ಕರ್ನಾಟಕ

karnataka

ಸಚಿವರೊಬ್ಬರ ಹೆಸರು ಹೇಳದೇ ಕಮಿಷನ್ ಆರೋಪ ಮಾಡಿದ ಜೈವಿಕ ಇಂಧನ ಮಂಡಳಿ ಅಧ್ಯಕ್ಷ

By

Published : Sep 14, 2022, 9:18 PM IST

Updated : Sep 15, 2022, 3:30 PM IST

former-mla-ks-kirankumar-accuses-law-minister-jc-madhuswamy
ಸಚಿವ ಮಾಧುಸ್ವಾಮಿ ವಿರುದ್ಧ ಕಮಿಷನ್ ಆರೋಪ ಮಾಡಿದ ಜೈವಿಕ ಇಂಧನ ಮಂಡಳಿ ಅಧ್ಯಕ್ಷ ()

ಸಚಿವರ ವಿರುದ್ಧ ಮಾಜಿ ಶಾಸಕ ಕೆಎಸ್​ ಕಿರಣ್​ಕುಮಾರ್ ಪರೋಕ್ಷವಾಗಿ ಕಮಿಷನ್ ಆರೋಪ ಮಾಡಿದ್ದಾರೆ.

ತುಮಕೂರು :ಜಿಲ್ಲೆಯಸಚಿವರ ವಿರುದ್ಧ ಮಾಜಿ ಶಾಸಕ ಹಾಗೂ ಜೈವಿಕ ಇಂಧನ ನಿಗಮ ಮಂಡಳಿ ಅಧ್ಯಕ್ಷರಾದ ಕೆಎಸ್ ಕಿರಣ್ ಕುಮಾರ್ ಪರೋಕ್ಷವಾಗಿ ಕಮಿಷನ್ ಆರೋಪ ಮಾಡಿದ್ದಾರೆ. ಹುಳಿಯಾರಿನಲ್ಲಿ ನಡೆದ ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಸರು ಹೇಳದೆ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದರು.

ನಾನು ಕಮಿಷನ್ ಆಸೆಗೆ ಅಭಿವೃದ್ಧಿ ಮಾಡಬೇಕೆಂದು ಹೋಗುತ್ತಿಲ್ಲ. ಹಂದನಕೆರೆಗೆ ಅಂಕಸಂದ್ರ ಅಣೆಕಟ್ಟಿನಿಂದಲೇ ನೀರು ತೆಗೆದುಕೊಂಡು ಹೋಗಬೇಕಿತ್ತು. ತಾಂತ್ರಿಕ ದೋಷವೆಂದು ದೂರದ ಶೆಟ್ಟಿಕೆರೆ(ಜೆ.ಸಿ.ಪುರ) ದಿಂದ ನೀರು ತೆಗೆದುಕೊಂಡು ಹೋಗಬೇಕಿರಲಿಲ್ಲ. ಅಂಕಸಂದ್ರದಿಂದ ನೈಸರ್ಗಿಕವಾಗಿ ಬರುವ ನೀರು ತೆಗೆದುಕೊಂಡು ಹೋಗದೆ, ಪಂಪಾಗಿರೋ ನೀರನ್ನು ಮತ್ತೆ ಪಂಪ್ ಮಾಡುವ ಕಾರ್ಯಕ್ಕೆ ಯಾಕೆ ಕೈ ಹಾಕಿದ್ದಾರೆ ಎಂದು ಹೇಳಿದರು.

ಸಚಿವರೊಬ್ಬರ ವಿರುದ್ಧ ಕಮಿಷನ್ ಆರೋಪ ಮಾಡಿದ ಜೈವಿಕ ಇಂಧನ ಮಂಡಳಿ ಅಧ್ಯಕ್ಷ

ನಾನು ಕಳೆದ ತಿಂಗಳಿಂದ ಇಲ್ಲಿ ಓಡಾಟ ನಡೆಸುತ್ತಿದ್ದೇನೆ. ಆಗಿರುವ ಎಲ್ಲ ರಸ್ತೆಗಳು ಕಳಪೆ ಕಾಮಗಾರಿಗಳು. ನೀವು ಭರತನಾಳು ತಾಂಡಾ ಮೇಲೆ ಹೋದರೆ, ಆ ರಸ್ತೆ ಎಷ್ಟು ಹಾಳಾಗಿದೆ ಎಂಬುದು ಗೊತ್ತಾಗುತ್ತದೆ. ಪೈಪ್ ಲೈನ್ ಕಾಮಗಾರಿ ಮಾಡುವ ಹತ್ತಿರ ರಸ್ತೆ ಕುಸಿದಿದೆ. ಈ ಬಗ್ಗೆ ಕಾಂಟ್ರಾಕ್ಟರ್ ಪ್ರಶ್ನೆ ಮಾಡೋ ನೈತಿಕತೆಯನ್ನು ಇಲ್ಲಿನ ಪ್ರತಿನಿಧಿ ಕಳೆದುಕೊಂಡಿದ್ದಾರೆ ಎಂದು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು. ನೈತಿಕತೆ ಇದ್ದಿದ್ದರೆ ಕಳಪೆ ರೋಡ್​​ ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತಿದ್ದರು. ನಾವು ಪ್ರತಿಭಟನೆ ಮಾಡಿ ಕಳಪೆ ಕಾಮಗಾರಿ ತಡೆ ಹಿಡಿಯಬೇಕಾಗಿದೆ ಎಂದು ಹೇಳಿದರು.

ಇದನ್ನೂ ಓದಿ :ಪರಿಷತ್​ನಲ್ಲಿ ಶೇ.40 ಕಮಿಷನ್​ ಗದ್ದಲ: ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು, ನಾಳೆಗೆ ಕಲಾಪ ಮುಂದೂಡಿಕೆ

Last Updated :Sep 15, 2022, 3:30 PM IST

ABOUT THE AUTHOR

...view details