ಕರ್ನಾಟಕ

karnataka

ಕೋರ್ಟ್ ಗೆ ಹಾಜರಾದ ಸಾಹಿತಿ ಪ್ರೊ. ಭಗವಾನ್.. ಷರತ್ತು ಬದ್ದ ಜಾಮೀನು ಮಂಜೂರು

By

Published : Dec 20, 2022, 5:49 PM IST

ಸಾಗರದ ಜೆಎಂಎಫ್​ಸಿ ನ್ಯಾಯಾಲಯವು ಸಾಹಿತಿ ಪ್ರೊ. ಭಗವಾನ್​ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Literature Prof. Bhagavan
ಸಾಹಿತಿ ಪ್ರೊ.ಭಗವಾನ್

ಭಗವಾನ್ ರಚಿಸಿದ ರಾಮ ಮಂದಿರ ಏಕೆ ಬೇಡ? ಎಂಬ ಕೃತಿಯ ವಾದ-ವಿವಾದ

ಶಿವಮೊಗ್ಗ :ಸಾಹಿತಿ ಪ್ರೊ. ಭಗವಾನ್ ಅವರಿಗೆ ಸಾಗರದ ಜೆಎಂಎಫ್​ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಭಗವಾನ್ ರಚಿಸಿದ ರಾಮ ಮಂದಿರ ಏಕೆ ಬೇಡ? ಎಂಬ ಕೃತಿಯು ಭಾರತೀಯ ಹಿಂದೂ ಧಾರ್ಮಿಕ ಭಾವನೆ ಧಕ್ಕೆ ತರುವಂತಿದೆ. ಈ ಕೃತಿಯನ್ನು ನಿಷೇಧಿಸಿ ಎಂದು ಸಾಗರ ತಾಲೂಕು ಇಕ್ಕೇರಿಯ ಮಹಾಬಲೇಶ್ವರ ಎಂಬುವರು ಸಾಗರ ಜೆಎಂಎಫ್​ಸಿ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಈ ದೂರಿಗೆ ಸಂಬಂಧಿಸಿದ ವಿಚಾರಣೆ ಸಂದರ್ಭದಲ್ಲಿ ಭಗವಾನ್ ಕೋರ್ಟ್ ಗೆ ಗೈರು ಹಾಜರಾಗಿದ್ದರು. ಕೋರ್ಟ್ ಖುದ್ದು ಹಾಜರಾಗುವಂತೆ ನೋಟಿಸ್ ನೀಡಿದ್ದರು ಸಹ ಹಾಜರಾಗದೆ ಇರುವುದರಿಂದ ಕೋರ್ಟ್ ಸಾಗರ ಟೌನ್ ಪೊಲೀಸರ ಮೂಲಕ ಮೈಸೂರು ಎಸ್ಪಿ ಅವರಿಗೂ ನೋಟಿಸ್ ಜಾರಿ ಮಾಡಿ ಕೋರ್ಟ್ ಗೆ ಭಗವಾನ್​ ಅವರನ್ನು ಹಾಜರುಪಡಿಸುವಂತೆ ಸೂಚಿಸಿತ್ತು.

ಇದರಿಂದ ಇಂದು ಭಗವಾನ್ ಕೋರ್ಟ್ ಗೆ ಖುದ್ದು ಹಾಜರಾಗಿದ್ದು, ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 2023 ರ ಮಾರ್ಚ್ 31 ರಂದು ಮತ್ತೆ ವಿಚಾರಣೆಗೆ ಕೇಸು ಮುಂದೂಡಿಕೆ ಮಾಡಿದೆ. ದೂರುದಾರರ ಪರವಾಗಿ ಸಾಗರದ ಕೆ.ವಿ. ಪ್ರವೀಣ್ ಹಾಗೂ ಭಗವಾನ್ ಪರ ಹೆಚ್.ಪಿ. ರಾಘವೇಂದ್ರ ವಾದ ಮಂಡಿಸಿದ್ದರು.

ಇದನ್ನೂ ಓದಿ :ಪ್ರೊ. ಭಗವಾನ್ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ವಿಳಂಬ: ತ್ವರಿತ ಕ್ರಮ ಕೈಗೊಳ್ಳದಿದ್ದರೆ ದಂಡದ ಎಚ್ಚರಿಕೆ

ABOUT THE AUTHOR

...view details