ಕರ್ನಾಟಕ

karnataka

ತೀರ್ಥಹಳ್ಳಿ: ಕಾಣೆಯಾಗಿದ್ದ ಗುತ್ತಿಗೆದಾರ ಕೆರೆಯಲ್ಲಿ ಶವವಾಗಿ ಪತ್ತೆ

By

Published : Jul 5, 2022, 10:17 PM IST

ಕಳೆದ ಜುಲೈ 3 ರಂದು ನಾಪತ್ತೆಯಾಗಿದ್ದ ಗುತ್ತಿಗೆದಾರನ ಶವ ತೀರ್ಥಹಳ್ಳಿಯ ಕವಲೇದುರ್ಗ ಕೆರೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ತೀರ್ಥಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

missing-contractor-found-dead-in-lake
ತೀರ್ಥಹಳ್ಳಿ: ಕಾಣೆಯಾಗಿದ್ದ ಗುತ್ತಿಗೆದಾರ ಕೆರೆಯಲ್ಲಿ ಶವವಾಗಿ ಪತ್ತೆ

ಶಿವಮೊಗ್ಗ: ಕಳೆದ ಜುಲೈ 3ರ ಭಾನುವಾರದಂದು ಕಾಣೆಯಾಗಿದ್ದ ಗುತ್ತಿಗೆದಾರನ ಶವ ತೀರ್ಥಹಳ್ಳಿಯ ಕವಲೇದುರ್ಗ ಕೆರೆಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಆಕರ್ಷರಾಜ್ (27) ಎಂದು ಗುರುತಿಸಲಾಗಿದೆ. ಇವರು ತೀರ್ಥಹಳ್ಳಿ ತಾಲೂಕು ಕಾಂಗ್ರೆಸ್ ಮುಖಂಡ, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಕಟ್ಟೆಗದ್ದೆ ಹಾಲಪ್ಪನವರ ಮಗ ಎಂದು ತಿಳಿದು ಬಂದಿದೆ. ಆಕರ್ಷರಾಜ್ ರವರು ಬಿಇ ಪದವೀಧರರಾಗಿದ್ದು, ಅವಿವಾಹಿತರಾಗಿದ್ದರು. ಬೆಂಗಳೂರಿನಲ್ಲಿ ಗುತ್ತಿಗೆದಾರರಾಗಿದ್ದರು ಎಂದು ತಿಳಿದು ಬಂದಿದೆ.

ಕಳೆದ ಭಾನುವಾರ ಆಕರ್ಷರಾಜ್ ರಾತ್ರಿ ಹೊತ್ತಿನಲ್ಲಿ ತೀರ್ಥಹಳ್ಳಿಗೆ ಬರುವಾಗ ಕೊಂಡ್ಲೂರು ಸಮೀಪದ ಕವಲೇದುರ್ಗ ರಸ್ತೆಯಲ್ಲಿ (ದುರ್ಗಾ ಕ್ರಾಸ್ ) ಅವರ ಸ್ವಿಫ್ಟ್ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿತ್ತು. ಆದರೆ, ಸ್ಥಳದಲ್ಲಿ ಕಾರು ಮಾತ್ರ ಪತ್ತೆಯಾಗಿದ್ದು, ಆಕರ್ಷ ರಾಜ್ ಎಲ್ಲೋ ಹೋಗಿರಬಹುದು ಎಂದು ಅಂದುಕೊಂಡಿದ್ದರು. ಕಾಣೆಯಾಗಿದ್ದ ಆಕರ್ಷರಾಜ್ ರನ್ನು ಕುಟುಂಬದವರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆದರೆ, ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಇಂದು ಬೆಳಗ್ಗೆ ಕವಲೇದುರ್ಗ ಕೆರೆಯಲ್ಲಿ ಆಕರ್ಷ ರಾಜ್ ಶವ ಪತ್ತೆಯಾಗಿದೆ.

ಸಾವಿನ ಸುತ್ತ ಅನುಮಾನದ ಹುತ್ತ:ಆಕರ್ಷರಾಜ್ ಸಾವಿನ ಸುತ್ತ ಅನುಮಾನ ಹುತ್ತ ಮೂಡಿದೆ. ಅಪಘಾತಕ್ಕೀಡಾದ ಕಾರು ಬಿಟ್ಟು ಹೇಗೆ ಕೆರೆಯ ಬಳಿ ಸಾವನ್ನಪ್ಪಿದರು ಎಂಬ ಬಗ್ಗೆ ಅನುಮಾನ ಮೂಡಿದೆ. ಅಪಘಾತಕ್ಕೀಡಾದ ಕಾರನ್ನು ಅದೇ ಸ್ಥಳದಲ್ಲಿ ಬಿಟ್ಟು ಕೆರೆ ತನಕ ಹೇಗೆ ಹೋದರು, ನೀರು ಕುಡಿಯಲು ಹೋಗಿದ್ರಾ, ಅಥವಾ ಯಾರಾದರೂ ಅವರನ್ನು ಕರೆದುಕೊಂಡು ಹೋದರೆ ಎಂಬ ಬಗ್ಗೆ ಅನುಮಾನ ಮೂಡಿದೆ. ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.

ಓದಿ :ಸೈಕ್ಲೊಥಾನ್‌ನಲ್ಲಿ ಭಾಗಿಯಾಗಿದ್ದ ಮಹಿಳೆಯರಿಗೆ ಕಾಮುಕನ ಕಾಟ: ಸದಾಶಿವನಗರ ಠಾಣೆಯಲ್ಲಿ ಪ್ರಕರಣ

ABOUT THE AUTHOR

...view details