ಕರ್ನಾಟಕ

karnataka

ಗಣಪತಿ ದೇಗುಲ ನೆಲಸಮ: ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ

By

Published : Jun 20, 2021, 12:41 PM IST

ಏಕಾಏಕಿ ದೇಗುಲವನ್ನು ಕೆಡವಿ ಹಾಕಿರುವುದು ಸರಿಯಲ್ಲ. ಜನರ ಭಾವನೆಗಳ ಜೊತೆ ಅಭಿವೃದ್ಧಿ ನೆಪದಲ್ಲಿ ಚೆಲ್ಲಾಟವಾಡಲಾಗುತ್ತಿದೆ- ಮಾಜಿ ಸಚಿವ ಸೊಗಡು ಶಿವಣ್ಣ

Ganapathi temple Demolished
ಸಿದ್ಧಿವಿನಾಯಕ ಮಾರುಕಟ್ಟೆ ಆವರಣದಲ್ಲಿ ಗಣಪತಿ ದೇವಸ್ಥಾನ ನೆಲಸಮ

ತುಮಕೂರು: ನಗರದ ಸಿದ್ಧಿವಿನಾಯಕ ಮಾರುಕಟ್ಟೆ ಆವರಣದಲ್ಲಿ ಗಣಪತಿ ದೇವಸ್ಥಾನವನ್ನು ನೆಲಸಮಗೊಳಿಸಿರುವುದಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ

ಏಕಾಏಕಿ ದೇಗುಲವನ್ನು ಕೆಡವಿ ಹಾಕಿರುವುದು ಸರಿಯಲ್ಲ. ಜನರ ಭಾವನೆಗಳ ಜೊತೆ ಅಭಿವೃದ್ಧಿ ನೆಪದಲ್ಲಿ ಚೆಲ್ಲಾಟವಾಡಲಾಗುತ್ತಿದೆ ಎಂದು ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಲು ಗಣಪತಿ ದೇಗುಲವನ್ನು ನೆಲಸಮಗೊಳಿಸಲಾಗಿದೆ. ದೇವಸ್ಥಾನದ ಜತೆಗೆ ದೇಗುಲದ ಎದುರಿಗಿದ್ದ ಬಸವಣ್ಣನ ಮೂರ್ತಿ ಹಾಗೂ ಕಂಬವನ್ನು ಸಹ ತೆಗೆಯಲಾಗಿದೆ.

ABOUT THE AUTHOR

...view details