ಕರ್ನಾಟಕ

karnataka

ಶಿವಮೊಗ್ಗ: ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ

By

Published : Dec 24, 2020, 3:56 PM IST

Updated : Dec 24, 2020, 4:03 PM IST

ಮಕ್ಕಳೊಂದಿಗೆ ದೇವಾಲಯಕ್ಕೆಂದು ಹೊರಟಿದ್ದ ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದಳು. ಇದೀಗ ಶಿವಮೊಗ್ಗ ಜಿಲ್ಲೆಯ ಮಲ್ಲಾಪುರ ಗ್ರಾಮದ ಕೆರೆಯೊಂದರಲ್ಲಿ ಮೂವರ ಶವ ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ.

the-mother-along-with-her-two-children-committed-suicide-in-shimoga
ಶಿವಮೊಗ್ಗ: ತಾಯಿ ತನ್ನಿಬ್ಬರು ಮಕ್ಕಳೂಂದಿಗೆ ಕೆರೆಗೆ ಬಿದ್ದು ಆತ್ಮಹತ್ಯೆ

ಶಿವಮೊಗ್ಗ: ತಾಯಿ ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆ ಕೆರೆಗೆ ಹಾರಿ‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಭದ್ರಾವತಿ ತಾಲೂಕು ಮಲ್ಲಾಪುರ ಗ್ರಾಮದ ಮಂಜುಳಾ(30) ತನ್ನ ಇಬ್ಬರು ಮಕ್ಕಳಾದ ಯಮುನಾ(7) ಹಾಗೂ ರಚನಾ(5) ರೊಂದಿಗೆ ಮಲ್ಲಾಪುರ ಗ್ರಾಮ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಮಂಜುಳಾ ಡಿಸೆಂಬರ್ 18 ರಂದು ಮಕ್ಕಳೊಂದಿಗೆ ದೇವಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಆದರೆ, ಮನೆಗೆ ವಾಪಸ್ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ್ದರು. ನಂತರ ಡಿಸೆಂಬರ್ 21 ರಂದು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮಂಜುಳಾ ಹಾಗೂ ಮಕ್ಕಳು ಕಾಣೆಯಾಗಿದ್ದಾರೆ ಎಂದು ಮಂಜಳಾ ಪತಿ ಮಂಜುನಾಥ್ ದೂರು ನೀಡಿದ್ದರು.

ಮಂಜುಳಾರದ್ದು ತುಂಬು ಕುಟುಂಬವಾಗಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಇಂದು ಮಲ್ಲಾಪುರ ಗ್ರಾಮದ ಕೆರೆಯ ಬಳಿ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಗ್ರಾಮಸ್ಥರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಶವಗಳನ್ನು ಶಿವಮೊಗ್ಗದ ಶವಾಗಾರಕ್ಕೆ ಕಳುಹಿಸಿದ್ದಾರೆ. ಈ ಕುರಿತು ಹೊಳೆಹೊನ್ನೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Last Updated : Dec 24, 2020, 4:03 PM IST

ABOUT THE AUTHOR

...view details