೆ.

man-murder-of-a-property-disputes-in-tumakur
ಓರ್ವನ ಕೊಲೆ

ತುಮಕೂರು: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ನೆಲಗೊಂಡನಹಳ್ಳಿಯಲ್ಲಿ ನಡೆದಿದೆ.

ತೀರ್ಥಪ್ರಸಾದ್(30) ಕೊಲೆಯಾದ ಯುವಕ. ಜಯಣ್ಣ ಮತ್ತು ಬಸವರಾಜು ಕುಟುಂಬಗಳ ನಡುವೆ ಅನೇಕ ದಿನಗಳಿಂದ 7 ಗುಂಟೆ ಜಮಿನಿಗಾಗಿ ಗಲಾಟೆ ನಡೆಯುತ್ತಿತ್ತು. ಬಸವರಾಜು ಕುಟುಂಬದಿಂದ ಜಯಣ್ಣ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಇದರ ಪರಿಣಾಮ ಜಯಣ್ಣರ ಮಗ ತೀರ್ಥಪ್ರಸಾದ್ ಮೃತಪಟ್ಟಿದ್ದಾನೆ. ಹೊನ್ನವಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಸವರಾಜರ ಮಕ್ಕಳಾದ ಸುರೇಶ್, ಚಂದ್ರಶೇಖರ ಹಾಗೂ ತಮ್ಮ ಲೊಕೇಶ್​​​ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details