ಕರ್ನಾಟಕ

karnataka

ಶಾಸಕ ಎಸ್​​ಆರ್​​​ ವಿಶ್ವನಾಥ್ ಕೊಲೆ ಸಂಚು ಪ್ರಕರಣ: ಕುಳ್ಳ ದೇವರಾಜ್ ಬಂಧಿಸಿದ ಪೊಲೀಸರು

By

Published : Dec 2, 2021, 4:34 PM IST

Updated : Dec 2, 2021, 8:45 PM IST

Police arrested kulla devaraj in the case of mla vishwanath murder conspiracy

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕುಳ್ಳ ದೇವರಾಜ್ ಎಂಬುವವರನ್ನು ಬಂಧಿಸಿದ್ದು, ತನಿಖಾ ತಂಡ ರಚಿಸಿದ್ದಾರೆ.

ಯಲಹಂಕ:ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಕೋನ ವಂಶಿಕೃಷ್ಣ ಹೇಳಿದರು.

ಬೆಂಗಳೂರು ಗ್ರಾಮಾಂತರ ಎಸ್ಪಿ ಕೋನ ವಂಶಿಕೃಷ್ಣ ಪತ್ರಿಕಾಗೋಷ್ಠಿ

ಎಸ್.ಆರ್.ವಿಶ್ವನಾಥ್ ಕೊಲೆ ಸಂಚುಗೆ ಸಂಬಂಧಿಸಿದಂತೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ನೇತೃತ್ವದಲ್ಲಿ ನಡೆದ ವಿಚಾರಣೆಗೆ ಶಾಸಕ ವಿಶ್ವನಾಥ್ ಹಾಜರಾಗಿದ್ದರು. ಕೊಲೆ ಸಂಚಿಗೆ ಸಂಬಂಧಿಸಿದಂತೆ ವಿಡಿಯೋ ಮತ್ತು ಕುಳ್ಳ ದೇವರಾಜ್ ಕೊಟ್ಟ ಕ್ಷಮಾಪಣಾ ಪತ್ರವನ್ನು ಪೊಲೀಸರಿಗೆ ನೀಡಿದ್ದಾರೆ.

ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ಕೋನ ವಂಶಿಕೃಷ್ಣ, ಕೊಲೆ ಸಂಚಿಗೆ ಸಂಬಂಧಿಸಿದಂತೆ ಶಾಸಕ ವಿಶ್ವನಾಥ್​​​ ದೂರು ನೀಡಿದ್ದರು. ದೂರಿನ ಅನ್ವಯ ಶಾಸಕ ವಿಶ್ವನಾಥ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಕೆಲವು ಸಾಕ್ಷಿಗಳನ್ನು ಶಾಸಕರು ಕೊಟ್ಟಿದ್ದಾರೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಡಿವೈಎಸ್ಪಿ ನಾಗರಾಜ್ ಅವರ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದ್ದು, ಕುಳ್ಳ ದೇವರಾಜ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿ ಆರೋಗ್ಯ ತಪಾಸಣೆ ನಂತರ ನ್ಯಾಯಾಲಯ ಬಂಧನಕ್ಕೆ ಒಳಪಡಿಸಲಾಗುವುದು ಎಂದರು.

ವಿಶ್ವನಾಥ್ ಅವರು ನೀಡಿರುವ 32 ಜಿಬಿ ಪೆನ್​​​ಡ್ರೈವ್​​​ನಲ್ಲಿದ್ದ ವಿಡಿಯೋವನ್ನು ಆರೋಪಿತ ಕುಳ್ಳ ದೇವರಾಜ್ ಮುಂದೆಯೇ ವಿಡಿಯೋ ಫ್ಲೇ ಮಾಡಿ ಹೇಳಿಕೆ ಪಡೆಯಲಾಗಿದೆ. ಈ ವಿಚಾರಣೆಯನ್ನು ವಿಡಿಯೋ ಸಹ ಮಾಡಲಾಗಿದೆ. ಆರೋಪಿಯ ಹೇಳಿಕೆಯ ಮೇಲೆ ನಾಳೆ ಗೋಪಾಲಕೃಷ್ಣರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಕುಳ್ಳ ದೇವರಾಜ್ ಕೊಟ್ಟ ತಪ್ಪೊಪ್ಪಿಗೆ ಪತ್ರ, ಪೆನ್ ಡ್ರೈವ್ ಕೊಟ್ಟಿದ್ದೇನೆ: ವಿಚಾರಣೆ ಬಳಿಕ ಶಾಸಕ ವಿಶ್ವನಾಥ್ ಹೇಳಿಕೆ

Last Updated :Dec 2, 2021, 8:45 PM IST

ABOUT THE AUTHOR

...view details