ಕರ್ನಾಟಕ

karnataka

ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

By

Published : Nov 7, 2020, 8:09 PM IST

Updated : Nov 7, 2020, 8:14 PM IST

ಆರೋಪಿ ರೋಹಿತ್ ಪೊಲೀಸರ ಮೇಲೆ ಹಲ್ಲೆಗೆ ಮುಂದಾದವನು. ಹಲ್ಲೆ ಮಾಡಿದ ಪರಿಣಾಮ ನಾಲ್ವರು ಪೊಲೀಸರ ಪೈಕಿ ಒಬ್ಬರಿಗೆ ತೀವ್ರ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಲಿಗೆ ಗುಂಡು
ಕಾಲಿಗೆ ಗುಂಡು

ತುಮಕೂರು:ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೊಂದಿಗೆ ಸ್ಥಳ ಮಹಜರು ಮಾಡುತ್ತಿದ್ದ ಪೊಲೀಸರ ಮೇಲೆ ಬಂಧಿತ ಹಲ್ಲೆ ನಡೆಸಿದ ಪರಿಣಾಮ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ ಘಟನೆ ಜಿಲ್ಲೆಯ ಸಿದ್ದಗಂಗಾ ಮಠದ ಸಮೀಪ ನಡೆದಿದೆ.

ಆರೋಪಿ ರೋಹಿತ್ ಪೊಲೀಸರ ಮೇಲೆ ಹಲ್ಲೆಗೆ ಮುಂದಾದವನು. ಹಲ್ಲೆ ಮಾಡಿದ ಪರಿಣಾಮ ನಾಲ್ವರು ಪೊಲೀಸರ ಪೈಕಿ ಒಬ್ಬರಿಗೆ ತೀವ್ರ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚಿಗೆ ತುಮಕೂರು ನಗರದ ಶಿರಾ ಗೇಟ್ ಸಮೀಪ ವಾಲ್ಮೀಕಿ ನಗರದಲ್ಲಿ ಐವರು ದರೋಡೆಕೋರರ ತಂಡ ಮನೆಯೊಂದಕ್ಕೆ ನುಗ್ಗಿ ವೃದ್ಧ ದಂಪತಿಯನ್ನು ಕೂಡಿಹಾಕಿ 72 ಸಾವಿರ ರೂ. ನಗದು, ಎರಡು ಚಿನ್ನದ ಬಳೆ, 2 ಮೊಬೈಲ್ ಕಸಿದು ಪರಾರಿಯಾಗಿತ್ತು. ಈ ಸಂಬಂಧ ಎನ್​ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐವರು ಆರೋಪಿಗಳ ಪೈಕಿ ಇಂದು ರೋಹಿತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ದರೋಡೆ ಮಾಡಿದ್ದ ಮೊಬೈಲ್​ಗಳನ್ನು ಸಿದ್ದಗಂಗಾ ಮಠದ ಸಮೀಪ ರಸ್ತೆಯಲ್ಲಿ ಎಸೆದಿರುವುದಾಗಿ ಆರೋಪಿ ರೋಹಿತ್ ವಿಚಾರಣೆ ವೇಳೆ ತಿಳಿಸಿದ್ದ. ಹೀಗಾಗಿ ಸ್ಥಳ ಮಹಜರು ಮಾಡಿ ಅದನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ಆರೋಪಿ ಸಮೇತ ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ.

Last Updated :Nov 7, 2020, 8:14 PM IST

ABOUT THE AUTHOR

...view details