ಕರ್ನಾಟಕ

karnataka

ಮತೀಯ ಸಂಸ್ಥೆಗಳು ಮುಗ್ಧ ಮನಸ್ಸುಗಳಲ್ಲಿ ವಿಷ ಬೀಜ ಬಿತ್ತುತ್ತಿವೆ.. ಸಂಸದ ಬಿ ವೈ ರಾಘವೇಂದ್ರ ಆರೋಪ

By

Published : Feb 18, 2022, 6:56 PM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುಳ್ಳು ಪ್ರಚಾರದ ಮೂಲಕ ವಿಧಾನಸಭಾ ಕಲಾಪ ಹಾಳು ಮಾಡುತ್ತಿದ್ದಾರೆ. ಲಾಲ್‌ಚೌಕ್‌ನಲ್ಲಿ ದೇಶದ್ರೋಹಿಗಳು, ತಾಕತ್ತಿದ್ದರೆ ಭಾರತದ ರಾಷ್ಟ್ರಧ್ವಜ ಹಾರಿಸಿ ಎಂದು ಧಮಕಿ ಹಾಕಿದಾಗ ನಮ್ಮ ನಾಯಕರಾದ ಈಶ್ವರಪ್ಪ, ಯಡಿಯೂರಪ್ಪ ಗುಂಡಿಗೆ ಎದೆಕೊಟ್ಟು ಧ್ವಜ ಹಾರಿಸಿದ್ದಾರೆ..

BY_RAGAVENDRA
ಬಿ.ವೈ ರಾಘವೇಂದ್ರ

ಶಿವಮೊಗ್ಗ :ಕೆಲವು ಮತೀಯ ಸಂಸ್ಥೆಗಳು ಮುಗ್ಧ ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸಕ್ಕೆ ಕೈಹಾಕಿವೆ ಎಂದು ಸಂಸದ ಬಿ ವೈ ರಾಘವೇಂದ್ರ ಆರೋಪಿಸಿದ್ದಾರೆ.

ಹಿಜಾಬ್-ಕೇಸರಿ ಶಾಲು ವಿವಾದದ ಕುರಿತಂತೆ​ಸಂಸದ ಬಿ ವೈ ರಾಘವೇಂದ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದು..:

ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್​ಡಿಪಿಐ, ಪಿಎಫ್‌ಐ ಸಂಸ್ಥೆಗಳು ಹಿಜಾಬ್ ವಿಷಯಗಳನ್ನು ಮುಂದಿಟ್ಟುಕೊಂಡು ಮುಗ್ಧ ವಿದ್ಯಾರ್ಥಿಗಳ ಮನಸ್ಸನ್ನು ಹಾಳು ಮಾಡುತ್ತಿವೆ. ಜೊತೆಗೆ ಶಾಂತಿಗೆ ಭಂಗ ಉಂಟು ಮಾಡುತ್ತಿವೆ ಎಂದು ಆರೋಪಿಸಿದರು.

ದೇಶದಲ್ಲಿ ಕರ್ನಾಟಕ ರಾಜ್ಯ ಶಾಂತಿ, ಸುವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಆದರೆ, ಕೆಲವರು ಹಿಜಾಬ್ ವಿಷಯ ಇಟ್ಟುಕೊಂಡು ಶಾಂತಿ ಹದಗೆಡಿಸಿ ರಾಜ್ಯಕ್ಕೆ ಕಪ್ಪುಚುಕ್ಕೆ ಇಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರವಹಿಸುವುದು ಅನಿವಾರ್ಯ ಎಂದರು.

ಸದನಸಲ್ಲಿ ಈಗಾಗಲೇ ಚರ್ಚೆ ಕೂಡ ನಡೆಯುತ್ತಿದೆ. ಸರ್ಕಾರ ತನ್ನ ತೀರ್ಮಾನ ಸರಿಯಾಗಿ ತೆಗೆದುಕೊಳ್ಳುವ ಸಮಯದಲ್ಲೇ ಕಾಂಗ್ರೆಸ್‌ನ ಮುಖಂಡರು ಸದನದ ಒಳಗೂ ಶಾಂತಿ ಭಂಗ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಆಕ್ರೋಶದಿಂದ ಮಾತನಾಡುತ್ತಾ, ಸದನದ ಸಮಯವನ್ನು ಬೇರೆ ದಿಕ್ಕಿನತ್ತ ಕೊಂಡೊಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುಳ್ಳು ಪ್ರಚಾರದ ಮೂಲಕ ವಿಧಾನಸಭಾ ಕಲಾಪ ಹಾಳು ಮಾಡುತ್ತಿದ್ದಾರೆ. ಲಾಲ್‌ಚೌಕ್‌ನಲ್ಲಿ ದೇಶದ್ರೋಹಿಗಳು, ತಾಕತ್ತಿದ್ದರೆ ಭಾರತದ ರಾಷ್ಟ್ರಧ್ವಜ ಹಾರಿಸಿ ಎಂದು ಧಮಕಿ ಹಾಕಿದಾಗ ನಮ್ಮ ನಾಯಕರಾದ ಈಶ್ವರಪ್ಪ, ಯಡಿಯೂರಪ್ಪ ಗುಂಡಿಗೆ ಎದೆಕೊಟ್ಟು ಧ್ವಜ ಹಾರಿಸಿದ್ದಾರೆ.

ನಿಮ್ಮಿಂದ ನಾವು ದೇಶ ಭಕ್ತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ. ರಾಜಕಾರಣಕ್ಕೆ ಬೇರೆ ಏನೂ ವಿಷಯ ಸಿಗದೇ ಇರುವುದರಿಂದ ಒಂದು ಹಿಜಾಬ್ ವಿಚಾರ ಹಿಡಿದುಕೊಂಡು ಶಾಂತಿ ಭಂಗದ ಯತ್ನ ಮಾಡುತ್ತಿದ್ದೀರಿ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಸದನ ನಡೆಸಲು ಅವಕಾಶ ಕೊಟ್ಟು,ಅಭಿವೃದ್ಧಿ ಬಗ್ಗೆ ಮಾತನಾಡಿ. ಮಕ್ಕಳ ಮನಸ್ಸನ್ನು ಹಾಳು ಮಾಡಬೇಡಿ ಎಂದರು.

ಅಲ್ಪಸಂಖ್ಯಾತರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಯಾರಿಗೂ ಬೇಧ-ಭಾವ ಮಾಡದೇ ಸರಿಯಾದ ದಿಕ್ಕಿನಲ್ಲಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದೆ ಎಂದು ಬಿ.ವೈ. ರಾಘವೇಂದ್ರ ಹೇಳಿದರು.

ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ಎಸ್. ಜ್ಯೋತಿಪ್ರಕಾಶ್, ಎನ್.ಜೆ. ನಾಗರಾಜ್, ಮೇಯರ್ ಸುನೀತಾ ಅಣ್ಣಪ್ಪ, ಎನ್.ಕೆ. ಜಗದೀಶ್, ಕೆ.ವಿ. ಅಣ್ಣಪ್ಪ ಮತ್ತಿತರರಿದ್ದರು.

ಇದನ್ನೂ ಓದಿ:ಸಮವಸ್ತ್ರ ನಿಗದಿಯಾದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲ್​ಗೆ ಅವಕಾಶ ಇಲ್ಲ: ಸಚಿವ ಅಶ್ವತ್ಥ ನಾರಾಯಣ

ABOUT THE AUTHOR

...view details