ಕರ್ನಾಟಕ

karnataka

ಯುಪಿಎ ಸರ್ಕಾರದ ಸಾಲ ತೀರಿಸೋಕೆ ತೈಲ ಬೆಲೆ ಏರಿಕೆಯಾಗ್ತಿದೆ: ನಟಿ ತಾರಾ

By

Published : Oct 7, 2021, 9:32 PM IST

ಇಂದು ನಟಿ ತಾರಾ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ತೈಲ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು.

Actress Tara
ತಾರಾ

ಶಿವಮೊಗ್ಗ:ಈ ಹಿಂದೆ ಯುಪಿಎ ಸರ್ಕಾರ ಮಾಡಿದ ಸಾಲದ ಮೊತ್ತವನ್ನು ತೀರಿಸೋಕೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಗುತ್ತಿದೆ ಎಂದು ನಟಿ ಹಾಗೂ ಅರಣ್ಯ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ ಹೇಳಿದ್ದಾರೆ.

ನಟಿ ಹಾಗೂ ಅರಣ್ಯ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲಗಳ ಬೆಲೆ ಏರಿಕೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಯುಪಿಎ ಸರ್ಕಾರ ಮಾಡಿರುವ ಅನಾಚಾರಗಳನ್ನು ಮುಚ್ಚಬೇಕು ಅಂದರೆ ಬೆಲೆ ಏರಿಕೆ ಮಾಡಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ಅಭಾವ ಹೆಚ್ಚಾಗಿರುವುದರಿಂದ ತೈಲ ಬೆಲೆ ಹೆಚ್ಚಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.

ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಸರಿ ಹೋಗುತ್ತದೆ ಎಂಬ ಭರವಸೆ ಇದೆ. ಇದೇ ವೇಳೆ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯವನ್ನೂ ಅವರು ಕೋರಿದರು.

ಇದನ್ನೂ ಓದಿ: Live Video: ಬೆಂಗಳೂರಿನಲ್ಲಿ ಮತ್ತೊಂದು ಅವಘಡ.. ಐದು ಅಂತಸ್ತಿನ ಅಪಾರ್ಟ್​ಮೆಂಟ್​​ ಕುಸಿತ

ABOUT THE AUTHOR

...view details