ಕರ್ನಾಟಕ

karnataka

ಕೋವಿಡ್‌ ಕುರಿತು ರಾಜ್ಯಪಾಲರು ಸಭೆ ಕರೆದಿರುವುದು ಅಚ್ಚರಿ ತಂದಿದೆ: ಈಶ್ವರಪ್ಪ

By

Published : Apr 20, 2021, 12:45 PM IST

ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದ್ದರೂ ಸಹ ರಾಜ್ಯಪಾಲರು ಸಭೆ ಕರೆದಿದ್ದಾರೆ. ಇದು ಸಂತೋಷದ ವಿಚಾರವೇ ಆಗಿದೆ. ಅದರೆ ಇದು ಹೊಸ ಬುನಾದಿಗೆ ಕಾರಣವಾಗಬಾರದು ಎಂದು ಈಶ್ವರಪ್ಪ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ
ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

ಶಿವಮೊಗ್ಗ:ರಾಜ್ಯದಲ್ಲಿ ಕೋವಿಡ್‌ನಿಂದ ಲಾಕ್‌ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇಂದು ರಾಜ್ಯಪಾಲರು ಕೋವಿಡ್ ವಿಚಾರವಾಗಿ ಸಿಎಂ, ವಿರೋಧ ಪಕ್ಷದ ನಾಯಕರು ಹಾಗೂ ಉಭಯ ಸದನಗಳ ನಾಯಕರುಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಏನೇ ತೀರ್ಮಾನ ತೆಗೆದುಕೊಂಡರೂ ಸಹ ನಾವೆಲ್ಲ ಬದ್ದವಾಗಿರಬೇಕು ಎಂದರು.

ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

'ರಾಜ್ಯಪಾಲರ ಸಭೆ ಅಚ್ಚರಿ ತಂದಿದೆ'

ರಾಜ್ಯಪಾಲರು ಇಂದು ಕೋವಿಡ್ ಕುರಿತು ಸಭೆ ಕರೆದಿರುವುದು ಅಚ್ಚರಿ ತಂದಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದ್ದರೂ ಸಹ ಅವರು ಸಭೆ ಕರೆದಿದ್ದಾರೆ. ಇದು ಸಂತೋಷದ ವಿಚಾರವೇ ಆಗಿದೆ. ಅದರೆ ಇದು ಹೊಸ ಬುನಾದಿಗೆ ಕಾರಣವಾಗಬಾರದು ಎಂದು ಈಶ್ವರಪ್ಪ ತಿಳಿಸಿದರು.

ಬೆಂಗಳೂರಿಗೆ ದೇಶ- ವಿದೇಶದಿಂದ ಜನರು ಆಗಮಿಸುತ್ತಾರೆ. ಅಲ್ಲಿಗೆ ಬರುವವರಲ್ಲಿ ಯಾರಲ್ಲಿ ಕೋವಿಡ್ ಇದೆ, ಇಲ್ಲ ಎಂಬುದನ್ನು ತಿಳಿಯುವುದು ಕಷ್ಟ. ಇದರಿಂದಾಗಿ ಜನರು ಸ್ವಯಂನಿಯಂತ್ರಣ ಹಾಕಿಕೊಳ್ಳಬೇಕು. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳಬೇಕು. ಆಗ ಮಾತ್ರ ಕೊರೊನಾದಿಂದ ದೂರ ಉಳಿಯಬಹುದಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘನೆ: ಮೈಸೂರಿನಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 2,49,850 ರೂ. ದಂಡ ವಸೂಲಿ

ABOUT THE AUTHOR

...view details