ಕರ್ನಾಟಕ

karnataka

ಮನೆ ಮಾಲೀಕರನ್ನು ಕಳ್ಳರಿಂದ ರಕ್ಷಿಸಲು ತುಮಕೂರು ಪೊಲೀಸರ ಹೊಸ ಉಪಾಯ!

By

Published : Aug 6, 2020, 7:49 PM IST

ಮಾಲೀಕರು ಮನೆಗೆ ಬೀಗ ಹಾಕಿ ಊರಿಗೆ ಹೋಗಿ ಬರುವವರೆಗೂ ಪೊಲೀಸ್ ಇಲಾಖೆ ಸಿಸಿ ಕ್ಯಾಮರಾ ಟೆಕ್ನಾಲಜಿ ಮೂಲಕ ಮನೆಯ ಮೇಲೆ ನಿಗಾ ವಹಿಸಲಿದೆ. ತುಮಕೂರು ಸ್ಮಾರ್ಟ್ ಸಿಟಿ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಕನಿಷ್ಠ 15 ದಿನಗಳವರೆಗೆ ಈ ಸೌಲಭ್ಯವನ್ನು ಮನೆ ಮಾಲೀಕರಿಗೆ ನೀಡಲು ಉದ್ದೇಶಿಸಲಾಗಿದೆ.

Tumkur
ಎಲ್​​ಹೆಚ್​​ಎಂಎಸ್ ತುಮಕೂರು ಪೊಲೀಸ್ ಆ್ಯಪ್ ಉದ್ಘಾಟನೆ

ತುಮಕೂರು: ಬೀಗ ಹಾಕಿದ ಮನೆಗಳ ಮಾಲೀಕರನ್ನು ಕಳ್ಳರಿಂದ ರಕ್ಷಿಸಲು ತುಮಕೂರು ಜಿಲ್ಲಾ ಪೊಲೀಸರು ಎಲ್​​ಹೆಚ್​​ಎಂಎಸ್ ತುಮಕೂರು ಪೊಲೀಸ್ ಆ್ಯಪ್​​ ಜಾರಿಗೆ ತಂದಿದ್ದಾರೆ.

ಎಲ್​​ಹೆಚ್​​ಎಂಎಸ್ ತುಮಕೂರು ಪೊಲೀಸ್ ಆ್ಯಪ್ ಉದ್ಘಾಟನೆ

ಮಾಲೀಕರು ಮನೆಗೆ ಬೀಗ ಹಾಕಿ ಊರಿಗೆ ಹೋಗಿ ಬರುವವರೆಗೂ ಪೊಲೀಸ್ ಇಲಾಖೆ ವತಿಯಿಂದ ಸಿಸಿ ಕ್ಯಾಮರಾ ಟೆಕ್ನಾಲಜಿ ಮೂಲಕ ಮನೆಯ ಮೇಲೆ ನಿಗಾ ವಹಿಸಲಾಗುತ್ತದೆ. ತುಮಕೂರು ಸ್ಮಾರ್ಟ್ ಸಿಟಿ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಕನಿಷ್ಠ 15 ದಿನಗಳವರೆಗೆ ಈ ಸೌಲಭ್ಯ ಮನೆ ಮಾಲೀಕರಿಗೆ ಸಿಗಲಿದೆ.

ಮನೆಗೆ ಬೀಗ ಹಾಕಿಕೊಂಡು ದೂರದ ಸ್ಥಳಗಳಿಗೆ ಹೋಗುವ ಮುನ್ನ ಸ್ಥಳೀಯ ಪೊಲೀಸರಿಗೆ ವಿಚಾರ ತಿಳಿಸಿದಾಗ ಅವರು ತಮ್ಮ ಮನೆಗೆ ಬಂದು ಮನೆಯ ಬಗ್ಗೆ ನಿಗಾ ವಹಿಸಲು ವ್ಯವಸ್ಥೆ ಕೈಗೊಳ್ಳುಲಿದ್ದಾರೆ. ನಂತರ ಮನೆಯ ಸಂಪೂರ್ಣ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಂಗೆ ರವಾನಿಸಲಾಗುತ್ತದೆ. ಅಲ್ಲದೇ ಮನೆಯೆದುರು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಮಾಹಿತಿಯನ್ನು ಕಂಟ್ರೋಲ್ ರೂಮ್​ನಲ್ಲಿ ದಾಖಲಿಸಲಾಗುತ್ತದೆ.

ABOUT THE AUTHOR

...view details