ಕರ್ನಾಟಕ

karnataka

ಸೋಲಾರ್ ಪವರ್ ಪ್ರಾಜೆಕ್ಟ್​​ನಲ್ಲಿ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂ. ಮೌಲ್ಯದ ಪರಿಕರಗಳು ಭಸ್ಮ

By

Published : Apr 11, 2022, 2:43 PM IST

ಬೆಂಕಿ ತಗುಲಿದ ತಕ್ಷಣ ಸಮೀಪದಲ್ಲಿದ್ದ ಗ್ರಾಮಸ್ಥರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಅಪಾರ ಪ್ರಮಾಣದ ಪರಿಕರಗಳು ಸುಟ್ಟು ಕರಕಲಾಗಿದ್ದವು..

Accidental fire in Solar Power Project
ಹೊತ್ತಿ ಉರಿಯುತ್ತಿರುವ ಸೋಲಾರ್ ಪವರ್ ಪ್ರಾಜೆಕ್ಟ್

ತುಮಕೂರು :ಆಕಸ್ಮಿಕ ಬೆಂಕಿ ತಗುಲಿ ಸೋಲಾರ್ ಪವರ್ ಪ್ರಾಜೆಕ್ಟ್​​ನ ಲಕ್ಷಾಂತರ ರೂ. ಮೌಲ್ಯದ ಪರಿಕರಗಳು ಸುಟ್ಟು ಭಸ್ಮವಾಗಿವೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಅಚ್ಚಮ್ಮನಹಳ್ಳಿ ಹತ್ತಿರವಿರುವ ಟಾಟಾ ಕಂಪನಿಯಲ್ಲಿ ಈ ಅವಘಡ ಸಂಭವಿಸಿದೆ.

ಹೊತ್ತಿ ಉರಿಯುತ್ತಿರುವ ಸೋಲಾರ್ ಪವರ್ ಪ್ರಾಜೆಕ್ಟ್..

ಬೆಂಕಿ ತಗುಲಿದ ತಕ್ಷಣ ಸಮೀಪದಲ್ಲಿದ್ದ ಗ್ರಾಮಸ್ಥರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಅಪಾರ ಪ್ರಮಾಣದ ಪರಿಕರಗಳು ಸುಟ್ಟು ಕರಕಲಾಗಿದ್ದವು.

ಸೋಲಾರ್ ಪವರ್ ಪ್ರಾಜೆಕ್ಟ್​​ನಲ್ಲಿ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ಪರಿಕರಗಳು ಭಸ್ಮ

ಅಗ್ನಿಯ ಜ್ವಾಲೆ ಸುಮಾರು 50 ರಿಂದ 70 ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ. ಈ ಕಂಪನಿಯ ಸುತ್ತಲೂ ಯಾವುದೇ ರೀತಿಯ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಹಿಸಿರಲಿಲ್ಲ ಎನ್ನಲಾಗ್ತಿದೆ. ಘಟನೆಗೆ ಆಂಧ್ರಪ್ರದೇಶ ಮೂಲದ 'ಸಿದ್ಧಾರ್ಥ ಕಂಪನಿ' ನಿರ್ಲಕ್ಷವೇ ಕಾರಣ ಎಂದು ದೂರಲಾಗಿದೆ. ಈ ಸಂಬಂಧ ಪಾವಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಡಿಕ್ಕಿ ಹೊಡೆದ ರೋಪ್ ​ವೇ ಕಾರುಗಳು, ಕೆಳಗೆ ಹಾರಿಬಿದ್ದ ದಂಪತಿ.. ಮಹಿಳೆ ಸಾವು, ಗಾಳಿಯಲ್ಲೇ ಸಿಲುಕಿದ್ರು 50 ಜನ!

ABOUT THE AUTHOR

...view details