ಕರ್ನಾಟಕ

karnataka

ಅಮಿತ್ ಶಾ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ: ಗೋಪಾಲಕೃಷ್ಣ ಬೇಳೂರು

By

Published : Dec 21, 2022, 7:18 PM IST

ಅಮಿತ್ ಶಾ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದಲೇ ವಿರೋಧ ಪಕ್ಷದ ನಾಯಕರ ಮೇಲೆ ಐಟಿ ಸೇರಿದಂತೆ ಸಿಬಿಐ ದಾಳಿ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

KPCC spokesperson Gopalakrishna Belur
ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು

ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು

ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದಲೇ ವಿರೋಧ ಪಕ್ಷದ ನಾಯಕರ ಮೇಲೆ ಐಟಿ ಸೇರಿದಂತೆ ಸಿಬಿಐ ದಾಳಿ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಸಿಬಿಐ ನವರಿಗೆ ಕಾಂಗ್ರೆಸ್​ನ ಡಿ ಕೆ ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆಗಳು ಮಾತ್ರ ಕಾಣುತ್ತದೆಯೇ? ಯಾಕೆ ಬಿಜೆಪಿರವರ ಯಾವುದೇ ಶಿಕ್ಷಣ ಸಂಸ್ಥೆಗಳು ಇರಲ್ಲವೇ ಎಂದು ಪ್ರಶ್ನೆ ಮಾಡಿದರು. ಇದರಿಂದಾಗಿಯೇ ಯಾವ ಚಲನಚಿತ್ರ ನಟರು ಸರ್ಕಾರದ ಅನ್ಯಾಯದ ಬಗ್ಗೆ ಬಾಯಿ ಬಿಡುತ್ತಿಲ್ಲ ಎಂದರು.

ಅಸಹಾಯಕತೆಯಿಂದ ಹಾಲಪ್ಪ ಧರ್ಮಸ್ಥಳಕ್ಕೆ ಹೋಗಿದ್ದಾರೆ:ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಸರ್ಕಾರದಿಂದ ಪರಿಹರಿಸಲು ಆಗದೆ ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಸಂತ್ರಸ್ತರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದು ಶಾಸಕರ ಸಹಾಯಕತೆಯನ್ನು ತೋರಿಸುತ್ತದೆ. ಇವರದ್ದೇ ಸರ್ಕಾರ ಇದ್ದರೂ ಸಹ ಆಗದೆ ಧರ್ಮಸ್ಥಳದ ಮೊರೆ ಹೋಗಿದ್ದಾರೆ. ಇದು ಕಾಂತಾರ ಚಿತ್ರದ ಎಫೆಕ್ಟ್ ಎಂದು ವ್ಯಂಗ್ಯವಾಡಿದರು. ಇವರು ಸರ್ಕಾರದ ಕಡೆ ಹೋಗದೆ ಧರ್ಮಸ್ಥಳಕ್ಕೆ ಹೋಗಿದ್ದು ನೋಡಿದರೆ, ಇಂತಹ ಸರ್ಕಾರ ಇದ್ದರೆಷ್ಟು ಸತ್ತರೆಷ್ಟು ಎಂದು ಕಿಡಿಕಾರಿದರು.

ರೈತರ ಸಾವಿಗೆ ಸರ್ಕಾರ ಸ್ಪಂದಿಸದೆ ಹೋದರೆ ರೈತರ ಶಾಪ ತಟ್ಟುತ್ತದೆ:ಹೊಸನಗರ, ಸಾಗರ ಭಾಗದಲ್ಲಿ ಅಕಾಲಿಕ ಮಳೆಯಿಂದ ಭತ್ತ, ಅಡಿಕೆ ಸೇರಿದಂತೆ ಇತರೆ ಬೆಳೆಗಳು ಹಾಳಾಗಿ ಹೋಗಿವೆ. ಇವರ ಬಳಿ ಯಾವ ಸರ್ಕಾರ ಹೋಗಲ್ಲ, ಸರ್ಕಾರಕ್ಕೆ ಜನರ ಪರ ಕಾಳಜಿ ಇಲ್ಲ. ಬೆಳೆ ನಷ್ಟದಿಂದ ರೈತರು ವಿಷ ಸೇವಿಸುತ್ತಿದ್ದಾರೆ. ಸರ್ಕಾರಕ್ಕೆ ಇವರ ಬಳಿ ಹೋಗಲು ಆಗದೆ, ಚುನಾವಣೆ ಬಂದ ತಕ್ಷಣ ವಿರಾಟ ಸಮಾವೇಶ ನಡೆಸುತ್ತಾರೆ. ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದಾರೆ. ರೈತರ ಸಾವಿಗೆ ಸರ್ಕಾರ ಸ್ಪಂದಿಸದೆ ಹೋದರೆ ರೈತರ ಶಾಪ ತಟ್ಟುತ್ತದೆ, ದಯವಿಟ್ಟು ರೈತರ ಬಗ್ಗೆ ಗಮನ ಹರಿಸಿ ಎಂದು ಮನವಿ ಮಾಡಿದರು.

ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ನಾವೆಲ್ಲಾ ಒಂದಾಗಿದ್ದೇವೆ. ನಮ್ಮಲ್ಲಿ ಗೊಂದಲ ಇರುವುದು ಐಟಿ, ಸಿಬಿಐನದು. ಭೂತಕೋಲ ನಡೆಸುವವರಿಗೆ ಮಾಸಾಶನ ನೀಡುವ ಸರ್ಕಾರ ನಮ್ಮಲ್ಲಿ ಅನೇಕ ದೇವರುಗಳು ಇವೇ ಅವರಿಗೂ ಮಾಸಾಶನ ನೀಡಿ ಎಂದು ಒತ್ತಾಯಿಸಿದರು. ಬಿಜೆಪಿಯವರಿಗೆ ದಕ್ಷಿಣ ಕನ್ನಡದವರು ಮಾತ್ರ ವೋಟ್ ಹಾಕಿರುವುದಾ ಎಂದು ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದರು.

ಇದನ್ನೂ ಓದಿ:ಸಮ್ಮೆದ್ ಶಿಖರ್ಜಿ ಪ್ರದೇಶ ಪ್ರವಾಸಿತಾಣಕ್ಕೆ ಜೈನ್ ಸಮಾಜ ವಿರೋಧ: ಪ್ರತಿಭಟನೆ

ABOUT THE AUTHOR

...view details