ಶಿವಮೊಗ್ಗ: ತೀರ್ಥಹಳ್ಳಿ ಕಾಂಗ್ರೆಸ್ನಲ್ಲಿ ಚುನಾವಣೆಗೂ ಮುನ್ನಾ ಟಿಕೆಟ್ ರಾಜಕೀಯ ಜೋರಾಗಿ ಪ್ರಾರಂಭಗೊಂಡಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ ಅವರ ವಿರುದ್ಧ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಕಿಮ್ಮನೆ ರತ್ನಾಕರ್ ಅವರು ಮಂಜುನಾಥ್ ಗೌಡರಿಗೆ ಬರೆದ ಪತ್ರದಲ್ಲಿ ಮಂಜುನಾಥ ಗೌಡರು ಜುಲೈ 28 ರಂದು ನಡೆಸಲಿರುವ ಪಾದಯಾತ್ರೆಯ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಪತ್ರದ ಸಾರಾಂಶ:ಆರ್.ಎಂ.ಮಂಜುನಾಥ ಗೌಡರವರೆ ನೀವು ಮಾಜಿ ಸಿಎಂ ಕಡಿದಾಳು ಮಂಜಪ್ಪನವರ ಸಮಾಧಿಯಿಂದ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ನಿಮ್ಮ ಖಾಸಗಿ ಪಾದಯಾತ್ರೆ ಬಗೆಗೆ ನಿಮ್ಮ ಪತ್ರ ಹಾಗೂ ಕರಪತ್ರ ಬಂದಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಆಗಸ್ಟ್ 1 ರಿಂದ ಆಗಸ್ಟ್ 10 ರ ಒಳಗೆ ಪ್ರತಿ ವಿಧಾನಸಭ ಕ್ಷೇತ್ರದಲ್ಲಿ 15 ಕಿ.ಮಿ ದೂರ ಪಾದಯಾತ್ರೆ ಮಾಡುವಂತೆ ಆದೇಶ ನೀಡಿದ್ದಾರೆ.
ಅದರಂತೆ ತೀರ್ಥಹಳ್ಳಿ ವಿಧಾನಸಭ ಕ್ಷೇತ್ರದಲ್ಲಿ ಆಗಸ್ಟ್ 8 ರಂದು ಮೇಗರವಳ್ಳಿಯಿಂದ ತೀರ್ಥಹಳ್ಳಿವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಆಸರೆ ನೀವು ಜುಲೈ 27 ರಂದು ಪಾದಯಾತ್ರೆ ನಡೆಸುತ್ತಿದ್ದೀರಿ. ಈ ಪಾದಯಾತ್ರೆಯ ಕರಪತ್ರ ಸೇರಿದಂತೆ ಬ್ಯಾನರ್ಗಳಲ್ಲಿ ಪಕ್ಷ ಚಿಹ್ನೆ, ಮುಖಂಡರ ಭಾವಚಿತ್ರಗಳಲ್ಲಿ. ನೀವು ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಕೆಪಿಸಿಸಿ ಹಾಗೂ ಜಿಲ್ಲಾಧ್ಯಕ್ಷರಿಂದ ಯಾವುದೇ ಆದೇಶ ಬಂದಿಲ್ಲ.
ನಮ್ಮ ಪಕ್ಷದ ಅಧ್ಯಕ್ಷರು ಪಕ್ಷದಲ್ಲಿ ವ್ಯಕ್ತಿ ಪೂಜೆ ಮಾಡದೇ, ಪಕ್ಷದ ಪೂಜೆ ಮಾಡಿ ಎಂದು ಹಿಂದೆಯೇ ಹೇಳಿದ್ದಾರೆ. ಆದರೆ, ನೀವು ವ್ಯಕ್ತಿ ಪೂಜೆ ಮಾಡುತ್ತಾ ಪಾದಯಾತ್ರೆ ನಡೆಸುತ್ತಿದ್ದಿರಿ, ದಯವಿಟ್ಟು ಪಾದಯಾತ್ರ ಕೈ ಬಿಟ್ಟು ಕಾಂಗ್ರೆಸ್ನಲ್ಲಿ ಗುಂಪುಗಾರಿಕೆಯನ್ನು ಮಾಡಬೇಡಿ ಎಂದು ವಿನಂತಿಸಿ ಕೊಂಡಿದ್ದಾರೆ. ಅಲ್ಲದೆ ನೀವು ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಚುನಾವಣೆ ಹತ್ತಿರ ಬಂದಾಗ ಜೆಡಿಎಸ್ ಪಕ್ಷ ಸೇರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೀರಿ, ನೀವು ಎಲ್ಲೆ ಹೋದರೂ ಹಣದ ಜೊತೆ ಹೋಗಿ ಅಲ್ಲಿ ಅಗ್ರಸ್ಥಾನ ಪಡೆಯಬೇಕು ಎಂಬ ಬಯಕೆ ವ್ಯಕ್ತಪಡಿಸುತ್ತೀರಿ.