ಕರ್ನಾಟಕ

karnataka

ಕೂಲಿ ಹಣಕ್ಕಾಗಿ ಸ್ನೇಹಿತನನ್ನೇ ಕೊಲೆ ಮಾಡಿ ಕೆರೆಗೆ ಎಸೆದ ಇಬ್ಬರು ಕಿರಾತಕರ ಬಂಧನ

By

Published : Dec 24, 2021, 9:12 PM IST

ಕುಡಿದ ಮತ್ತಿನಲ್ಲಿ ಕೂಲಿ ಹಣ ನೀಡಲಿಲ್ಲ ಎಂದು ಆತ್ಮೀಯ ಸ್ನೇಹಿತನನ್ನೇ ಕೊಲೆ ಮಾಡಿರುವ ಧಾರುಣ ಘಟನೆ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಮದಲ್ಲಿ ನಡೆದಿದೆ.

ಇಬ್ಬರು ಕಿರಾತಕರ ಬಂಧನ
ಇಬ್ಬರು ಕಿರಾತಕರ ಬಂಧನ

ಶಿವಮೊಗ್ಗ: ಅವರೆಲ್ಲಾ ಒಟ್ಟಿಗೆ ದುಡಿದು, ಒಟ್ಟಿಗೆ ಕುಡಿದು ಜೀವನ ಸಾಗಿಸುತ್ತಿದ್ದ ಗೆಳೆಯರು. ಆದರೆ, ಕುಡಿದ ಮತ್ತಿನಲ್ಲಿ ಕೂಲಿ ಹಣ ನೀಡಲಿಲ್ಲ ಎಂದು ಆತ್ಮೀಯ ಸ್ನೇಹಿತನನ್ನೇ ಕೊಲೆ ಮಾಡಿರುವ ಧಾರುಣ ಘಟನೆ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಮದಲ್ಲಿ ನಡೆದಿದೆ. ಗರ್ತಿಕೆರೆ ಗ್ರಾಮದ ಸತೀಶ್ ಶೆಟ್ಟಿ ಸ್ನೇಹಿತರಿಂದಲೇ ಹತ್ಯೆಯಾದ ದುರ್ದೈವಿ.

ಸತೀಶ್ ಶೆಟ್ಟಿ, ಕೃಷ್ಣ ಹಾಗೂ ಫಯಾಜ್ ಅಲಿಯಾಸ್ ಕೋಳಿ ಫಯಾಜ್ ಆತ್ಮೀಯ ಸ್ನೇಹಿತರು. ಸತೀಶ್ ಶೆಟ್ಟಿ ಗಾರೆ ಕೆಲಸ ಮಾಡಿ ಕೊಂಡು ಜೀವನ ನಡೆಸುತ್ತಿದ್ದರು. ಇನ್ನು ಕೃಷ್ಣ ಹಾಗೂ ಫಯಾಜ್ ಕೂಲಿ ಕೆಲಸ ಮಾಡುತ್ತಿದ್ದರು. ಮೊನ್ನೆ ರಾತ್ರಿ ಕೃಷ್ಣ ಹಾಗೂ ಫಯಾಜ್ ಸತೀಶ್ ಶೆಟ್ಟಿ ರವರ ಮನೆಯಲ್ಲಿಯೇ ಕುಡಿದಿದ್ದಾರೆ.

ಕುಡಿದ ವೇಳೆ ಸತೀಶ್ ಶೆಟ್ಟಿಗೆ ಕೃಷ್ಣ ಹಿಂದೆ ತನ್ನನ್ನು ಕೂಲಿಗೆ ಕರೆದು ಕೊಂಡು ಹೋಗಿದ್ದ ಕೂಲಿ ನೀಡಲು ಕೇಳಿದ್ದಾನೆ. ಇದೇ ವಿಚಾರಕ್ಕೆ ಜಗಳವಾಗಿದೆ. ಕೃಷ್ಣ ಹಾಗೂ ಫಯಾಜ್, ಸತೀಶ್ ಶೆಟ್ಟಿ ತಲೆಗೆ ಹೊಡೆದು ಕೊಲೆ ಮಾಡಿ ಮನೆ ಸಮೀಪವೇ ಇದ್ದ ಕೆರೆಯಲ್ಲಿ ಬಿಸಾಡಿ ಹೋಗಿದ್ದರು. ನಿನ್ನೆ ರಾತ್ರಿ ಶವ ಕೆರೆಯಲ್ಲಿ ತೇಲಿದ ವೇಳೆ ಸತೀಶ್ ಶೆಟ್ಟಿ ಕೊಲೆಯಾಗಿರುವುದು ತಿಳಿದು ಬಂದಿದೆ.

ನಂತರ ಪೊಲೀಸರು ತನಿಖೆ ಪ್ರಾರಂಭಿಸಿ, ವಿಚಾರಣೆ ನಡೆಸಿದ ವೇಳೆ ಕೊಲೆ ಮಾಡಿರುವುದಾಗಿ ಘಾತುಕರು ಬಾಯಿ ಬಿಟ್ಟಿದ್ದಾರೆ. ಮೊನ್ನೆ ಸತೀಶ್ ಶೆಟ್ಟಿ ಹೆಂಡತಿ ಬೆಂಗಳೂರಿಗೆ ಹೋದ ವಿಷಯ ತಿಳಿದು ಅಂದು ಸತೀಶ್ ಶೆಟ್ಟಿ ಮನೆಯಲ್ಲಿ ಪಾರ್ಟಿ ಮಾಡಿ, ಕೊಲೆ ಮಾಡುವ ಸ್ಕೇಚ್ ಹಾಕಿ ಕೊಲೆ ಮಾಡಿರುವುದು ಬಯಲಾಗಿದೆ.‌

ಕೊಲೆ ಮಾಡಿದ ಕೃಷ್ಣ ಹಾಗೂ ಫಯಾಜ್ ನನ್ನು ಬಂಧಿಸಿರುವ ಪೊಲೀಸರು ಕೊಲೆ ಮಾಡಿದ ಸ್ಥಳ ಹಾಗೂ ಕೆರೆಗೆ ಕರೆ ತಂದು ಮಹಜರ್ ಮಾಡಿದ್ದಾರೆ.‌ ಹೊಸನಗರ ಪೊಲೀಸ್ ಠಾಣೆಯ ಪಿಐ ಮಧುಸೂಧನ್ ನೇತೃತ್ವದಲ್ಲಿ ಪ್ರಕರಣ ಭೇದಿಸಲಾಗಿದೆ. ಈ ಕುರಿತು ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details