ಕರ್ನಾಟಕ

karnataka

ಗ್ರಾಮ ಪಂಚಾಯತ್ ಕಟ್ಟಡ ಧ್ವಂಸಕ್ಕೆ ಜಿಲೆಟಿನ್ ಇಟ್ಟು ಸ್ಫೋಟ: ದುಷ್ಕರ್ಮಿಗಳ ಕೃತ್ಯಕ್ಕೆ ಬೆಚ್ಚಿಬಿದ್ದ ಪಾವಗಡ

By

Published : Sep 16, 2022, 3:16 PM IST

Updated : Sep 16, 2022, 4:01 PM IST

ಗ್ರಾಮ ಪಂಚಾಯತ್ ಕಟ್ಟಡ ಧ್ವಂಸ

ಬೂದಿಬೆಟ್ಟ ಗ್ರಾಮ ಪಂಚಾಯತ್ ಕಚೇರಿ ಕಟ್ಟಡ ಸ್ಫೋಟಕ್ಕೆ ಯತ್ನ. ಕಟ್ಟಡದ ಎರಡು ಗೋಡೆಗಳಿಗೆ ಹಾನಿ. ವೈಎಸ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ತುಮಕೂರು:ಪಾವಗಡ ತಾಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಕಚೇರಿ ಕಟ್ಟಡ ಸ್ಫೋಟಕ್ಕೆ ಯತ್ನಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಜಿಲೆಟಿನ್ ಕಡ್ಡಿ ಬಳಸಿ ಗ್ರಾಪಂ ಕಟ್ಟಡ ಧ್ವಂಸ ಯತ್ನಿಸಿದ್ದಾರೆ.

ಗ್ರಾಮ ಪಂಚಾಯತ್ ಕಟ್ಟಡ ಧ್ವಂಸಕ್ಕೆ ಜಿಲೆಟಿನ್ ಇಟ್ಟು ಸ್ಫೋಟ:

ಗ್ರಾಪಂ ಕಟ್ಟಡ ಸ್ಫೋಟ:ಸ್ಫೋಟದಿಂದ ಪಂಚಾಯತ್ ಕಟ್ಟಡದ ಎರಡು ಗೋಡಿಗಳಿಗೆ ಹಾನಿಯಾಗಿದ್ದು, ಎರಡು ಕುರ್ಚಿಗಳು ಭಸ್ಮವಾಗಿವೆ. ಗುರುವಾರ ರಾತ್ರಿ 9 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಸ್ಫೋಟದ ಶಬ್ದ ಜೋರಾಗಿ ಕೇಳಿ ಬಂದಾಗ ಗ್ರಾಮಸ್ಥರು ಓಡಿಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಫೋಟದ ಶಬ್ದದಿಂದ ಗ್ರಾಮಸ್ಥರು ಭಯಗೊಂಡಿದ್ದರು.

ಕುರ್ಚಿಗಳು ಸುಟ್ಟಿರುವುದು

ಬಳಿಕ ಕೂಡಲೇ ವೈ.ಎಸ್ ಹೊಸಕೋಟೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾವಗಡ ತಾಲೂಕಿನ ವೈಎಸ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಇದನ್ನೂ ಓದಿ: ಬೆಂಗಳೂರು: ಮನೆಯೊಳಗೆ ನಿಗೂಢ ಸ್ಫೋಟ, ಮೂವರಿಗೆ ಗಂಭೀರ ಗಾಯ)

Last Updated :Sep 16, 2022, 4:01 PM IST

ABOUT THE AUTHOR

...view details